Home ನಮ್ಮ ಜಿಲ್ಲೆ ನವೆಂಬರ್ 20 ರಂದು ಬಳ್ಳಾರಿಯಲ್ಲಿ ಎಸ್.ಸ್ಟಿ ಮೋರ್ಚಾ ಸಮಾವೇಶ

ನವೆಂಬರ್ 20 ರಂದು ಬಳ್ಳಾರಿಯಲ್ಲಿ ಎಸ್.ಸ್ಟಿ ಮೋರ್ಚಾ ಸಮಾವೇಶ

0
b bomai

ಬೆಂಗಳೂರು: ನವೆಂಬರ್ 06: ಇದೇ ನವೆಂಬರ್ 20 ರಂದು ಬಳ್ಳಾರಿಯಲ್ಲಿ ಎಸ್.ಟಿ ಮೋರ್ಚಾ ಸಮಾವೇಶ ಹಾಗೂ ನ. 30 ರಂದು ಮೈಸೂರಿನಲ್ಲಿ
ಎಸ್.ಸಿ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ನಾಳೆಯಿಂದ ಜನಸಂಕಲ್ಪ ಯಾತ್ರೆ ಪುನಃ ಪ್ರಾರಂಭವಾಗಲಿದೆ. ಉಡುಪಿ, ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮೂರು ದಿನಗಳು ಸತತ ವಾಗಿ ಕಾರ್ಯಕ್ರಮಗಳಿವೆ. ಡಿಸೆಂಬರ್ ವರೆಗೆ ಜನಸಂಕಲ್ಪ ಯಾತ್ರೆ ಮುಂದುವರೆಯಲಿದೆ. ಅಭೂತಪೂರ್ವ ಬೆಂಬಲ ಎಲ್ಲೆಡೆ ದೊರೆಯುತ್ತಿದೆ. ಈ ಬಾರಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದು, ಇದು ನಮ್ಮ ಮುಂದಿನ ವಿಜಯಕ್ಕೆ ಪುಷ್ಟಿ ನೀಡುತ್ತಿದೆ ಎಂದರು.

Exit mobile version