Home News ಡಿಜೆ ಹಾಡಿಗೆ‌ ಕುಣಿದು ಕುಪ್ಪಳಿಸಿದ ಕೊಪ್ಪಳ ಯುವಕರು

ಡಿಜೆ ಹಾಡಿಗೆ‌ ಕುಣಿದು ಕುಪ್ಪಳಿಸಿದ ಕೊಪ್ಪಳ ಯುವಕರು

ಗಣೇಶೋತ್ಸವ

ಕೊಪ್ಪಳ: ನಗರದ ಈಶ್ವರ ಉದ್ಯಾನವನದಲ್ಲಿ ಹಿಂದೂ ಮಹಾ ಮಂಡಳಿಯ ವತಿಯಿಂದ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯನ್ನು ೧೧ನೇ ದಿನವಾದ ಶನಿವಾರ ವಿಸರ್ಜನಾ ಮೆರವಣಿಗೆಯೂ ವಿಜೃಂಭಣೆಯಿಂದ ಜರುಗಿತು.
ಜಿಲ್ಲಾ ಕೇಂದ್ರದಲ್ಲಿ ವಿಸರ್ಜನೆಯಾಗುತ್ತಿರುವ ಏಕೈಕ ಗಣೇಶ ಮೂರ್ತಿ ಇದಾಗಿದ್ದು, ಯಾವುದೇ ಅವಘಡಗಳು ಸಂಭವಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಡಿಜೆ ಹಾಡಿಗೆ ಯುವಕರು ಕುಣಿದು,‌ ಕುಪ್ಪಳಿಸಿದರು. ಹಾಡಿಗೆ ತಕ್ಕಂತೆ ವಿದ್ಯುತ್ ಬಣ್ಣ ಬಣ್ಣದ ದೀಪಗಳು ಆಕರ್ಷಣೀಯವಾಗಿದ್ದವು. ನಗರದ‌ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ಸಾಗಿಬಂತು.‌‌‌ ಸಾವಿರಾರು‌ ಜನ‌ ಯುವಕರು ಮೆರವಣಿಗೆಗೆ ಸಾಕ್ಷಿಯಾಗಿದ್ದರು.

Exit mobile version