Home ನಮ್ಮ ಜಿಲ್ಲೆ ಉತ್ತರ ಕನ್ನಡ ಅಪರೂಪದ ಬಿಳಿ ಹೆಬ್ಬಾವು ರಕ್ಷಣೆ

ಅಪರೂಪದ ಬಿಳಿ ಹೆಬ್ಬಾವು ರಕ್ಷಣೆ

0

ಕುಮಟಾ: ತಾಲೂಕಿನ ಹೆಗಡೆ ಗ್ರಾಮದಲ್ಲಿ ಗಾಂಧಿ ನಗರದ ಮನೆಯ ಅಂಗಳದಲ್ಲಿ ಕಂಡುಬಂದ ಅಪರೂಪದ ಬಿಳಿ ಹೆಬ್ಬಾವನ್ನು ಉರಗ ರಕ್ಷಕ ಪವನ್ ನಾಯ್ಕ ಸೋಮವಾರ ರಕ್ಷಿಸಿದರು.
ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿತ್ತು. ಈ ಮನೆಯ ಸಮೀಪದ ಮನೆಯ ಆರ್.ಟಿ.ಓ ಕಚೇರಿಯ ಹೋಮ್ ಗಾರ್ಡ್ ಗಣೇಶ ಮುಕ್ರಿಯವರ ಕರೆಯ ಮೇರೆಗೆ ಪವನ್ ನಾಯ್ಕ ರಾತ್ರಿ ೧೨ ಗಂಟೆಗೆ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ.
ಕಳೆದ ವರ್ಷ ತಾಲೂಕಿನ ಮಿರ್ಜಾನಲ್ಲಿ ಕಾಣಿಸಿದ್ದ ಸಣ್ಣ ಗಾತ್ರದ ಹೆಬ್ಬಾವನ್ನು ರಾತ್ರೆ ಸಮಯದಲ್ಲಿ ಇದೇ ಪವನ ನಾಯ್ಕ ರಕ್ಷಣೆ ಮಾಡಿದ್ದು ಎಲ್ಲೆಡೆ ವೈರಲ್ ಆಗಿತ್ತು. ಸೋಮವಾರ ರಕ್ಷಿಸಿದರು ಹೆಬ್ಬಾವು ಸುಮಾರು ೯ ಅಡಿ ಉದ್ದವಿದೆ. ಇಂತಹ ಹೆಬ್ಬಾವು ಕರ್ನಾಟಕದಲ್ಲಿ ಮೂರನೇ ಬಾರಿ ರಕ್ಷಿಸಲ್ಪಟ್ಟಿದೆ ಎನ್ನಲಾಗುತ್ತಿದ್ದು, ಅದರಲ್ಲಿ ಎರಡು ಬಾರಿ ಕುಮಟಾದಲ್ಲೇ ರಕ್ಷಣೆಯಾಗಿದೆ ಎಂಬುದು ವಿಶೇಷ.

Exit mobile version