Home ನಮ್ಮ ಜಿಲ್ಲೆ ನಾಳೆಯಿಂದ ರಾಜ್ಯದ ಹಿರಿಯ ನಾಗರಿಕರ ಮತದಾನ

ನಾಳೆಯಿಂದ ರಾಜ್ಯದ ಹಿರಿಯ ನಾಗರಿಕರ ಮತದಾನ

0

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಮೇ 10ರ ದಿನಾಂಕ ನಿಗದಿ ಮಾಡಲಾಗಿದೆ. ಆದರೆ, ಹಿರಿಯ ನಾಗರಿಕರು ಹಾಗೂ ಅಂಗವಿಕಲರು ನಾಳೆಯಿಂದಲೇ ಮತದಾನ ಮಾಡಲಿದ್ದಾರೆ.
ಚುನಾವಣಾ ಅಯೋಗದ ಸಿಬ್ಬಂದಿಗಳಿಂದ 80 ವರ್ಷ ಮೇಲ್ಪಟ್ಟ ವೃದ್ಧರ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಗೌಪ್ಯ ಮತ ಚಾಲಯಿಸುವಗ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಸ್ಥಳದಲ್ಲಿ ಹಾಜರಿರುತ್ತಾರೆ. ಏ.29ರಿಂದ ಮೇ 6ರವರೆಗೆ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ. ಮನೆಯಲ್ಲೇ ಮತದಾನ ಮಾಡುವಗ ವಿಡಿಯೋ ರೇಕಾರ್ಡಿಂಗ್ ಮಾಡಿಕೊಳ್ಳಲಾಗುವುದು ಮತದಾನದ ನಂತರ ಸ್ಟ್ರಾಂಗ್ ರೂಮ್‌ಗೆ ಮತ ಪೆಟ್ಟಿಗೆಯನ್ನು ರವಾನಿಸಲಾಗುವುದು. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಏಣಿಕೆ ದಿನ ಓಪನ್ ಮಾಡಲಾಗುವುದು ಎಂದಿದ್ದಾರೆ.

Exit mobile version