Home ನಮ್ಮ ಜಿಲ್ಲೆ ಧಾರವಾಡ ಗೋಲ್‌ಗುಂಬಜ್ ಎಕ್ಸಪ್ರೆಸ್ ರೈಲು ಸೇವೆ ಪಂಢರಪುರದವರೆಗೆ ವಿಸ್ತರಣೆ

ಗೋಲ್‌ಗುಂಬಜ್ ಎಕ್ಸಪ್ರೆಸ್ ರೈಲು ಸೇವೆ ಪಂಢರಪುರದವರೆಗೆ ವಿಸ್ತರಣೆ

0

ಹುಬ್ಬಳ್ಳಿ: ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿರುವ ರೈಲುಗಳ ಸಂಖ್ಯೆ ೧೬೫೩೫/೧೬೫೩೬ ಮೈಸೂರು-ಸೋಲಾಪುರ-ಮೈಸೂರು ಗೋಲ್ ಗುಂಬಜ್ ಎಕ್ಸಪ್ರೆಸ್ ರೈಲುಗಳನ್ನು ಪಂಢರಪುರ ನಿಲ್ದಾಣದವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.
ಸೆಪ್ಟೆಂಬರ್ ೪ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ ೧೬೫೩೫ ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಮೈಸೂರು ನಿಲ್ದಾಣದಿಂದ ಮಧ್ಯಾಹ್ನ ೦೩:೪೫ ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ ೧೨:೨೫ ಗಂಟೆಗೆ ಪಂಢರಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲಿನ ನಿಲುಗಡೆ/ವೇಳಾಪಟ್ಟಿಯೂ ಬಸವನ ಬಾಗೇವಾಡಿ ರೋಡ್ ನಿಲ್ದಾಣದವರೆಗೆ ಯಾವುದೇ ಬದಲಾವಣೆ ಇರುವುದಿಲ್ಲ. ಈ ರೈಲು ವಿಜಯಪುರ ೦೭:೫೫/೦೮ ಕ್ಕೆ, ಇಂಡಿ ರೋಡ್ -೦೮:೪೧/೦೮:೪೨, ಸೋಲಾಪುರ ೧೦:೧೫/೧೦:೨ ಕ್ಕೆ ಮತ್ತು ಕುರ್ದುವಾಡಿ -೧೧:೨೫/೧೧:೨೭ ಕ್ಕೆ ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ ಸೆಪ್ಟೆಂಬರ್ ೫ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ ೧೬೫೩೬ ಪಂಢರಪುರ-ಮೈಸೂರು ಗೋಲುಗುಂಬಜ್ ಎಕ್ಸಪ್ರೆಸ್ ರೈಲು ಪಂಢರಪುರದಿಂದ ಮಧ್ಯಾಹ್ನ ೧ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ ೧೦:೪೫ ಗಂಟೆಗೆ ಮೈಸೂರು ನಿಲ್ದಾಣವನ್ನು ತಲುಪಲಿದೆ.
ಈ ರೈಲು ಮಾರ್ಗದಲ್ಲಿ ಕುರ್ದುವಾಡಿ, ಸೋಲಾಪುರ, ಇಂಡಿ ರೋಡ್, ವಿಜಯಪುರ, ಬಸವನ ಬಾಗೇವಾಡಿ, ಆಲಮಟ್ಟಿ, ಬಾಗಲಕೋಟ, ಗುಳೇದಗುಡ್ಡ ರೋಡ್, ಬಾದಾಮಿ, ಹೊಳೆ ಆಲೂರು, ಗದಗ, ಅಣ್ಣಿಗೇರಿ ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಹುಬ್ಬಳ್ಳಿ ನಿಲ್ದಾಣದಿಂದ ಮೈಸೂರು ನಿಲ್ದಾಣಗಳವರೆಗಿನ ಈ ರೈಲಿನ ವೇಳಾಪಟ್ಟಿ ಮತ್ತು ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Exit mobile version