Home ಅಪರಾಧ ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ

ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ

0

ಕಾರವಾರ: ಒಂದೇ ಕುಟುಂಬದ ಮೂವರ ಮೃತದೇಹ ಕಾರವಾರ ಹಾಗೂ ಗೋವಾ ಬಳಿ ಪತ್ತೆಯಾಗಿದ್ದು, ಹೆಂಡತಿ ಮಗನ‌ಕೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟವರನ್ನು ಗೋವಾ ಮೂಲದ ಶ್ಯಾಮ ಪಾಟೀಲ್(45), ಜ್ಯೋತಿ (38) ಇವರ ಮಗ ಧಕ್ಷ (12) ಮೃತಪಟ್ಟವರಾಗಿದ್ದಾರೆ. ಜ್ಯೋತಿ ಹಾಗೂ ಧಕ್ಷ ಅವರ ಮೃತ ದೇಹ ಕಾರವಾರದ ದೇವಭಾಗ ಬೀಚ್ ಬಳಿ ಪತ್ತೆಯಾಗಿದೆ. ಇನ್ನು ಶ್ಯಾಮ ಪಾಟೀಲ್ ಅವರ ಮೃತದೇಹ ಗೋವಾದ ಕುಕ್ಕಳ್ಳಿ ಪಾಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶ್ಯಾಮ್ ಪಾಟೀಲ್ ಶ್ಯಾಮ್ ಇಂಡಸ್ಟ್ರಿಯಲ್ ಕಂಪೆನಿ ಹೊಂದಿದ್ದು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಹೆಂಡತಿ ಮಕ್ಕಳನ್ನು ಕಾರವಾರದ ಕಾಳಿ ನದಿಯಲ್ಲಿ ದೂಡಿ ತಾನು ಗೋವಾ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ದೇವಭಾಗದ ಬಳಿ ತೆರಳಿದ ಚಿತ್ತಾಕುಲ ಪೊಲೀಸರು ಮೃತದೇಹವನ್ನು ಜಿಲ್ಲಾ ಆಸ್ಪತ್ರೆ ಶೆತ್ಯಾಗಾರಕ್ಕೆ ಸಾಗಿಸುದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version