Home ನಮ್ಮ ಜಿಲ್ಲೆ ಉತ್ತರ ಕನ್ನಡ ಬಾವಿಯಲ್ಲಿ ಬಿದ್ದ ಗೂಳಿಯ ರಕ್ಷಣೆ

ಬಾವಿಯಲ್ಲಿ ಬಿದ್ದ ಗೂಳಿಯ ರಕ್ಷಣೆ

0

ಹೊನ್ನಾವರ: ಆಹಾರ ಹುಡುಕುತ್ತಾ ತೆರಳಿದಾಗ ಆಕಸ್ಮಿಕವಾಗಿ ಚಿಕ್ಕನಕೋಡ ಸಮೀಪ ತೆರೆದ ಬಾವಿಯಲ್ಲಿ ಗೂಳಿ ಬಿದ್ದು ಒದ್ದಾಡುತ್ತಿತ್ತು. ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಾರ್ವಜನಿಕರ ಸಹಕಾರದ ಮೇರೆಗೆ ಸುರಕ್ಷತಾ ಸಲಕರಣೆ ಮೂಲಕ ಮೇಲಕ್ಕೆ ಎತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಜಯಾನಂದ ಎನ್. ಪಟಗಾರ ಹಾಗೂ ಸಿಬ್ಬಂದಿಗಳಾದ, ನಾಗೇಶ ಪೂಜಾರಿ, ಗಜಾನನ ನಾಯ್ಕ, ರಮೇಶ ಚಿಕ್ಕಲಗಿ, ವೆಂಕಟೇಶ ನಾಯ್ಕ, ಲೋಕೇಶ ನಾಯ್ಕ, ಮಂಜುನಾಥ ಪಟಗಾರ, ದೀಪಕ ಅಂಕೋಲೆಕರ್, ಕಿರಣ ಅಗ್ಲೋಳೆ, ಅಭಿಷೇಕ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

Exit mobile version