Home ನಮ್ಮ ಜಿಲ್ಲೆ ಪ್ರಧಾನಿ ಮುಂದೆ ಸಿಎಂ ನಾಯಿಯಂತೆ ಇರುತ್ತಾರೆ: ಸಿದ್ದರಾಮಯ್ಯ

ಪ್ರಧಾನಿ ಮುಂದೆ ಸಿಎಂ ನಾಯಿಯಂತೆ ಇರುತ್ತಾರೆ: ಸಿದ್ದರಾಮಯ್ಯ

0

ವಿಜಯನಗರ(ಹಗರಿಬೊಮ್ಮನಹಳ್ಳಿ): ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚು ಹೆಚ್ಚು ಅನುದಾನ ತರುವ ಮೂಲಕ ಅಭಿವೃದ್ಧಿ ಮಾಡಿದ್ದೇವೆ.
ಆದರೆ ಇಂದಿನ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ಅನುದಾನ ತರಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಂದೆ ನಾಯಿಯಂತೆ ಇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ಕಾಂಗ್ರೆಸ್‌ನವರ ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಅನುದಾನವನ್ನು ಕೇಳುವ ತಾಕತ್ತು ಇಲ್ಲ. ಅವರ ಮುಂದೆ ನಾಯಿಯಂತೆ ನಿಂತಿರುತ್ತಾರೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ. ಇದನ್ನು ಕೇಳುವ ದಮ್ಮು ಇವರಿಗಿಲ್ಲವೆಂದು ಮುಖ್ಯಮಂತ್ರಿಗಳ ವಿರುದ್ಧ ಕಿಡಿಕಾರಿದರು.

Exit mobile version