Home ನಮ್ಮ ಜಿಲ್ಲೆ ಕೌಟುಂಬಿಕ ಕಲಹ : ಇಬ್ಬರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ

ಕೌಟುಂಬಿಕ ಕಲಹ : ಇಬ್ಬರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ

0

ಬೀದರ್ : ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹುಮನಾಬಾದ ತಾಲೂಕಿನ ಧುಮ್ಮನಸೂರ್ ಹೊರವಲಯದಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಆಟೋ ಚಾಲಕ ಅಂಕುಶ್ ಹುಚ್ಚೇನೂರ್ (28), ಮಗಳು ತನು (6), ಮಗ ಸಾಯಿರಾಜ್ (5) ಮೃತಪಟ್ಟವರು. ಮಕ್ಕಳೊಂದಿಗೆ ತಂದೆ ಧುಮ್ಮನಸೂರ್ ಹೊರವಲಯದ ಸೇಡೋಳ ರಸ್ತೆಯಲ್ಲಿರುವ ಹೊಲದ‌‌ ಭಾವಿಗೆ ಬುಧವಾರ ತಡರಾತ್ರಿ ‌ಬಿದ್ದಿರುವ ಶಂಕೆ‌ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Exit mobile version