Home ನಮ್ಮ ಜಿಲ್ಲೆ ಬೆಂಗಳೂರು- ಮೈಸೂರು ಟೋಲ್ ಜನಸಾಮಾನ್ಯರದ್ದಲ್ಲ, ಡಿ.ಕೆ.ಶಿ ರಾಜಕಾರಣ: ಸಿಎಂ ಬೊಮ್ಮಾಯಿ

ಬೆಂಗಳೂರು- ಮೈಸೂರು ಟೋಲ್ ಜನಸಾಮಾನ್ಯರದ್ದಲ್ಲ, ಡಿ.ಕೆ.ಶಿ ರಾಜಕಾರಣ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ತಕರಾರು ಜನಸಾಮಾನ್ಯರದ್ದಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡುತ್ತಿದ್ದಾರೆ. ಅವರು ಬಳಸುವ ಭಾಷೆ, ನಡೆದುಕೊಂಡ ರೀತಿ ಯಾವುದೇ ಕನ್ನಡಿಗರಿಗೆ ಶೋಭೆ ತರುವಂಥದ್ದಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರೀಯ ಹೆದ್ದಾರಿ ಬರುವ ಮುನ್ನವೂ ಟೋಲ್ ಸಂಗ್ರಹವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬಹಳಷ್ಟು ಸೇವೆಗಳು ಸರ್ವಿಸ್ ರಸ್ತೆಯಲ್ಲಿಯೇ ಇದೆ. ಅಲ್ಲೆಲ್ಲೂ ಟೋಲ್ ಇಲ್ಲ. ವಿನಾ ಕಾರಣ ರಾಜಕಾರಣವಾಗುತ್ತಿದೆ ಎಂದರು.

Exit mobile version