Home ನಮ್ಮ ಜಿಲ್ಲೆ ಉದ್ಯೋಗ ಸಿಗದೆ ಮನನೊಂದು ಆತ್ಮಹತ್ಯೆ

ಉದ್ಯೋಗ ಸಿಗದೆ ಮನನೊಂದು ಆತ್ಮಹತ್ಯೆ

0

ಕುಂದಾಪುರ: ಸ್ನಾತಕೋತ್ತರ ಪದವಿ ಮುಗಿದರೂ ಉದ್ಯೋಗ ಸಿಗದ ಕಾರಣ ಖಿನ್ನತೆಗೆ ಒಳಗಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರಿನಲ್ಲಿ ನಡೆದಿದೆ.
ಕಾಲ್ತೋಡು ಗ್ರಾಮದ ಗೌತಮಿ (೨೨) ಆತ್ಮಹತ್ಯೆಗೆ ಶರಣಾದ ಯುವತಿ. ಉಡುಪಿಯ ಖಾಸಗಿ ಕಾಲೇಜಿನಲ್ಲಿ ಎಂ.ಕಾಮ್. ಮುಗಿಸಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಹಾಗೂ ಇತರೆ ಕಂಪನಿ ನೇಮಕಾತಿಗೆ ಬರೆದಿದ್ದರೂ ಗೌತಮಿಗೆ ಪ್ಲೇಸ್ ಮೆಂಟ್ ಸಿಕ್ಕಿರಲಿಲ್ಲ. ಇದರಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಮನೆಯ ಮೊದಲ ಮಹಡಿಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.
ನೇಣಿನ ಕುಣಿಕೆ ತೆಗೆದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರುವಷ್ಟರಲ್ಲಿ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version