Home ನಮ್ಮ ಜಿಲ್ಲೆ ಕಲಬುರಗಿ ಕೈ ತಪ್ಪಿದ ಟಿಕೆಟ್​​: ರಾಜೀನಾಮೆ ನೀಡಿದ ದೊಡ್ಡಪ್ಪಗೌಡ ಪಾಟೀಲ್

ಕೈ ತಪ್ಪಿದ ಟಿಕೆಟ್​​: ರಾಜೀನಾಮೆ ನೀಡಿದ ದೊಡ್ಡಪ್ಪಗೌಡ ಪಾಟೀಲ್

0

ಕಲಬುರಗಿ:  ದೊಡ್ಡಪ್ಪ ಗೌಡ ಪಾಟೀಲ ನರಿಬೋಳ ಜೇವರ್ಗಿ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಬುಧುವಾರ ರಾಜೀನಾಮೆ ಸಲ್ಲಿಸಿದ್ದು, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಸೋಲಿಸಿದ ಇತಿಹಾಸ ಹೊಂದಿರುವ ಅವರು
ನಗರದ ಬೂತಪುರ ಕಲ್ಯಾಣ ಮಂಟಪದಲ್ಲಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಸಭೆ ಕರೆದು ತಾಲೂಕಿನ ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
ನಾನು ಯಾರಿಗೂ ಮೋಸ ಕಳ್ಳತನ ಮತ್ತು ಲೂಟಿ ಮಾಡಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಜನರ ಕೆಲಸ ಮಾಡಿದ್ದೇನೆ. ಹೊಟ್ಟೆಕಿಚ್ಚಿನಿಂದ ಕೆಲವರು ಟಿಕೆಟ್ ತಪ್ಪಿಸಿದ್ದಾರೆ. ಈ ಕಾರಣಕ್ಕೆ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

Exit mobile version