Home ಅಪರಾಧ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ

ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ

0

ಕುಷ್ಟಗಿ: ತಾಲೂಕಿನ ಗುಡ್ಡದ ದೇವಲಾಪುರ ಕ್ರಾಸ್ ಬಳಿ ಇರುವ ಬಸ್ ನಿಲ್ದಾಣದ ಹಿಂಭಾಗದಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗುಡ್ಡದ ದೇವಲಾಪೂರ ಬಸ್ ನಿಲ್ದಾಣದ ಹಿಂಭಾಗದ ಕಸದಲ್ಲಿ ಮೃತ ಶಿಶುವನ್ನು ಹಾಕಿ ಹೋಗಿದ್ದು ಬೆಳಿಗ್ಗೆ ಕಂಡು ಬಂದಿದೆ. ಹೆತ್ತವರೇ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಹನಮಸಾಗರ ಠಾಣಾ ಪಿಎಸ್ಐ ಅಶೋಕ್ ಬೇವೂರು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version