Home ತಾಜಾ ಸುದ್ದಿ ಬಸವ ಸಾಗರ ಜಲಾಶಯದಿಂದ 30 ಗೇಟುಗಳ ಮೂಲಕ ಕೃಷ್ಣಾ ನದಿ ಪಾತ್ರಕ್ಕೆ ಅಪಾರ ನೀರು

ಬಸವ ಸಾಗರ ಜಲಾಶಯದಿಂದ 30 ಗೇಟುಗಳ ಮೂಲಕ ಕೃಷ್ಣಾ ನದಿ ಪಾತ್ರಕ್ಕೆ ಅಪಾರ ನೀರು

0

ನಾರಾಯಣಪುರ(ಯಾದಗಿರಿ): ಸತತ ಎರಡು ದಿನಗಳಿಂದ ಇಲ್ಲಿ ಬಸವ ಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಿರುವುದರಿಂದ ಇಂದು ಜಲಾಶಯದ ಎಲ್ಲಾ 30 ಗೇಟುಗಳ ಮೂಲಕ ಅಪಾರ ಪ್ರಮಾಣದ ನೀರು ಕೃಷ್ಣಾ ನದಿ ಪಾತ್ರಕ್ಕೆ ಬಿಡಲಾಗುತ್ತಿತ್ತು. ಆದರೆ ಇಂದು ಮದ್ಯಾಹ್ನ ಮೂರುವರೆ ಗಂಟೆಯಿಂದ ಜಲಾಶಯಕ್ಕೆ ಒಳ ಹರಿವು ತಗ್ಗುತ್ತಲಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಜಲಾಶಯದ ಮೂವತ್ತೂ ಗೇಟುಗಳಿಂದ 1,60,000 ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗುತ್ತಲಿದೆ. ಜಲಾಶಯಕ್ಕೆ 1,67,000 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ನಿರ್ಧಿಷ್ಟ ಮಟ್ಟ ಕಾಯ್ದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಾಶಯ ನೋಡಲು ಜನಜಾತ್ರೆ
ಭೋರ್ಗರೆಯುವ ಬಸವಸಾಗರ ಜಲಾಶಯ ನೋಡಲು ಜನ ಜಾತ್ರೆ ಆಗುತ್ತಲಿದೆ, ಪ್ರವಾಸಿಗರು ಜಲಾಶಯದ ಮುಂಭಾಗದ ಬ್ರಿಜ್ ಮೇಲೆ ನಿಂತು ತುಂಬಿ ಹರಿಯುವುತ್ತಿರುವ ಪ್ರವಾಹ ವೀಕ್ಷಿಸಲು ಹಾಗು ಸೆಲ್ಫಿ ತೆಗೆಯಲು ಮುಗಿಬೀಳುವ ದೃಶ್ಯ ಸಾಮನ್ಯವಾಗಿ ಕಂಡು ಬರುತ್ತಿದೆ. ಪ್ರಸ್ತುತ ಜಲಾಶಯ ಮಟ್ಟ 490.68 ಮೀಟರ್ ಮಟ್ಟ. (492.250 ಗರಿಷ್ಠ ಮಟ್ಟ )26.58 TMC ಪ್ರಸ್ತುತ ಜಲಾಶಯದಲ್ಲಿ ಸಂಗ್ರಹವಾದ ನೀರು. ( 33.31 ಗರಿಷ್ಟ ಟಿ ಎಮ್ ಸಿ ಜಲಾಶಯದ ಸಂಗ್ರಹ ಗಾತ್ರ 

Exit mobile version