Home ಅಪರಾಧ ಸಿಡಿಲು ಬಡಿದು ಯುವಕರಿಬ್ಬರ ಸಾವು

ಸಿಡಿಲು ಬಡಿದು ಯುವಕರಿಬ್ಬರ ಸಾವು

0

ಗದಗ: ಸಿಡಿಲು ಬಡಿದು ಇಬ್ಬರು ಕುರಿಗಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ತಾಲೂಕು ಲಿಂಗದಾಳ ಗ್ರಾಮದಲ್ಲಿ ಜರುಗಿದೆ.
ಸಿಡಿಲಿನಿಂದ ಸಾವನ್ನಪ್ಪಿದ ಯುವಕರನ್ನು ಶರಣರಪ್ಪ(20), ದೇವೇಂದ್ರಪ್ಪ(16) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿರುವ ಸುನೀಲ ಎಂಬ ಯುವಕನನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ನೂರಾರು ಕುರಿಗಳು ಸಾವನ್ನಪ್ಪಿವೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version