Home ನಮ್ಮ ಜಿಲ್ಲೆ ಜಿಟಿ ಜಿಟಿ ಮಳೆಗೆ ಗೋಡೆ ಕುಸಿತ: ಅಪಾಯದಿಂದ ಪಾರು

ಜಿಟಿ ಜಿಟಿ ಮಳೆಗೆ ಗೋಡೆ ಕುಸಿತ: ಅಪಾಯದಿಂದ ಪಾರು

0

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬನಹಟ್ಟಿಯ ಸೋಮವಾರ ಪೇಟೆಯ ಮಂಡಿ ಲೇನ್ ನ ರೇಣುಕಾ ಶಶಿಕಾಂತ ಗಂಜಾಳ ಎಂಬುವರ ಮನೆ ಗೋಡೆ ಕುಸಿ ಬಿದ್ದಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಗೋಡೆ ಕುಸಿದು ಬಿದ್ದಿದೆ. ಅದೃಷ್ಠವಶಾತ ಯಾವುದೇ ಹಾನಿಯಾಗಿಲ್ಲ. ಪ್ರತಿ ದಿನ ಸತತ ತುಂತುರು ಮಳೆ ಬೀಳುತ್ತಿರುವುದು, ಮನೆ ಮೇಲ್ಛಾವಣಿಗಳು ಹಾಗು ಗೋಡೆಗಳು ನೆಲಕ್ಕುರುಳುವವೋ ಎಂಬ ಆತಂಕದಲ್ಲಿ ಜನ ಜೀವನ ಸಾಗಿಸುವಂತಾಗಿದೆ.

Exit mobile version