Home ನಮ್ಮ ಜಿಲ್ಲೆ ಉತ್ತರದಲ್ಲಿ ಬಿಜೆಪಿ ಆಯ್ಕೆ ಸಮಿತಿಗೆ ನಿಷೇಧ: ಸ್ವಪಕ್ಷೀಯರಿಂದಲೇ ಹೆಚ್ಚುತ್ತಿರುವ ವಿರೋಧ

ಉತ್ತರದಲ್ಲಿ ಬಿಜೆಪಿ ಆಯ್ಕೆ ಸಮಿತಿಗೆ ನಿಷೇಧ: ಸ್ವಪಕ್ಷೀಯರಿಂದಲೇ ಹೆಚ್ಚುತ್ತಿರುವ ವಿರೋಧ

0

ಬೆಳಗಾವಿ: ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಆಯ್ಕೆ ಸಮಿತಿ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದೆ, ಬೆಳಗಾವಿ ಉತ್ತರ ಕ್ಷೇತ್ರದಾದ್ಯಂತ ಹಾಲಿ ಶಾಸಕ ಅನಿಲ ಬೆನಕೆ ಬೆಂಗಲಿಗರು ಅಲ್ಲಲ್ಲಿ ಯುವಕ ಮಂಡಲಗಳ ಫಲಕದಲ್ಲಿ ನಿಷೇಧ ಬರಹಗಳನ್ನು ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಿದ ಸಮಿತಿಗೆ ನಮ್ಮ ನಿಷೇಧ ಎನ್ನುವ ಬರಹ ಎಲ್ಲೆಡೆ ರಾರಾಜಿಸುತ್ತಿದೆ. ಜಾಧವ ನಗರದ ಏಕದಂತ ಯುವಕ ಮಂಡಳ ಮತ್ತು ಚವಾಟಗಲ್ಲಿಯಲ್ಲಿರುವ ಫಲಕದಲ್ಲಿ ಈ ರೀತಿಯ ಆಕ್ರೋಶ ಭರಿತ ಫಲಕಗಳು ಎದ್ದು ಕಾಣುತ್ತಿವೆ.

Exit mobile version