Home ತಾಜಾ ಸುದ್ದಿ ಕೃಷ್ಣಾಷ್ಟಮಿಗೆ 88 ಬಗೆಯ ಖಾದ್ಯ

ಕೃಷ್ಣಾಷ್ಟಮಿಗೆ 88 ಬಗೆಯ ಖಾದ್ಯ

0

ಮಂಗಳೂರು: ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿರುವ ಡಾ. ಪದ್ಮನಾಭ್ ಕಾಮತ್ ಅವರು ಜನ್ಮಾಷ್ಟಮಿಯ ದಿನ ತಮ್ಮ ರೋಗಿಯೊಬ್ಬರು ತಯಾರಿಸಿದ ತಿಂಡಿ ತಿನಿಸಿನ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ.
ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ 88 ಖಾದ್ಯಗಳನ್ನು ಬಡಿಸಿದವರ ಫೋಟೋವನ್ನು ಟ್ವಿಟರ್‌ನಲ್ಲಿ ಡಾ. ಕಾಮತ್ ಹಂಚಿಕೊಂಡಿದ್ದಾರೆ.
“ಅವರ ಮತ್ತು ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರ ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವವರು ಈ ಹಿಂದಿನ ಅವರ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆ ಅವರು ಸೆ. 7ರ ರಾತ್ರಿ 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ” ಎಂದು ಫೋಟೋವನ್ನು ಹಾಕಿ ಡಾ. ಕಾಮತ್ ಬರೆದುಕೊಂಡಿದ್ದಾರೆ.

Exit mobile version