Home ಅಪರಾಧ ಅರಿಶಿನಗುಂಡಿ ಫಾಲ್ಸ್​ನಲ್ಲಿ ಬಿದಿದ್ದ ಶರತ್‌ ಮೃತದೇಹ ಪತ್ತೆ

ಅರಿಶಿನಗುಂಡಿ ಫಾಲ್ಸ್​ನಲ್ಲಿ ಬಿದಿದ್ದ ಶರತ್‌ ಮೃತದೇಹ ಪತ್ತೆ

0

ಉಡುಪಿ: ಅರಿಶಿನಗುಂಡಿ ಫಾಲ್ಸ್​ನಲ್ಲಿ ಬಿದ್ದು ನಾಪತ್ತೆಯಾಗಿದ್ದ ಯುವಕ ಶರತ್ ಕುಮಾರ್ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಬೈಂದೂರು ತಾಲೂಕಿನ ಕೊಲ್ಲೂರು ಬಳಿಯ ಅರಿಶಿನಗುಂಡಿ ಫಾಲ್ಸ್​ ಬಳಿ ಜುಲೈ 23 ರಂದು ರೀಲ್ಸ್​ ಮಾಡಲೆಂದು ಜಲಪಾತದ ಸಮೀಪಕ್ಕೆ ತೆರಳಿದ್ದ ಶರತ್‌ ಕಾಲು ಜಾರಿ ನೀರಿಗೆ ಬಿದಿದ್ದ, ಸತತ 7 ದಿನಗಳ ಶೋಧದ ಬಳಿಕ ಇಂದು ಮೃತದೇಹ ಪತ್ತೆಯಾಗಿದೆ.
ಯುವಕ ಬಿದ್ದ ರಭಸಕ್ಕೆ ಜಲಪಾತದಿಂದ 200 ಅಡಿ ಕೆಳಗಡೆ ಬಂಡೆ ಕಲ್ಲಿನ ಒಳಗಡೆ ಸಿಲುಕಿಕೊಂಡಿದ್ದ. ಹೀಗಾಗಿ ಮೇಲಕ್ಕೆ ಬರಲಾಗದೇ ನೀರಿನಲ್ಲಿಯೇ ಮೃತಪಟ್ಟಿದ್ದಾನೆ. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ‌ ನಿರಂತರ ಕಾರ್ಯಾಚರಣೆಯಿಂದ ಕೊನೆಗೂ ಮೃತದೇಹ ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಸುಣ್ಣದ ಹಳ್ಳಿ ಕೆ.ಹೆಚ್. ನಗರ ನಿವಾಸಿ ಶರತ್(23) ಅರಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭ ಆಯತಪ್ಪಿ ಬಂಡೆಯ ಮೇಲಿಂದ ಬಿದ್ದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Exit mobile version