Home ಅಪರಾಧ ಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೀರೆ ಪೊಲೀಸ್ ವಶಕ್ಕೆ

ಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೀರೆ ಪೊಲೀಸ್ ವಶಕ್ಕೆ

0

ಚಿಕ್ಕಮಗಳೂರು: ಮತದಾರರಿಗೆ ಹಂಚಲು ಖಾಸಗಿ ಕೊರಿಯರ್ ಸಂಸ್ಥೆಯ ಮೂಲಕ ತರಿಸಿದ್ದ ಲಕ್ಷಾಂತರ ಬೆಲೆಬಾಳುವ ಸಾವಿರಾರು ಸೀರೆಗಳು ಪೊಲೀಸರು ವಶಪಡಿಸಿಕೊಂಡಿದ್ದಾರೆ‌.
ಚಿಕ್ಕಮಗಳೂರಿನ ಜಯನಗರದಲ್ಲಿರುವ ಖಾಸಗಿ ಗೋದಾಮಿನ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ.
ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿ ತರಿಸಿದ್ದ ಲಕ್ಷಾಂತರ ಮೌಲ್ಯದ ಸೀರೆಗಳನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಂದನ್ ಕುಮಾರ್ ಜೈನ್ ಹೆಸರಿನಲ್ಲಿ ಸೀರೆಗಳು ಬಂದಿದ್ದು, ಸೂರತ್ ನ ಸ್ಯಾರಿ ಫ್ಯಾಕ್ಟರಿಯಿಂದ‌ ತರಿಸಲಾಗಿದೆ.
ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version