Home ನಮ್ಮ ಜಿಲ್ಲೆ ಕೊಪ್ಪಳ ಊಟಕ್ಕೆ ಹೋದರೆ ವಿಶೇಷ ಅರ್ಥ ಕಲ್ಪಿಸದಿರಿ

ಊಟಕ್ಕೆ ಹೋದರೆ ವಿಶೇಷ ಅರ್ಥ ಕಲ್ಪಿಸದಿರಿ

0

ಕೊಪ್ಪಳ: ಊಟಕ್ಕೆ ಹೋಗಿದ್ದಕ್ಕೆ ರಾಜಕೀಯವಾಗಿ ವಿಶೇಷ ಅರ್ಥಕಲ್ಪಿಸುವುದು ಅಗತ್ಯವಿಲ್ಲ. ಅದು ಊಟದ ಕಾರ್ಯಕ್ರಮ ಮಾತ್ರವಾಗಿದ್ದು, ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಚರ್ಚೆ ಮಾಡಲು ಪಕ್ಷದ ಕಚೇರಿ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಗೃಹ ಸಚಿವ ಜಿ.ಪರಮೇಶ್ವರ ಮನೆಗೆ ಭೇಟಿ ನೀಡಿದ ಕುರಿತು ಅವರು ಪ್ರತಿಕ್ರಿಯಿಸಿದರು.
ಜಿ.ಪರಮೇಶ್ವರ ಅವರ ಮನೆಗೆ ಊಟಕ್ಕೆ ಹೋದಾಗ ಕಾಂಗ್ರೆಸ್ ಪಕ್ಷದ ಬಲವರ್ಧನೆ ಕುರಿತು ಚರ್ಚೆ ಮಾಡಲಾಗಿದೆ. ಆದರೆ ಪಕ್ಷಕ್ಕೆ ಹಾನಿಯಾಗುವ ವಿಷಯಗಳ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಹಾಗೂ ಮಾಜಿ ಶಾಸಕ ಮಿತ್ರರೊಂದಿಗೆ ನಾನು ಪ್ರವಾಸಕ್ಕೆ ಹೋಗುವುದು ಸಾಮಾನ್ಯ. ಈಗ ಹಾಲಿ ಶಾಸಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋದರೆ ದೊಡ್ಡ ಸುದ್ದಿಯಾಗುತ್ತದೆ. ಹಾಗಾಗಿ ಕೆಲ ಮಾಜಿ ಶಾಸಕರನ್ನು ದುಬೈಗೆ ಕರೆದುಕೊಂಡು ಹೋಗುತ್ತೇನೆ ಎಂದು ಮೈಸೂರು ಪ್ರವಾಸ ರದ್ದಾದ ಬಳಿಕ ದುಬೈ ಪ್ರವಾಸಕ್ಕೆ ಹೋಗುತ್ತಿರುವ ಪ್ರಶ್ನೆಗೆ ಉತ್ತರಿಸಿದರು.
ಎರಡೂವರೆ ವರ್ಷದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ಹೈಕಮಾಂಡ್‌ ತೀರ್ಮಾನಿಸುತ್ತದೆ. ಅಲ್ಲದೇ ನನ್ನ ಹಾಗೂ ಶಿವಕುಮಾರ್ ನಡುವೆ ಯಾವುದೇ ಮುನಿಸು ಇಲ್ಲ ಎಂದು ತಿಳಿಸಿದರು.

Exit mobile version