ವಿಶೇಷ ಸುದ್ದಿ Archives - Samyukta Karnataka

ತ್ಯಾಗ ಬಲಿದಾನದ ಸಂಕೇತ ಈದ್-ಉಲ್-ಅಧಾ
ಬಕ್ರೀದ್ ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ತ್ಯಾಗ ಮತ್ತು ಬಲಿದಾನದ ಹಬ್ಬ. ಪ್ರತಿ ವರ್ಷ ಇಸ್ಲಾಮಿಕ್ ಕ್ಯಾಲೆಂಡರನ್ನ ಕೊನೆಯ ತಿಂಗಳ ಜು-ಅಲ್-ಹಿಜ್ನಲ್ಲಿ ಆಚರಿಸಲಾಗುತ್ತದೆ. ಇದನ್ನು ಈದ್-ಉಲ್-ಅಧಾ ಹಾಗೂ ಬಕ್ರೀದ್ ಎಂದೂ ಕರೆಯುತ್ತಾರೆ. ಬಕ್ರೀದ್ ಹಬ್ಬವು ತ್ಯಾಗದ ಸಂದೇಶವನ್ನು ನೀಡುತ್ತದೆ. ಅಂದರೆ ದೇವರು ತೋರಿಸಿದ ದಾರಿಯಲ್ಲಿ ನಡೆಯಬೇಕು ಎಂಬುದನ್ನು ಸೂಚಿಸುತ್ತದೆ. ಬಕ್ರೀದ್ ಹಬ್ಬದ ಆಚರಣೆಯನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ.

ಹಜರತ್ ಇಬ್ರಾಹಿಂ ದೇವರ ಸೇವಕರಾಗಿದ್ದರು, ಅವರು ದೇವರಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದರು. ಒಮ್ಮೆ ಹಜರತ್ ಇಬ್ರಾಹಿಂ ತನ್ನ ಪ್ರಾಣಕ್ಕಿಂತ ಪ್ರೀತಿಯ ಒಬ್ಬನೇ ಮಗನನ್ನು ತ್ಯಾಗ ಮಾಡುವ ಕನಸು ಕಂಡರು. ಹಜರತ್ ಇಬ್ರಾಹಿಂ ಈ ಕನಸನ್ನು ದೇವರ ಸಂದೇಶವೆಂದು ಪರಿಗಣಿಸಿ, ಈ ಕನಸನ್ನು ಅಲ್ಲಾಹನ ಇಚ್ಛೆಯಂತೆ ಸ್ವೀಕರಿಸಿ, ದೇವರ ಮಾರ್ಗದಲ್ಲಿ ತನ್ನ 10 ವರ್ಷದ ಮಗನನ್ನು ಬಲಿಕೊಡಲು ನಿರ್ಧರಿಸಿದನು. ಅವರ ದೇವನಿಷ್ಠೆಯನ್ನು ಮೆಚ್ಚಿದ ದೇವರು ಆ ಬಲಿಯನ್ನು ತಡೆದು, ಆ ಜಾಗದಲ್ಲಿ ಕುರಿಯೊಂದನ್ನು ಬಲಿ ಕೊಡುವಂತೆ ತಿಳಿಸುತ್ತಾನೆ. ಈ ಘಟನೆಯ ಸ್ಮರಣಾರ್ಥವಾಗಿ ಪ್ರತಿ ವರ್ಷ ಬಕ್ರೀದ್ ಆಚರಿಸಲಾಗುತ್ತದೆ. ಹಬ್ಬದ ದಿನ ಮುಂಜಾನೆ ಮುಸ್ಲಿಮರು ಹೊಸ ಬಟ್ಟೆಗಳನ್ನು ಧರಿಸಿ, ಮಸೀದಿ ಅಥವಾ ಈದ್ಗಾಗಳಿಗೆ ತೆರಳಿ ವಿಶೇಷ ಪ್ರಾರ್ಥನೆ (ನಮಾಜ್) ಸಲ್ಲಿಸುತ್ತಾರೆ. ಪ್ರಾರ್ಥನೆಯ ನಂತರ, ಆರ್ಥಿಕವಾಗಿ ಶಕ್ತರಾದವರು ಕುರಿ, ಮೇಕೆ ಅಥವಾ ಒಂಟೆಯನ್ನು ಬಲಿ (ಕುರ್ಬಾನಿ) ನೀಡುತ್ತಾರೆ.

ಬಲಿ ನೀಡಿದ ಮಾಂಸವನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಭಾಗವನ್ನು ತಮ್ಮ ಕುಟುಂಬಕ್ಕೆ, ಎರಡನೆಯ ಭಾಗವನ್ನು ಸಂಬಂಧಿಕರಿಗೆ ಮತ್ತು ಮೂರನೆಯ ಭಾಗವನ್ನು ಬಡವರು ಹಾಗೂ ನಿರ್ಗತಿಕರಿಗೆ ಹಂಚಲಾಗುತ್ತದೆ.

ಹಬ್ಬದ ಮಹತ್ವ: ಬಕ್ರೀದ್ ಕೇವಲ ಪ್ರಾಣಿ ಬಲಿ ನೀಡುವುದಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಇದು ಸ್ವಾರ್ಥವನ್ನು ತ್ಯಜಿಸುವುದು, ದೀನ-ದಲಿತರಿಗೆ ಸಹಾಯ ಮಾಡುವುದು ಮತ್ತು ದೇವರ ಆಜ್ಞೆಗೆ ಸಂಪೂರ್ಣವಾಗಿ ಶರಣಾಗುವುದನ್ನು ಸಂಕೇತಿಸುತ್ತದೆ. ಈ ಹಬ್ಬವು ಮಾನವೀಯತೆ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿಯನ್ನು ಉತ್ತೇಜಿಸುತ್ತದೆ.

The post ತ್ಯಾಗ ಬಲಿದಾನದ ಸಂಕೇತ ಈದ್-ಉಲ್-ಅಧಾ appeared first on Samyukta Karnataka.

ಡೇಟಿಂಗ್‌ನಲ್ಲಿ ₹5,000 ಬಿಲ್; ಮಾಡರ್ನ್ ಡೇಟಿಂಗ್ ಅಥವಾ ಮೈಂಡ್‌ ಗೇಮ್? ಆಕೆ ಸಂಬಂಧ ಕಡಿದುಕೊಂಡ ಅಸಲಿ ಕಾರಣ ಇಲ್ಲಿದೆ!
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಳಿನಿ ಉನಗರ್ ಎಂಬುವವರು ಹಂಚಿಕೊಂಡ ಪೋಸ್ಟ್ ಒಂದು ಇಡೀ ಅಂತರ್ಜಾಲದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಒಬ್ಬ ಮಹಿಳೆಯ ಡೇಟಿಂಗ್ ಅನುಭವದ ಕಥೆಯಲ್ಲ, ಬದಲಾಗಿ 2026ರ ಈ ಕಾಲಘಟ್ಟದಲ್ಲಿ ಹಣಕಾಸಿನ ಸ್ವಾತಂತ್ರ್ಯ, ಲಿಂಗ ಸಮಾನತೆ ಮತ್ತು ವ್ಯಕ್ತಿತ್ವದ ಅಳತೆಗೋಲುಗಳು ಹೇಗೆ ಬದಲಾಗುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ವಾರ್ಷಿಕ ₹80 ಲಕ್ಷ ರೂಪಾಯಿಗಳ ಬೃಹತ್ ಆದಾಯ ಹೊಂದಿರುವ 36 ವರ್ಷದ ಮಹಿಳೆಯೊಬ್ಬರು, ಕೇವಲ ₹2,500 ರೂಪಾಯಿ ಬಿಲ್ ಹಂಚಿಕೊಳ್ಳುವ ವಿಚಾರಕ್ಕೆ ತನ್ನ ಸಂಬಂಧವನ್ನೇ ಕಡಿದುಕೊಂಡ ಘಟನೆ ಈಗ ಎಲ್ಲರ ಕೆಂಗಣ್ಣಿಗೆ ಅಥವಾ ಕುತೂಹಲಕ್ಕೆ ಕಾರಣವಾಗಿದೆ.

ಮ್ಯಾಚ್‌ಮೇಕಿಂಗ್ ಸೇವೆಯ ಮೂಲಕ ಪರಿಚಯವಾದ ವ್ಯಕ್ತಿಯನ್ನು ಆ ಮಹಿಳೆ ಮೂರು ಬಾರಿ ಭೇಟಿಯಾಗಿದ್ದರು. ಮೊದಲ ಎರಡು ಭೇಟಿಗಳಲ್ಲಿ ಆ ವ್ಯಕ್ತಿಯೇ ಪೂರ್ಣ ಬಿಲ್ ಪಾವತಿಸಿದ್ದರು. ಆದರೆ ಮೂರನೇ ಬಾರಿ ₹5,000 ಬಿಲ್ ಬಂದಾಗ, ಆತ ಮೊತ್ತವನ್ನು ಸಮನಾಗಿ ಹಂಚಿಕೊಳ್ಳೋಣ ಎಂದು ಪ್ರಸ್ತಾಪಿಸಿದ ಕ್ಷಣವೇ ಆ ಸಂಬಂಧದ ಭವಿಷ್ಯ ನಿರ್ಧಾರವಾಗಿ ಹೋಗಿತ್ತು. ಆಕೆ ಆ ಕೂಡಲೇ ತನ್ನ ಪಾಲಿನ ಹಣ ನೀಡಿ ಅಲ್ಲಿಂದ ಹೊರಬಂದಿದ್ದಷ್ಟೇ ಅಲ್ಲದೆ, ಮರುದಿನವೇ ಆ ವ್ಯಕ್ತಿಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಖಡಾಖಡಿಯಾಗಿ ತಿಳಿಸಿದರು. ಇಲ್ಲಿ ಪ್ರಶ್ನೆ ಮೂಡುವುದು ಆಕೆಯ ಆರ್ಥಿಕ ಶಕ್ತಿಯ ಬಗ್ಗೆ ಅಲ್ಲ, ಬದಲಾಗಿ ಆಕೆ ನೀಡಿದ ಕಾರಣದ ಬಗ್ಗೆ. ಆಕೆಯ ಪ್ರಕಾರ, ತಾನು ಇಡೀ ಬಿಲ್ ಅನ್ನು ಹತ್ತು ಬಾರಿ ಪಾವತಿಸುವಷ್ಟು ಸಮರ್ಥಳಿದ್ದರೂ, ಆ ವ್ಯಕ್ತಿ ತನ್ನ ಮೇಲೆ ಹಣ ಖರ್ಚು ಮಾಡುವುದು ‘ವರ್ತ್’ ಹೌದೋ ಅಲ್ವೋ ಎಂದು ಲೆಕ್ಕಾಚಾರ ಮಾಡುತ್ತಿದ್ದಾನೆ ಎಂಬ ಭಾವನೆ ಆಕೆಯಲ್ಲಿ ಅಸಮಾಧಾನ ಮೂಡಿಸಿತ್ತು.

ಈ ಘಟನೆಯು ಎಕ್ಸ್ ವೇದಿಕೆಯಲ್ಲಿ ಬಳಕೆದಾರರನ್ನು ಎರಡು ಸ್ಪಷ್ಟ ಬಣಗಳಾಗಿ ವಿಂಗಡಿಸಿದೆ. ಒಂದು ಕಡೆ, ಈಕೆಯ ನಿಲುವನ್ನು ಬೆಂಬಲಿಸುವವರು ಇದನ್ನು ಆಕೆಯ ‘ಸ್ಟ್ಯಾಂಡರ್ಡ್ಸ್’ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಅವರ ಪ್ರಕಾರ, ಆಧುನಿಕ ಡೇಟಿಂಗ್ ಎಂಬುದು ಕೇವಲ ಊಟದ ಬಿಲ್ ಪಾವತಿಸುವುದಲ್ಲ, ಅದು ಎದುರಿಗಿರುವ ವ್ಯಕ್ತಿಯ ಔದಾರ್ಯ ಮತ್ತು ಬದ್ಧತೆಯನ್ನು ಅಳೆಯುವ ಒಂದು ಮಾರ್ಗ. ಪರಸ್ಪರ ಅರ್ಥ ಮಾಡಿಕೊಳ್ಳುವ ಹಂತದಲ್ಲಿ ಇಂತಹ ‘ಕ್ಯಾಲ್ಕುಲೇಟಿವ್’ ಮನಸ್ಥಿತಿ ಅಪಾಯಕಾರಿ ಎಂಬುದು ಇವರ ವಾದ. ಆದರೆ ಮತ್ತೊಂದು ಕಡೆ, ಈ ನಡೆಯನ್ನು ತೀವ್ರವಾಗಿ ಖಂಡಿಸುವವರ ಸಂಖ್ಯೆಯೂ ದೊಡ್ಡದಿದೆ. 80 ಲಕ್ಷ ಗಳಿಸುವ ಮಹಿಳೆ ಕೇವಲ 2,500 ರೂಪಾಯಿಗಾಗಿ ಸಂಬಂಧ ಕಳೆದುಕೊಳ್ಳುವುದು ಬೂಟಾಟಿಕೆಯ ಪರಮಾವಧಿ ಎಂದು ಅವರು ಟೀಕಿಸುತ್ತಿದ್ದಾರೆ. ಸಮಾನತೆ ಎಂದರೆ ಹಕ್ಕುಗಳಲ್ಲಿ ಮಾತ್ರವಲ್ಲದೆ ಜವಾಬ್ದಾರಿಗಳಲ್ಲೂ ಇರಬೇಕೆಂದು ಅವರು ಪ್ರತಿಪಾದಿಸುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿವಾದವು ಸಮಾನತೆಯ ಹೆಸರಿನಲ್ಲಿ ನಾವು ನಮಗೆ ಬೇಕಾದ ಸೌಲತ್ತುಗಳನ್ನು ಮಾತ್ರ ಆರಿಸಿಕೊಳ್ಳುತ್ತಿದ್ದೇವೆಯೇ ಎಂಬ ಕಠಿಣ ಪ್ರಶ್ನೆಯನ್ನು ಸಮಾಜದ ಮುಂದಿಟ್ಟಿದೆ. 36ನೇ ವಯಸ್ಸಿನಲ್ಲಿ ಸಂಬಂಧಗಳನ್ನು ಬೆಳೆಸುವಾಗ ಆರ್ಥಿಕ ಭದ್ರತೆಗಿಂತಲೂ ಇಂತಹ ಸಣ್ಣ ವಿಚಾರಗಳಿಗೆ ಆದ್ಯತೆ ನೀಡುವುದು ಎಷ್ಟು ಸರಿ ಎಂಬ ಚರ್ಚೆ ಈಗಲೂ ಮುಂದುವರಿಯುತ್ತಿದೆ. ಇದು ಕೇವಲ ಒಂದು ಬಿಲ್ ಹಂಚಿಕೆಯ ವಿಷಯವಾಗಿ ಉಳಿಯದೆ, ಬದಲಾಗುತ್ತಿರುವ ಸಂಬಂಧಗಳ ಮೌಲ್ಯಮಾಪನದ ಹೊಸ ಸಂಕೇತವಾಗಿ ಹೊರಹೊಮ್ಮಿದೆ.

The post ಡೇಟಿಂಗ್‌ನಲ್ಲಿ ₹5,000 ಬಿಲ್; ಮಾಡರ್ನ್ ಡೇಟಿಂಗ್ ಅಥವಾ ಮೈಂಡ್‌ ಗೇಮ್? ಆಕೆ ಸಂಬಂಧ ಕಡಿದುಕೊಂಡ ಅಸಲಿ ಕಾರಣ ಇಲ್ಲಿದೆ! appeared first on Samyukta Karnataka.

ಇವಳು ಹುಡುಗಿ ಅಲ್ಲ.. ಮರುಳಾದ ನೆಟ್ಟಿಗರು; ₹1.19 ಲಕ್ಷ ಕೊಟ್ಟು ಫಾಲೋ ಮಾಡಿದ 300 ಜನ; ಅಸಲಿ ಕಥೆ ಇಲ್ಲಿದೆ!
ಇತ್ತೀಚಿನ ದಿನಗಳಲ್ಲಿ ನೀವು ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್ ಸ್ಕ್ರೋಲ್ ಮಾಡುವಾಗ “ವೃತ್ತಿಕಾ ಪಟೇಲ್” ಎಂಬ ಸುಂದರ ಯುವತಿಯ ಪ್ರೊಫೈಲ್ ಅನ್ನು ನೋಡಿರಬಹುದು. ನೀಲಿ ಬಣ್ಣದ ಕುರ್ತಾ ತೊಟ್ಟು ಬೋಗನ್ವಿಲ್ಲಾ ಗಿಡದ ಮುಂದೆ ನಿಂತು ಪೋಸ್ ನೀಡುವ ಫೋಟೋ ಇರಬಹುದು, ದಿಯು ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಕ್ಷಣಗಳಿರಬಹುದು ಅಥವಾ ಪ್ಲೇಟ್ ತುಂಬಾ ಪಾಸ್ತಾವನ್ನು ಸವಿಯುತ್ತಿರುವ ಚಿತ್ರಗಳಿರಬಹುದು. ಸುಮಾರು ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಈ ಪ್ರೊಫೈಲ್ ನೋಡಲು ತುಂಬಾ ಕಲರ್‌ಫುಲ್ ಆಗಿ, ಸಿಸ್ಟಮ್ಯಾಟಿಕ್ ಆಗಿ ಕಾಣುತ್ತದೆ. ಆದರೆ, ಈ ಎಲ್ಲದರ ಹಿಂದೆ ಒಂದು ಅಚ್ಚರಿಯ ವಿಷಯವಿದೆ – ಈ ವೃತ್ತಿಕಾ ಪಟೇಲ್ ಎಂಬ ಯುವತಿ ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇಲ್ಲ!

ಹೌದು, ನೀವು ಕೇಳುತ್ತಿರುವುದು ನಿಜ. ವೃತ್ತಿಕಾ ಪಟೇಲ್ ಒಬ್ಬ “AI ಇನ್ಫ್ಲುಯೆನ್ಸರ್”. ಅಂದರೆ, ಇವಳೊಬ್ಬ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸೃಷ್ಟಿಯಾದ ಡಿಜಿಟಲ್ ಅವತಾರ. 2010ರ ಆಸುಪಾಸಿನಲ್ಲಿ ಇಂತಹ ಪ್ರಯತ್ನಗಳು ಶುರುವಾಗಿದ್ದರೂ, ಈಗಿನ ಅತ್ಯಾಧುನಿಕ AI ಮಾಡೆಲ್‌ಗಳಿಂದಾಗಿ ಇವರು ನಿಜವಾದ ಮನುಷ್ಯರಂತೆ ಕಾಣುತ್ತಿದ್ದಾರೆ. ನೀವು ಇವಳ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚರ್ಮದಲ್ಲಿ ಯಾವುದೇ ಕಲೆಗಳಿಲ್ಲದ ಅತಿಯಾದ ಮೃದುತ್ವ ಮತ್ತು ಪರ್ಫೆಕ್ಟ್ ಆಗಿರುವ ಆ ಪೋಲಿಷ್ಡ್ ಲುಕ್ ನಮಗೆ ಇದು AI ಸೃಷ್ಟಿ ಎಂದು ತಿಳಿಸಿಕೊಡುತ್ತದೆ.

ಆದರೆ ವಿಷಯ ಕೇವಲ ಫೋಟೋಗಳಿಗಷ್ಟೇ ಸೀಮಿತವಾಗಿಲ್ಲ. ಈ “ನಕಲಿ” ಪಾತ್ರ ಈಗ ಅಸಲಿ ಹಣವನ್ನು ಸಂಪಾದಿಸುತ್ತಿದೆ! ಇತ್ತೀಚಿನ ವರದಿಗಳ ಪ್ರಕಾರ, ವೃತ್ತಿಕಾ ಪಟೇಲ್‌ನ ಇನ್‌ಸ್ಟಾಗ್ರಾಮ್ ಖಾತೆಗೆ ಸುಮಾರು 300 ಜನ ಸಬ್‌ಸ್ಕ್ರೈಬರ್‌ಗಳಿದ್ದಾರೆ. ಪ್ರತಿಯೊಬ್ಬರೂ ತಿಂಗಳಿಗೆ 399 ರೂಪಾಯಿಗಳನ್ನು ಪಾವತಿಸುತ್ತಾರೆ. ಅಂದರೆ, ಕೇವಲ ಸಬ್‌ಸ್ಕ್ರಿಪ್ಷನ್‌ನಿಂದಲೇ ಇವಳ ಹಿಂದೆ ಇರುವ ಕ್ರಿಯೇಟರ್‌ಗಳು ಪ್ರತಿ ತಿಂಗಳು ಸುಮಾರು ಒಂದು ಲಕ್ಷದ ಹತ್ತೊಂಬತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬ್ರ್ಯಾಂಡ್ ಕೊಲ್ಯಾಬರೇಷನ್ ಮತ್ತು ಅಫಿಲಿಯೇಟ್ ಮಾರ್ಕೆಟಿಂಗ್‌ನಿಂದ ಬರುವ ಆದಾಯ ಇದರ ಹೊರತಾಗಿದೆ.

ಈ ಬೆಳವಣಿಗೆ ಈಗ ಸಮಾಜದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. “ಇದು ಕೇವಲ ತಂತ್ರಜ್ಞಾನದ ಬೆಳವಣಿಗೆಯೋ ಅಥವಾ ಸಮಾಜದ ನೈತಿಕ ಅಧಃಪತನವೋ?” ಎಂಬ ಪ್ರಶ್ನೆ ಮೂಡಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ “ಇಂತಹ ಕಾಲ್ಪನಿಕ ಪಾತ್ರಗಳಿಗೆ ಹಣ ನೀಡುವ ಪುರುಷರೇ ಈ ಸಮಾಜವನ್ನು ಹಾಳು ಮಾಡುತ್ತಿದ್ದಾರೆ” ಎಂದು ಕಿಡಿಕಾರುತ್ತಿದ್ದರೆ, ಇನ್ನು ಕೆಲವರು ಇದು “ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ ದಾರಿ ಇರಬಹುದು” ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಏನೇ ಇರಲಿ, ಭವಿಷ್ಯದಲ್ಲಿ ನೈಜ ವ್ಯಕ್ತಿಗಳಿಗಿಂತ ಇಂತಹ AI ಅವತಾರಗಳೇ ಹೆಚ್ಚಾದರೂ ಆಶ್ಚರ್ಯವಿಲ್ಲ. ನಾವು ಲೈಕ್ ಮಾಡುತ್ತಿರುವ, ಫಾಲೋ ಮಾಡುತ್ತಿರುವ ವ್ಯಕ್ತಿ ಅಸಲಿಯೇ ಅಥವಾ ಕೇವಲ ಸಾಫ್ಟ್‌ವೇರ್ ಸೃಷ್ಟಿಯೇ ಎಂಬ ಗೊಂದಲದಲ್ಲಿ ಬದುಕುವ ಕಾಲ ಹತ್ತಿರದಲ್ಲಿದೆ.

The post ಇವಳು ಹುಡುಗಿ ಅಲ್ಲ.. ಮರುಳಾದ ನೆಟ್ಟಿಗರು; ₹1.19 ಲಕ್ಷ ಕೊಟ್ಟು ಫಾಲೋ ಮಾಡಿದ 300 ಜನ; ಅಸಲಿ ಕಥೆ ಇಲ್ಲಿದೆ! appeared first on Samyukta Karnataka.

ಅಹಿಂಸೆಯ ಸಾಕಾರಮೂರ್ತಿ ಭಗವಾನ್ ಮಹಾವೀರ
ಹಿಂಸೆಯಿಂದ ಎಲ್ಲವನ್ನೂ ಸಾಧಿಸುತ್ತೇವೆ ಎನ್ನುವುದು ಕೇವಲ ಭ್ರಮೆ. ಹಿಂಸೆಯಿಂದ ದುಃಖ, ಯಾತನೆ, ದ್ವೇಷ ಹೆಚ್ಚುತ್ತವೆ. ಅಹಿಂಸಾಮಾರ್ಗದ ಮೂಲಕ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಈ ಮಾರ್ಗವನ್ನು ಬೋಧಿಸಿದ ಭಗವಾನ್ ಮಹಾವೀರರ ಉಪದೇಶಗಳು ಸಾರ್ವಕಾಲಿಕವಾದವು.

ಇಂದಿಗೆ 2625 ವರ್ಷಗಳ ಹಿಂದೆ ಈ ನಾಡಿನಲ್ಲಿ ಅನ್ಯಾಯ ತಾಂಡವವಾಡುತ್ತಿತ್ತು, ಮಾನವೀಯತೆ ಮರೆಯಾಗಿತ್ತು. ಮಾನವಸಮಾಜ ವಿವೇಕಹೀನವಾಗಿ ನಡೆದುಕೊಳ್ಳುತ್ತಿತ್ತು. ಇಂಥ ಸಂದರ್ಭದಲ್ಲಿ ಇಂದ್ರಿಯಸುಖಗಳನ್ನು ಮೀರಿ ಮೋಕ್ಷಮಾರ್ಗವನ್ನು ತೋರಿಸುವ ಒಬ್ಬ ಮಹಾಪುರುಷನ ಉದಯ ಅಗತ್ಯವಾಗಿತ್ತು. ಈ ನಾಡಿನ ಭಾಗ್ಯವೆಂಬಂತೆ ವೈಶಾಲ ಕುಂಡಲಪುರ ರಾಜ್ಯದ ಸಿದ್ಧಾರ್ಥ ಮತ್ತು ತ್ರಿಶಲಾದೇವಿ ರಾಜದಂಪತಿಯ ಮಗನಾಗಿ ಚೈತ್ರ ಶುಕ್ಲ ತ್ರಯೋದಶಿಯಂದು ಮಹಾವೀರರು ಜನಿಸಿದರು.

ಅವರ ಉದಯದಿಂದ ನಾಡಿನಲ್ಲಿ ದಿನದಿಂದ ದಿನಕ್ಕೆ ಸಕಲ ಐಶ್ವರ್ಯ ವೃದ್ಧಿಯಾಗುವುದನ್ನು ಕಂಡು ಮಗುವಿಗೆ `ವರ್ಧಮಾನ’ ಎಂದು ನಾಮಕರಣ ಮಾಡಿದರು. ಅವರ ಬಾಲಲೀಲೆಗಳು, ಧೈರ್ಯ ಸಾಹಸಗಳು ರೋಚಕವಾಗಿದ್ದವು. ಅವರಲ್ಲಿ ತೇಜಸ್ಸು, ವೀರ ಮುಖಚರ್ಯೆ, ಉದಾತ್ತ ಗುಣಗಳು, ಸಮಾನತೆಯ ಭಾವಗಳು, ಮಾನವೀಯ ಗುಣಗಳು ಎದ್ದು ಕಾಣುತ್ತಿದ್ದವು. ದಯಾಭಾವದ ಯುವರಾಜ ವರ್ಧಮಾನರು ಅರಮನೆಯ ಸಕಲ ಭೋಗಭಾಗ್ಯಗಳ ನಡುವೆ ಇದ್ದರೂ, ಅವರಿಗೆ ಅವೆಲ್ಲವೂ ನಶ್ವರವಾಗಿ ಕಂಡವು. ಅವರ ಮನಸ್ಸು ಸದಾ ಲೋಕಕಲ್ಯಾಣದ ಬಗ್ಗೆಯೇ ಚಿಂತಿಸುತ್ತಿತ್ತು. ಜತೆಗೆ ಆತ್ಮಕಲ್ಯಾಣದ ಕಡೆಗೂ ಹರಿಯತೊಡಗಿತು.

ಮೋಕ್ಷಮಾರ್ಗವನ್ನು ಹುಡುಕುವ ಇಚ್ಛೆಯಿಂದ ವರ್ಧಮಾನರು ಸರ್ವಸಂಗ ಪರಿತ್ಯಾಗದ ನಿರ್ಧಾರ ಮಾಡಿದರು. ಮಾರ್ಗಶಿರ ಕೃಷ್ಣ ಪಕ್ಷ ದಶಮಿಯಂದು ತಮ್ಮ 29ನೇ ವಯಸ್ಸಿನಲ್ಲಿ ಯುವರಾಜ ಪದವಿಯನ್ನು ತ್ಯಜಿಸಿ ಮುನಿದೀಕ್ಷೆಯನ್ನು ಧರಿಸಿ ಯೋಗಸಾಧನೆಗೆ ಮುಂದಾದರು. ದೀಕ್ಷಾಧಾರಣದ ನಂತರ ಹನ್ನೆರಡು ವರ್ಷಗಳ ಉಗ್ರ ತಪಸ್ಸಿನ ಫಲವಾಗಿ ಕೈವಲ್ಯಜ್ಞಾನ ಪ್ರಾಪ್ತವಾಯಿತು. ಆಗ ವರ್ಧಮಾನರು ರಾಗದ್ವೇಷಗಳಿಂದ ಸಂಪೂರ್ಣ ಮುಕ್ತರಾಗಿ ನಿಜವಾದ ಮಹಾವೀರರಾದರು, ಎಲ್ಲವನ್ನೂ ಗೆದ್ದು `ಜಿನ’ನಾದರು.

ಈ ಲೋಕಕ್ಕೆ ನಿಜವಾಗಿಯೂ ಏನು ಬೇಕಾಗಿದೆ ಎಂಬುದನ್ನು ತೋರಿಸಲು ಮುಂದಾದ ಅವರು ಲೋಕಸಂಚಾರ ಮಾಡಿ ಜನರಿಗೆ ಧರ್ಮೋದೇಶ ನೀಡಿದರು. ಪ್ರಪಂಚದ ಜೀವರಾಶಿಗಳೆಲ್ಲ ಅವರ `ಸಮೋಸರಣ’ ಮಂಟಪಕ್ಕೆ (ಧರ್ಮಸಭೆ) ಆಗಮಿಸುತ್ತಿದ್ದವು. ಇಲ್ಲಿ ಎಲ್ಲ ಜೀವಿಗಳು ಧರ್ಮೋಪದೇಶ ಕೇಳುತ್ತಿದ್ದವು ಎಂದು ಹೇಳಲಾಗುತ್ತದೆ. ಸ್ವಾಭಾವಿಕ ವೈರತ್ವ ಹೊಂದಿದ್ದ ಹಾವು-ಮುಂಗುಸಿ, ಹುಲಿ-ಹಸು ಇತ್ಯಾದಿಗಳೂ ಅವರ ಧರ್ಮಸಭೆಯಲ್ಲಿ ಸೌಹಾರ್ದದಿಂದ ವರ್ತಿಸುತ್ತಿದ್ದವು.

ಇಂಥ ಧರ್ಮಸಭೆಯಲ್ಲಿ ಮಹಾವೀರರು, `ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕು ಇರುವದರಿಂದ ನೀನು ಬದುಕು ಇತರ ಜೀವಿಗಳನ್ನೂ ಬದುಕಲು ಬಿಡು. ಪ್ರತಿ ಜೀವಿಯೂ ತನ್ನ ತಪ್ಪಿನಿಂದಲೇ ದುಃಖಿಯಾಗುತ್ತಾನೆ. ಆದ್ದರಿಂದ ಆ ತಪ್ಪನ್ನು ತಿದ್ದಿಕೊಂಡು ಸುಖಿಯಾಗಿರು’ ಎಂಬುದಾಗಿ ಧರ್ಮೋಪದೇಶ ನೀಡಿದರು. ಸಕಲರೂ ಸಮಾನರು, ಭೇದಭಾವ ಬೇಡ ಎಂದೂ, ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ ಈ ಪಂಚತತ್ತ್ವಗಳನ್ನು ಪಾಲಿಸಿದರೆ ಶಾಂತಿಯಿಂದ ಬಾಳಬಹುದೆಂದು ಉಪದೇಶಿಸಿದರು. ಸಮ್ಯಕ್ ದರ್ಶನ (ಸರಿಯಾದ ನಂಬಿಕೆ), ಸಮ್ಯಕ್ ಜ್ಞಾನ (ಸರಿಯಾದ ಜ್ಞಾನ), ಮತ್ತು ಸಮ್ಯಕ್ ಚರಿತ್ರ (ಸರಿಯಾದ ನಡವಳಿಕೆ) ಎಂಬ ರತ್ನತ್ರಯಗಳನ್ನು ಅನುಸರಿಸುವುದೇ ಮೋಕ್ಷಮಾರ್ಗವೆಂದೂ ಹೇಳಿದರು. ಅವರ ಉಪದೇಶ ಎಲ್ಲ ಜೀವಿಗಳಿಗೂ ಅವರವರದೇ ಭಾಷೆಯಲ್ಲಿ ಕೇಳಿಸುತ್ತಿತ್ತು ಎನ್ನಲಾಗುತ್ತದೆ.

ಹೀಗೆ ಮಹಾವೀರರು 32 ವರ್ಷ ನಿರಂತರವಾಗಿ ಲೋಕಸಂಚಾರ ಮಾಡುತ್ತ, ಧರ್ಮದ ಹಾದಿಯಲ್ಲಿ ನಡೆಯುವಂತೆ ಜನರಿಗೆ ಮಾರ್ಗದರ್ಶನ ಮಾಡಿದರು. ಮುಂದೆ ಇಂದಿನ ಬಿಹಾರ ಪ್ರಾಂತದ ಪಾವಾಪುರಿಯಲ್ಲಿ ಕಾರ್ತಿಕ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆಯ ಬೆಳಗಿನ ಜಾವ ತಮ್ಮ 71ನೇ ವಯಸ್ಸಿನಲ್ಲಿ ನಿರ್ವಾಣ ಹೊಂದಿದರು.

ಈಗ ಜಗತ್ತಿನಲ್ಲಿ ಅಶಾಂತಿ, ಯುದ್ಧ, ಹಿಂಸೆಗಳು ತಾಂಡವವಾಡುತ್ತಿವೆ. ಈ ಸಂಧರ್ಭದಲ್ಲಿ ಭಗವಾನ್ ಮಹಾವೀರರ ಸ್ಮರಣೆ, ಆದರ್ಶಗಳು, ಉಪದೇಶಗಳು ತುಂಬ ಅಗತ್ಯವಾಗಿವೆ. ಇವುಗಳನ್ನು ಅನುಸರಿಸುವ ಮೂಲಕ ಜಯಂತಿಯನ್ನು ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಅವರ ಸ್ಮರಣೆ ನಮ್ಮ ಬದುಕನ್ನು ಹಸನಗೊಳಿಸಲಿ.

– ಶಾಂತರಾಜ ಮಲ್ಲಸಮುದ್ರ, ಧಾರವಾಡ

ಹೆತ್ತವರನ್ನು ನಿರ್ಲಕ್ಷಿಸಿದರೆ ಹುಷಾರ್‌..! 10 ಸಾವಿರ ವೇತನ ಕಟ್

The post ಅಹಿಂಸೆಯ ಸಾಕಾರಮೂರ್ತಿ ಭಗವಾನ್ ಮಹಾವೀರ appeared first on Samyukta Karnataka.

ಯುಗ ಯುಗಾದಿ ಕಳೆದರೂ ಮತ್ತೆ ಯುಗಾದಿ ಬರುತಿದೆ
ಬದುಕಿನ ಕಹಿ ನುಂಗಿ ಸುಖಶಾಂತಿ ಸಮೃದ್ಧಿ ಹಬ್ಬ ಯುಗಾದಿ ಪ್ರಕೃತಿಯಲ್ಲಿ ಋತುಗಾಹಿ ವಸಂತನ ಆಗಮನ ಸಂಭ್ರಮ ಪಲ್ಲವಿಸುವ ಸಮಯ. ಹೊಸ ಚೈತನ್ಯದ ಚಿರ ಚೈತ್ರದ ಸ್ಫೂರ್ತಿ, ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥದಲ್ಲಿ ಈ ದಿನದ ವೈಶಿಷ್ಟ್ಯ ಉಲ್ಲೇಖವಿದೆ. ಶ್ರೀ ಶಕೆ 1948 ಪರಾಭವ ನಾಮ ಸಂವತ್ಸರ ಆರಂಭದ ದಿನ 19.03.2026 ಗುರುವಾರ.

ಹೊಸ ವರ್ಷ ಹರ್ಷದಾಯಕವಾಗಲೆಂಬ ಒಳ್ಳೆಯ ಇಚ್ಚೆಯಿಂದ ಆಚರಿಸುವ ಹಬ್ಬವೇ ಯುಗಾದಿ. ಯುಗ'' ಎಂದರೆನೂತನ ವರ್ಷ” `ಆದಿ’ ಎಂದರೆ ಆರಂಭ'' ಎಂದರ್ಥ. ಯುಗಾದಿ, ಹತ್ತು ಹಲವು ಪರಂಪರೆಯ ಆರಂಭದ ದಿನ. ವರ್ಷದ ಮೂರುವರೆ ಶುಭದಿನಗಳಲ್ಲಿ ಮೊದಲ ಮುಹೂರ್ತ ದಿನ.ಋತೂನಾಂ ಕುಸುಮಾಕರ:” ಎಂಬ ಗೀತಾಚಾರ್ಯನ ವಾಣಿಯಂತೆ ಋತುರಾಜ ವಸಂತದ ಶುಭಾಗಮನದ ದಿನ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತçವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, “ಆನಂದಮಯ ಈ ಜಗ ಹೃದಯ” ಎಂಬ ಕವಿ ವಾಣಿಯ ಸತ್ಯತೆ ಅರಿವಾಗುತ್ತದೆ. ಆ ಸಂತೋಷ ಸಂಭ್ರಮ ಕಂಡ ಜನ, ಎಣ್ಣೆ ನೀರು ಹಾಕಿಕೊಂಡು, ಹೊಸ ಬಟ್ಟೆ ಉಟ್ಟು, ನೂತನ ವರ್ಷವನ್ನು ಇದಿರುಗೊಳ್ಳುತ್ತಾರೆ.

ನವ ಸಂವತ್ಸರದ ಪ್ರಥಮದಿನ ಎಂಬ ಅರ್ಥದಲ್ಲಿ ಯುಗಾದಿ'' ಶಬ್ಧ ರೂಢಿಯಲ್ಲಿ ಇದೆ.ಯುಗ” ಎಂದರೆ ಕಾಲಗಣನೆ ಎಂಬಂತೆ ಅರ್ಥವಿದೆ. ಕ್ರಿ.ಪೂ. 2000 ಮೊದಲೇ ಮೆಸಪೊಟಾಮಿಯದಲ್ಲಿ ಹೊಸ ವರ್ಷ ಆಚರಿಸುವ ಪದ್ಧತಿ ಇತ್ತು. ಬ್ಯಾಬಿಲೋನಿಯಾದಲ್ಲಿ ಮೇಷ ಮಾಸದ ಅಮಾವಾಸ್ಯೆಯಂದು, ಅಸ್ಸರಿಬಿಯಾದಲ್ಲಿ ತುಲಾಮಾಸದ ಅಮಾವಾಸ್ಯೆಯಂದು, ಪರ್ಷಿಯನ್ನರು ಮತ್ತು ಈಜಿಪ್ತಿಯನ್ನರು ತುಲಾ ಸಂಕ್ರಾತಿಯಂದೆ. ಗ್ರೀಕರು ಮಕರ ಸಂಕ್ರಾತಿಯ ದಿನದಂದು ಹೊಸವರ್ಷವನ್ನು ಆಚರಿಸುತ್ತಿದ್ದರು. ಯುಗಾದಿ ಎಂದು? ಎಂದೊಡನೆಯೇ ಕ್ಷಣಾರ್ಧದಲ್ಲಿ ಕ್ಯಾಲೆಂಡರ್ ಪಂಚಾಂಗ ನೋಡಿ ಹೇಳಬಹುದು. ಆದರೆ ಇವುಗಳಲ್ಲಿ ನಮೂದಿಸಿರುವ ಎಣಿಕೆಗಳ ಹಿಂದೆ ಶತ-ಶತಮಾನಗಳ ಶ್ರಮ ಲೆಕ್ಕಾಚಾರ ತಿದ್ದುಪಡಿ ಅಡಗಿದ್ದು, ಅರ್ಥೈಸಲು ಸ್ವಾರಸ್ಯಕರವಾಗಿದೆ.

ಮಾನವನ ಪ್ರಪ್ರಥಮ ಪಂಚಾಂಗ ಆಕಾಶ. ಆಗಸದಲ್ಲಿಯ ಸೂರ್ಯ ಮತ್ತು ಚಲಿಸುವ ಗ್ರಹಗತಿಗಳನ್ನು ಅಭ್ಯಸಿಸಿದಾಗ ಮೊದಲ ಪಂಚಾಂಗ ಜನ್ಮ ತಾಳಿತು. ಚಂದ್ರಮಾನ ಹಾಗೂ ಸೌರಮಾನ ಪದ್ಧತಿಗಳು ನೈಸರ್ಗಿಕವಾದ ಮಳೆ, ಬೆಳೆ ಪ್ರವಾಹ ಸೂರ್ಯ-ಚಂದ್ರರ ಚಲನ ಗತಿಗಳು ಬೇರೆ ಇರುತ್ತಿದ್ದವು. ತಪ್ಪುಗಳನ್ನು ಹೇಗೆ ಸರಿಪಡಿಸುವದು ಎಂಬ ಜಿಜ್ಞಾಸೆ ಬಹಳಷ್ಟಾಯಿತು. ಆಗ ಜುಲಿಯಸ್ ಸೀಝರ ಲಕ್ಷವಹಿಸಿ ತನ್ನ ರಾಜಬಲ ಪ್ರಯೋಗದಿಂದ ಹೊಂದಿದ ತಪ್ಪುಗಳನ್ನು ಸರಿಪಡಿಸಿ ಕ್ಯಾಲೆಂಡರನ್ನು ಒಂದು ಹಂತಕ್ಕೆ ತಂದನು. ಯೋಗ್ಯ ತಜ್ಞರನ್ನು ನೇಮಿಸಿದನು. 365 ದಿನ 1\4 ದಿನಗಳ ಕಾಲಕ್ಕೆ ಒಂದು ವರ್ಷ ಎಂದು ಸಾರಿದನು. ಕಾಲುದಿನವನ್ನು ನಾಲ್ಕು ವರ್ಷಕೂಡಿಸಿ “ಲೀಪ ಈಯರ” ಮಾಡಿದ್ದು ಸಿಝರನ ಕಾಲದಲ್ಲಿ. ಈ ಜ್ಯುಲಿಯಸ್ ಸೀಝರನ ಕ್ಯಾಲೆಂಡರನಲ್ಲಿಯೂ ಆಚರಣೆಯಲ್ಲಿ ಕೆಲವು ಲೋಪದೋಷ ಉಂಟಾದವು. ಮುಂದೆ 1582 ರಲ್ಲಿ ಪೋಪ್ ಗೆರಗೋರಿಯವರು ಅದನ್ನು ಸರಿಪಡಿಸಿದರು.

ಅಂದಿನಿಂದ ವರುಷಾರಂಭ ಜನವರಿ ಒಂದರಿಂದ ಎಂದು ನಿರ್ಧರಿಸಲಾಯಿತು. ಇಂದು ವಿಶ್ವದಲ್ಲೆಲ್ಲಾ ವ್ಯವಹಾರಿಕವಾಗಿ ಎಲ್ಲರೂ ಗ್ರೆಗೂರಿಯನ್ ಕ್ಯಾಲೆಂಡರ ಪದ್ಧತಿಯನ್ನೇ ಉಪಯೋಗಿಸುವದು ಬಳಕೆಯಲ್ಲಿದೆ. ಈ ಪದ್ಧತಿಯನ್ನು ವ್ಯವಹಾರಿಕವಾಗಿ ಬಳಸಿದರೂ, ಹಲವಾರು ಸಂಸ್ಕೃತಿಗಳು ಶತಮಾನಗಳೂ ಹಬ್ಬಿ ಇತರ ಧಾರ್ಮಿಕ ವಿಧಿ-ವಿಧಾನಗಳನ್ನು ಚಂದ್ರಮಾನ ರೀತಿಯಂತೆ ಆಚರಿಸುವುದನ್ನು ಬಿಡಲಿಲ್ಲ. ಚಂದ್ರನ ಆಕರ್ಷಣೆ ಎಷ್ಟು ಪ್ರಬಲವಾಗಿತ್ತೆಂದರೆ ಧಾರ್ಮಿಕ ಕಾರಣಗಳಿಗೆ `ಚಂದ್ರಮಾನ’ ಪಂಚಾಂಗವನ್ನೇ ಮುಂದುವರಿಸಿಕೊಂಡು ಬಂದರು.

ಚಂದ್ರಮಾನ ಯುಗಾದಿ ಮೇಷ ಸಂಕ್ರಮಣದ ಮೊದಲು ಬರುವ ಅಮಾವಾಸ್ಯೆಯ ಮರುದಿನ ಅಂದರೆ ಚೈತ್ರ ಶುಕ್ಲ ಪಾಡ್ಯದಂದು ಬರುತ್ತದೆ. ಇಂಗ್ಲೀಷ ಕ್ಯಾಲೆಂಡರ್ ಮಾರ್ಚ 14 ರಿಂದ ಏಪ್ರಿಲ್ 14ರ ಒಳಗೆ ಇರುತ್ತದೆ. ಸೌರಮಾನ ಯುಗಾದಿಯನ್ನು ನಿಶ್ಚಿತವಾಗಿ ಏಪ್ರಿಲ್ 14 ರಂದೇ ಆಚರಿಸುತ್ತಾರೆ. ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟö್ಯ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮ ರಾಜ್ಯವಾಳುವ ಪ್ರಾರಂಭಿಸಿದ. ಅಂದು ಶ್ರೀರಾಮನ ಜಯಕ್ಕೆ ಕಾರಣಕರ್ತರಾದ ಕಪಿ ಸೈನ್ಯ ವೀರರು ಹಾಗೂ ಅಯೋಧ್ಯೆಯ ಪ್ರಜೆಗಳೂ ನಲಿದಾಡಿದರು. ಶ್ರೀರಾಮನೊಂದಿಗೆ ಪ್ರಜೆಗಳೂ ತಮ್ಮ ತಮ್ಮ ಮನೆಯ ಮುಂದೆ ವಿಜಯ ಪತಾಕೆ ಹಾರಿಸಿದರು.

ಸೃಷ್ಟಿಯಾದ ದಿನ: ನಿರ್ಣಯ ಸಿಂಧುವಿನಲ್ಲಿ ಹೀಗೆ ಹೇಳಿದೆ: ||`ಚೈತ್ರೇಮಾಸಿ ಜಗದ್‌ಬ್ರಹ್ಮ ಸಸರ್ಜ ಪ್ರಥಮೇಹನಿ ಶುಕ್ಲಪಕ್ಷೇ ಸಮಗುಂತು, ತದಾ ಸುರ್ಯೋದಯೇ ಸತಿ|| ಅಂದರೆ ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆಯೆಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದ. ಅಂದೇ ಗ್ರಹ,ನಕ್ಷತ್ರ, ಮಾಸ, ಋತು, ವರ್ಷ ವರ್ಷಾಧಿ ಪತಿಗಳನ್ನೂ ಸೃಷ್ಟಿಸಿ, ಕಾಲಗಣನೆ ಆರಂಭಿಸಿದ. ರೋಮನ್ನರಿಗೆ ಜನವರಿಯ ಮೊದಲನೇ ದಿನವಿದ್ದಂತೆ, ಹಿಂದೂಗಳಿಗೆ “ಯುಗಾದಿ ಯುಗದ ಆ ದಿನ”. ಚಂದ್ರನಿಂದಲೇ ಸರಿ. (ಉದಾ: ತಿಂಗಳು ಬೆಳಕು ಎಂದರೆ ಚಂದ್ರನ ಬೆಳದಿಂಗಳು ಎಂದರ್ಥ). ಹುಣ್ಣೆಮೆಯ ದಿನ ಚಂದ್ರ ಯಾವ ನಕ್ಷತ್ರ ಯುಕ್ತನಾಗಿರುವನೋ ಆ ಹೆಸರಿನಿಂದಲೇ ಆಯಾ ತಿಂಗಳನ್ನು ಕರೆಯಲಾಗುತ್ತದೆ.

ಅಂದು ತಿಥಿ ಶ್ರವಣ ಮಾಡುವುದರಿಂದ ಸಂಪತ್ತು, ವಾರದಿಂದ ಆಯುಷ್ಯವೃದ್ಧಿ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗನಾಶ, ಕರಣದಿಂದ ಚಿಂತಿಸಿದ ಕಾರ್ಯದಲ್ಲಿ ಸಿದ್ಧಿ ಹೀಗೆ ಶುಭಫಲ ಲಭಿಸುವುದು. ಈ ಪರಾಭವ ನಾಮ ಸಂವತ್ಸರವು ಸಕಲ ಜೀವ ಜಂತುಗಳಿಗೂ ಸುಖ-ಸಂಪತ್ತು ಆಯುಷ್ಯ. ಆರೋಗ್ಯ ಕೊಟ್ಟು ಹರಸಲಿ ಎಂದು ಹಾರೈಸಿ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.

– ಚಿದಂಬರಭಟ್ಟ. ರಾ. ಜೋಶಿ, ಧಾರವಾಡ,

The post ಯುಗ ಯುಗಾದಿ ಕಳೆದರೂ ಮತ್ತೆ ಯುಗಾದಿ ಬರುತಿದೆ appeared first on Samyukta Karnataka.

ಬೇವು-ಬೆಲ್ಲದ ಬೀಡಿಗೆ ಚೈತ್ರ ಹಾದಿ ತೆರೆದಿದೆ
ಬಂದ ಚೈತ್ರದ ಹಾದಿ ತೆರೆದಿದೆ / ಬಣ್ಣ-ಬೆಡಗಿನ ಮೋಡಿಗೆ / ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ – ಹೌದು. ಕಾಲ ನಿಲ್ಲುವುದಿಲ್ಲ; ಕಾಲಚಕ್ರವು ಉರುಳುತ್ತಲೇ ಇದೆ, ಉರುಳುತ್ತಲೇ ಇರುತ್ತದೆ, ಉರುಳುತ್ತಲೇ ಇರಬೇಕು. ಕಾಲವು ಬದುಕನ್ನು ಹದಗೊಳಿಸಿ ಮಾಗಿಸುತ್ತದೆ. ಕಾಲಚಕ್ರದ ಜೊತೆಗೆ ಕಾಲವನ್ನು ನವನವೋಲ್ಲಾಸಗೊಳಿಸಲು ಅನೇಕ ಹಬ್ಬಗಳು ಬರುತ್ತವೆ; ಹೋಗುತ್ತವೆ. ಕಾಲಚಕ್ರದಲ್ಲಿ ಎಲ್ಲ ಹಬ್ಬಕ್ಕೂ, ಎಲ್ಲ ಕಾಲಕ್ಕೂ ಒಂದಿಲ್ಲೊಂದು ಮಹತ್ವ ಇದ್ದೇ ಇರುತ್ತದೆ. ಅವು ನೀಡುವ ಉಲ್ಲಾಸ, ಆನಂದ ವರ್ಣನಾತೀತ. ಅಲ್ಲದೆ ಅವು ಇಂದಿನ ಬಿರುಸಿನ, ಓಡುನಡಿಗೆಯ ಜೀವನಕ್ಕೆ ನಾವೀನ್ಯತೆ, ಬಣ್ಣ ತುಂಬಲು ಸಹಕರಿಸುತ್ತವೆ.

ಕವಿ ಗೋಪಾಲಕೃಷ್ಣ ಅಡಿಗರು ಹೇಳಿದಂತೆ ಯುಗಾದಿ ಅಂದರೂ ಒಂದೇ / ಯುಗಾಂತ ಅಂದರೂ ಸರಿಯೇ / ಆದಿ ಅಂತ್ಯಗಳೆರಡು ಅವಳಿಜವಳಿ’. ಸೋಲು-ಗೆಲುವು, ನೋವು-ನಲಿವು, ಏಳು-ಬೀಳು, ಆಶೆ-ನಿರಾಶೆಗಳ ಒಮ್ಮೆ ಅಳಿಸಿ ಮತ್ತೆ ನಮ್ಮನ್ನು ನಾವು ಹೊಸ ಬದುಕಿಗೆ ತೆರೆದುಕೊಳ್ಳುವ, ಹೊಸ ಬದುಕಿಗೆ ಅಣಿಯಾಗುವ ಪರ್ವಕಾಲವೇ ಯುಗಾದಿ. ಎಲ್ಲಿಂದ ಹೊರಟಿತೋ ಅದೇ ಜಾಗಕ್ಕೆ ಬಂದು ಅಲ್ಲಿಂದ ಪುನಃ ಪ್ರಾರಂಭಿಸುವುದೇ ಯುಗಾದಿ. ಕಾಲ ಅನಾದಿ; ಅನಂತ. ಆದರೂ ಅನುಕೂಲಕ್ಕಾಗಿ ಅಖಂಡ ಕಾಲವನ್ನು ಅಳೆಯುವ ಪ್ರಯತ್ನ ನಮ್ಮದು. ಯುಗಾದಿಯು ಹಿಂದಿನ ವರುಷವೆಂಬ ಕಾಲಪುರುಷನ ಮರಣ ಹಾಗೂ ಹೊಸ ವರುಷವೆಂಬ ಮಗುವಿನ ಜನನದ ಸೂಚಕ. ಹಳೆಯ-ಹೊಸ ವರುಷಗಳನ್ನು ಬೆಸೆಯುವ ಸೇತುವೆ. ಯುಗಾದಿ ಬರಿಯ ಕಾಲನ ಗಡುವು ಮಾತ್ರವಲ್ಲ; ಬದುಕಿನಲ್ಲಿ ಹೊಸ ಹುರುಪು, ಉತ್ಸಾಹವನ್ನು ಪುಟಿದೇಳಿಸುವ ಕಾಲ. ಕಾಲದಿಂದ ಕಾಲಕ್ಕೆ ನಾವು ಆಚರಿಸುತ್ತಿರುವ ಈ ಹಬ್ಬಗಳಲ್ಲೂ ಅನೇಕ ಬದಲಾವಣೆಗಳು ನಿರೂಪಿತವಾಗುತ್ತಲೇ ಇರುತ್ತವೆ. ಆದರೆ ಹಬ್ಬಗಳು ಮನಸ್ಸಿಗೆ ನೀಡುವ ಮುದ ಅದಮ್ಯ. ಇದೀಗ ಯುಗಾದಿ ಮರಳಿ ಬಂದಿದೆ. ನಮ್ಮ ನಿರೀಕ್ಷೆಗಳೆಲ್ಲ ನನಸಾಗದಿದ್ದರೂ ಹೊಸ ಸಂವತ್ಸರ ಹೊಸ ಹೊಂಗನಸುಗಳೊಂದಿಗೆ ಕಾಲಿಟ್ಟಿದೆ.

ಹಳೆಯದನ್ನು ಮರೆತು ಹೊಸತನ್ನು ಸ್ವಾಗತಿಸುವ, ನಿನ್ನೆಯ ಕಹಿಯನ್ನು ಮರೆತು ಸಿಹಿ ನೆನಪುಗಳೊಂದಿಗೆ ನಾಳೆಯ ಬದುಕಿಗೆ ಸ್ವಾಗತ ಕೋರುವ ಹಬ್ಬವೇ ಯುಗಾದಿ. ಸಂಸ್ಕೃತ ಪದ ಯುಗಾದಿ'ಯ ತದ್ಭವ ರೂಪವೇಉಗಾದಿ’. ಯುಗಾದಿ ಅಂದರೆ ವರ್ಷದ ಆರಂಭ. ಕಾಲಚಕ್ರವು ಒಂದು ಆವೃತ್ತ ಪೂರ್ಣಗೊಳಿಸಿ ಇನ್ನೊಂದಕ್ಕೆ ಕಾಲಿಡುವ, ಹೊಸ ತೇದಿಯೊಂದು ಆರಂಭಗೊಳ್ಳುವ ಪರ್ವಕಾಲ. ಇದು ಕಾಲಕ್ಕೆ ಸಂಬಂಧಿಸಿದ ಪ್ರಮುಖ ಹಬ್ಬ. ಬದುಕಿನಲ್ಲಿ ಹೊಸತನ ಅಳವಡಿಸಿಕೊಳ್ಳಲು ಪ್ರೇರೇಪಿಸುವ ಕಾಲ. ಹೊಸತನವನ್ನು ನಿರೀಕ್ಷಿಸುವುದು, ಆಚರಿಸುವುದು ನಮ್ಮ ಬದುಕಿನ ನಿತ್ಯ ಮಂತ್ರ. ಹಳೆಯ ಪೊರೆಯನ್ನು ಕಳಚಿ, ಹೊಸ ಭಾವಜಲದಲ್ಲಿ ಮಿಂದು ನಾಳೆಗಾಗಿ ಹಂಬಲಿಸುವುದು ಮಾನವಸಹಜ ಧರ್ಮ. ಈ ಸಂದರ್ಭದಲ್ಲಿ ನಿಸರ್ಗವೂ ಹಳೆಯದನ್ನೆಲ್ಲ ಹಿಂದೆ ಹಾಕಿ ಹೊಸತನವನ್ನು ತುಂಬಿಕೊಂಡಿರುತ್ತದೆ.

ಯುಗಾದಿಯನ್ನು ಸೌರಮಾನ ಹಾಗೂ ಚಾಂದ್ರಮಾನವೆಂದು ಆಚರಿಸಲಾಗುತ್ತದೆ. ಮಾನ ಎಂದರೆ ಅಳತೆ. ಚಂದ್ರನ ಚಲನೆಯನ್ನು ಆಧರಿಸಿ ಕಾಲಗಣನೆ ಮಾಡುವ ಪದ್ಧತಿ ಚಾಂದ್ರಮಾನ ಯುಗಾದಿಯೆಂದೂ, ಸೂರ್ಯನ ಚಲನೆಯನ್ನು ಆಧರಿಸಿ ಲೆಕ್ಕ ಹಾಕುವುದನ್ನು ಸೌರಮಾನ ಯುಗಾದಿಯೆಂದೂ ಕರೆಯುತ್ತಾರೆ. ಈ ಎರಡರ ನಡುವೆ ಆರರಿಂದ ಹದಿನೈದು ದಿನಗಳ ಅಂತರವಿರುತ್ತದೆ. ಮೊದಲು ಸೌರಮಾನ ಯುಗಾದಿ ಬಂದರೆ ಅನಂತರ ಚಾಂದ್ರಮಾನ ಯುಗಾದಿಯು ಬರುತ್ತದೆ. ಸೌರಮಾನ ಯುಗಾದಿಯನ್ನು ಆಚರಿಸುವವರು ವಿರಳ.

ಕರ್ನಾಟಕದಲ್ಲಿ ಜನ ಹೊಸ ವರ್ಷವಾದ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಅಂದು ಉಷಃಕಾಲದಲ್ಲಿ ಎದ್ದು ದೇವರ ಸ್ಮರಣೆ ಮಾಡಿ, ದೇವರಕೋಣೆ ಮತ್ತು ಮನೆಯ ಮುಖ್ಯ ದ್ವಾರಗಳಲ್ಲಿ ರಂಗವಲ್ಲಿ, ತೋರಣಾದಿಗಳಿಂದ ಸಿಂಗರಿಸಿ, ಅಭ್ಯಂಜನ ಮಾಡಿ, ಹೊಸ ವರ್ಷದ ಪಂಚಾಂಗವನ್ನು ದೇವರ ಮುಂದಿಟ್ಟು ಗಣಪತಿ ಪೂಜೆ ಮಾಡಿ ಕುಲದೇವರನ್ನು ಅರ್ಚಿಸಿ, ಬೇವು ಬೆಲ್ಲ ಸೇವಿಸಿ, ದಿನಶುದ್ಧಿಗಳನ್ನು ತಿಳಿಸುವ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಪವಿತ್ರ ಅಂಗಗಳಿಂದ ಕೂಡಿದ ಪಂಚಾಂಗ ಶ್ರವಣ ಮಾಡುತ್ತಾರೆ. ಹೊಸ ಬಟ್ಟೆ ತೊಟ್ಟು ಹಿರಿಯರಿಗೆ ನಮಿಸುತ್ತಾರೆ.

ಯುಗಾದಿಯಂದು ಸವಿಯುವ ಬೇವು – ಬೆಲ್ಲ ಬದುಕಿನ ಸಿಹಿ – ಕಹಿಗಳ ಜೊತೆಗೆ, ಭೂತದ ಮಧುರ ನೆನಪುಗಳೊಂದಿಗೆ ಭವಿಷ್ಯದ ಹೊಂಗನಸುಗಳ ಕನವರಿಸುವ, ಬದುಕಿನಲ್ಲಿ ಏನೇ ಬಂದರೂ ಎಲ್ಲವನ್ನೂ ಸಮನಾಗಿ ಸ್ವೀಕರಿಸುವ ಮನೋದಾರ್ಢ್ಯ ನಮ್ಮದಾಗಲಿ ಎಂಬುದರ ಸಂಕೇತವಾಗಿದೆ.

ಆಯುರ್ವೇದದ ಪ್ರಕಾರ ಬೇವು ರೋಗ ನಿವಾರಕ, ಕ್ರಿಮಿನಾಶಕ, ಆರೋಗ್ಯದಾಯಕ. ಬೇವು ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ. ಬೆಲ್ಲ ಉಷ್ಣಕಾರಕ ಹಾಗೂ ಜೀರ್ಣಕಾರಕ. ನಮ್ಮ ಹಿರಿಯರು ಬೇವು-ಬೆಲ್ಲದ ಮಹತ್ತ್ವವನ್ನು ಅರಿತಿದ್ದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರಕೃತಿಯ ವಿದ್ಯಮಾನಕ್ಕೆ ಅನುಗುಣವಾಗಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ.

ಹಕ್ಕಿಗಳ ಕಲರವ ಮತ್ತು ಹಸಿರು ತೋರಣ ಯುಗಾದಿಯ ಬಾಹ್ಯ ರೂಪಗಳಾದರೆ, ಸುಖ-ದುಃಖಗಳೆರಡನ್ನೂ ಸಮಾನವಾಗಿ ಕಾಣಬೇಕೆಂಬ ಜೀವನತತ್ತ್ವದ ಬೇವು-ಬೆಲ್ಲ ನಿತ್ಯ ಬದುಕಿನ ಸತ್ಯವಾಗಿ, ಜೀವನೋತ್ಸಾಹವಾಗಿ ಯುಗಾದಿಯ ಆಚರಣೆಯನ್ನು ಅರ್ಥಪೂರ್ಣವಾಗಿಸುತ್ತದೆ. ಮಾವಿನ, ಬೇವಿನ ಎಲೆಗಳನ್ನು ಪೋಣಿಸಿ ಮನೆಯ ಬಾಗಿಲಿಗೆ ತೋರಣ ಕಟ್ಟುವುದು ಕಣ್ಣಿಗೆ ಕಾಣುವ ಸಂಸ್ಕೃತಿಯಾದರೆ, ಬೇವು-ಬೆಲ್ಲ ಜೊತೆಯಾಗಿ ಸೇವಿಸುವುದು ಸುಖದಂತೆ ದುಃಖವನ್ನೂ ಸಮನಾಗಿ ಸ್ವೀಕರಿಸುವ ಮನದ ಸಂಸ್ಕೃತಿ. ಹೇಗೆ ಸಿಹಿ-ಕಹಿಗಳ ಮಿಶ್ರಣ ದೇಹವನ್ನು ಸದೃಢಗೊಳಿಸುವುದೋ, ಹಾಗೆ ಜೀವನದಲ್ಲಿ ಬರುವ ಕಷ್ಟಸುಖಗಳು ಮನವನ್ನು ಬಲಾಢ್ಯಗೊಳಿಸುತ್ತವೆ.

ಬದುಕಿನ ಶೈಲಿಯೇ ಬದಲಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹಬ್ಬಹರಿದಿನಗಳ ಆಚರಣೆಗಳೂ ತಮ್ಮ ಅಂತಃಸತ್ತ್ವವನ್ನು ಕಳೆದುಕೊಳ್ಳುತ್ತಿವೆ. ಎಲ್ಲವೂ ಒಮ್ಮೆ ಭರಾಟೆಯಿಂದ ಆಚರಣೆಗೊಂಡು ಮಾಯವಾಗಿಹೋಗುತ್ತವೆ. ಆದರೆ ಬದುಕಿನ ಪಯಣದ ಅರಿವು ನೀಡುವ ಯುಗಾದಿ ಇದೀಗ ಮರಳಿ ಬಂದಿದೆ. ಹೊಸತನ, ಹೊಸ ಉಲ್ಲಾಸವನ್ನು ಮತ್ತೊಮ್ಮೆ ನಮ್ಮೆಲ್ಲರ ಮನದಲ್ಲಿ ತಂದಿದೆ. ನವನವೀನ ಭಾವಗಳು, ಭರವಸೆಯ ಬೆಳಕಿನೊಂದಿಗೆ ಬಾಳ ಪಯಣಕೆ ಹೊಸ ಪಥವನ್ನು ತೆರೆದಿದೆ. ಹೊಸತನವನ್ನು ನಿರೀಕ್ಷಿಸುವುದು, ಮನದುಂಬಿ ಸ್ವಾಗತಿಸುವುದು ಚಲನಶೀಲ ಬದುಕಿನ ಸತ್ಯ. ಹಳತು ಕಳೆದು ಹೊಸತಿಗೆ ತೆರೆದುಕೊಳ್ಳುವ ಬದುಕ ಪ್ರೀತಿಸಲು ಕಲಿಸುವ ಈ ಪರ್ವಕಾಲ ನಮಗೆ ಸಂತಸವನ್ನು ನೀಡುತ್ತದೆ. ಹಬ್ಬ ಎಂದರೆ ಸಂಭ್ರಮ, ಹೊಸತನದ ನಿರೀಕ್ಷೆ. ಪ್ರಕೃತಿಯಲ್ಲಿ ಪಲ್ಲವಿಸಿದ ಹೊಸ ಚಿಗುರು, ಉತ್ಸಾಹ ಮೈ-ಮನಗಳ ತಲುಪುವ ಹೊತ್ತು.

ಇಂದಿನ ಯಾಂತ್ರಿಕ ಬದುಕಿನಲ್ಲಿ ಹಬ್ಬಗಳು ಹಿಂದಿನ ಉತ್ಸಾಹ ಮೂಡಿಸದಿದ್ದರೂ ಬದುಕಿನ ಏಕತಾನತೆಯನ್ನು ಮುರಿಯಲು, ನಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ಜೀವಂತವಾಗಿ ಮುಂದಿನ ಪೀಳಿಗೆಗೆ ರವಾನಿಸಲು ಅವುಗಳನ್ನು ಆಚರಿಸಲೇಬೇಕು. ಈ ಸಂದರ್ಭ ನೆಲಮುಗಿಲ ಪ್ರೀತಿಯಿಂದ ಪಲ್ಲವಿಸಿದ ಪ್ರಕೃತಿಯಲ್ಲಿ ಹೂಹಣ್ಣು ತರುಲತೆಗಳ ಕಂಪಿನಲಿ ತೊನಲಾಡುತ ಪ್ರಕೃತಿ ತನ್ನ ತಾ ಮರೆತಿರುವಾಗ ಸಹಜವಾಗಿಯೇ ಮನಸು ಆನಂದದಲಿ ಮುಳುಗಿರುತ್ತದೆ. ಆಗ ಹಬ್ಬದ ಆಚರಣೆಯು ಆ ಸೊಬಗಿಗೆ ಮಗದಷ್ಟು ಸೊಗಸನ್ನು ತುಂಬುತ್ತದೆ.

ಪ್ರಕೃತಿ ನಮಗೆ ನೀಡಿದ ಅದ್ಭುತ ಕೊಡುಗೆ ಯುಗಾದಿ. ಗಿಡ, ಮರ, ಬಳ್ಳಿಗಳೆಲ್ಲ ಚಿಗುರೆಲೆಗಳನ್ನು ಹೊದ್ದು ಚಿನ್ನಾಟವಾಡುವುದರ ಮೂಲಕ ಮನುಕುಲಕ್ಕೆ ಸಂತಸದ ಹೊನಲನ್ನು ಹರಿಸುವ ಸುಸಮಯ. ಕಷ್ಟ-ಸುಖದ ದ್ಯೋತಕವಾಗಿ ನಮ್ಮ ಹಿರಿಯರು ಆಚರಣೆಗೆ ತಂದ ಈ ದಿನ ಕಷ್ಟವೇ ಬರಲಿ ಸುಖವೇ ಇರಲಿ ಮನಃಸ್ಥಿತಿ ಎಂದಿಗೂ ಬದಲಾಗದಿರಲಿ; ನೋವು-ನಲಿವುಗಳು ಮೇಳೈಸಿದ ಬದುಕು ದಾರಿಯಲಿ ಸಮನ್ವಯತೆ ಸಾರುವ ಈ ದಿನ ಬೇವು-ಬೆಲ್ಲ ತಿಂದು ಎರಡನ್ನೂ ಸಮಚಿತ್ತದಿಂದ ಸದ್ಭಾವದಿಂದ ಸ್ವೀಕರಿಸುವ ಮನೋಭಾವ ಮನದಿ ಹೊಮ್ಮಲಿ.

– ಡಾ. ಮೈತ್ರಿ ಭಟ್ ವಿಟ್ಲ
(ಲೇಖಕರು ವೈದ್ಯರು, ಹವ್ಯಾಸಿ ಬರಹಗಾರರು)

The post ಬೇವು-ಬೆಲ್ಲದ ಬೀಡಿಗೆ ಚೈತ್ರ ಹಾದಿ ತೆರೆದಿದೆ appeared first on Samyukta Karnataka.

ಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್!
ಹುಬ್ಬಳ್ಳಿ: ವಿಶ್ವದಾದ್ಯಂತ ಫೆಬ್ರವರಿ 14 ಪ್ರೇಮಿಗಳ ದಿನ. ಈ ದಿನವನ್ನು ಪ್ರೇಮಿಗಳು ತಮ್ಮ ಇಚ್ಛೆ ಅನುಸಾರ ಕಳೆಯುತ್ತಾರೆ. ಪ್ರೀತಿ, ಪ್ರೇಮ, ಪ್ರಣಯ ಹೀಗೆ ದಿನಪೂರ್ತಿ ತಮ್ಮ ಪ್ರೇಯಸಿಯೊಂದಿಗೆ ಸಂಭ್ರಮಿಸುತ್ತಾರೆ. ಆದರೆ, ಭಾರತೀಯರಿಗೆ ಮಾತ್ರ ಈ ದಿನ ಬ್ಲ್ಯಾಕ್‌ ಡೇ ಎಂದೇ ಹೇಳಲಾಗುತ್ತದೆ.

ಫೆಬ್ರವರಿ 14 ಕೋಟ್ಯಂತರ ಭಾರತೀಯರಿಗೆ ದುಃಖ, ಕೋಪ ಮತ್ತು ಸ್ಮರಣೆಯ ದಿನ. ಏಕೆಂದರೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಹೀಗಾಗಿ ಭಾರತದಲ್ಲಿ ಈ ದಿನವನ್ನು ಪ್ರತಿವರ್ಷ ʻಕರಾಳ ದಿನʼ ಎಂದು ಆಚರಿಸಲಾಗುತ್ತದೆ.

ಫೆಬ್ರವರಿ 14, 2019: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.

ಇದನ್ನೂ ಓದಿ: 76 ವರ್ಷಗಳ ಬಳಿಕ ಸ್ಥಳಾಂತರ: ‘ಸೇವಾ ತೀರ್ಥ’ಕ್ಕೆ PMO ಶಿಫ್ಟ್

ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಹೊಂಚುಹಾಕಿ ದಾಳಿ ನಡೆಸಲಾಗಿತ್ತು. ಸ್ಫೋಟಕಗಳಿಂದ ತುಂಬಿದ್ದ ವಾಹನದಲ್ಲಿ ಬಂದ ಆತ್ಮಾಹುತಿ ಬಾಂಬರ್ ಸೇನೆಯ ಭದ್ರತಾ ಪಡೆಗಳ ಬಸ್‌ಗೆ ಡಿಕ್ಕಿ ಹೊಡೆಸಿದ್ದು, ಇದ್ದಕ್ಕಿದ್ದಂತೆ ಭೀಕರ ಸ್ಫೋಟವಾಗಿ 40 CRPF ಯೋಧರ ದೇಹಗಳು ಛಿದ್ರ ಛಿದ್ರವಾಗಿದ್ದವು.

ಸ್ಫೋಟದ ಶಬ್ದವು ಹಲವು ಕಿಲೋಮೀಟರ್‌ಗಳವರೆಗೆ ಕೇಳಿಬಂದಿತ್ತು. ಅಲ್ಲದೇ ಸ್ಫೋಟದಿಂದ ಉಂಟಾದ ಬೆಂಕಿ ಮತ್ತು ಹೊಗೆ ಪುಲ್ವಾಮಾ ಸುತ್ತಮುತ್ತಲಿನ ಪ್ರದೇಶವನ್ನೇ ಆವರಿಸಿತ್ತು. ಇದು ಇತಿಹಾಸದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿತ್ತು.

ಇದನ್ನೂ ಓದಿ: ಶಾಲಾ ಬಾಗಿಲಿಗೆ ಸಿಲುಕಿ ತುಂಡಾಯ್ತು ಬಾಲಕಿಯ ಬೆರಳುಗಳು

ಭಾರತದ ಪ್ರತೀಕಾರ: ಪುಲ್ವಾಮಾ ದಾಳಿ ನಡೆದು ಹನ್ನೆರಡು ದಿನಗಳ ನಂತರ ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಭಾರತ ಬಾಂಬ್ ದಾಳಿ ನಡೆಸಿತು. ಜೈಶ್-ಎ-ಮೊಹಮ್ಮದ್ ಶಿಬಿರಗಳ ಮೇಲೆ ಮತ್ತು ಗಡಿ ನಿಯಂತ್ರಣ ರೇಖೆಯಾದ್ಯಂತ ಕಾರ್ಯಾಚರಣೆ ನಡೆಸಲಾಯಿತು. ಇದರಲ್ಲಿ ಬಾಲಾಕೋಟ್ ಸೆಕ್ಟರ್‌ನಲ್ಲಿರುವ ಜೆಇಎಂ ಶಿಬಿರವನ್ನು ಸಂಪೂರ್ಣ ನಾಶ ಮಾಡಲಾಯಿತು.

ಫೆ. 14 ಹುತ್ಮಾತರ ಸ್ಮರಣೆ: ಈ ದಿನವನ್ನು ಪ್ರೇಮಿಗಳ ದಿನದ ಬದಲಾಗಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಫೆಬ್ರವರಿ 14ರಂದು ಭಾರತದಲ್ಲಿ ಕರಾಳ ದಿನ ಆಚರಿಸಲಾಗುತ್ತದೆ.

The post ಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್! appeared first on Samyukta Karnataka.

2026ಕ್ಕೆ ಸಂಯುಕ್ತ ಕರ್ನಾಟಕದ 26 ಅಜೆಂಡಾ
ವರ್ಷಕ್ಕೆ ಒಂದಾದರೂ ಗಿಡ ನೆಡಿ
ರಾಜ್ಯದಲ್ಲಿ ಹಸಿರು ಕಡಿಮೆಯಾಗುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ. ಅರಣ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಪ್ರತಿಯೊಬ್ಬರೂ ಕನಿಷ್ಠ ಪಕ್ಷ ವರ್ಷಕ್ಕೊಂದು ಗಿಡವನ್ನಾದರೂ ನೆಟ್ಟು ಬೆಳೆಸುವ ದೃಢ ನಿರ್ಧಾರ ಮಾಡಿದರೆ ಪರಿಹಾರ ಕಷ್ಟವಿಲ್ಲ.

ನಿರಾಶ್ರಿತರಿಗೆಲ್ಲ ಸೂರು
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಕೇರಳ ಅಥವಾ ಅಕ್ರಮ ಬಾಂಗ್ಲಾ ನಿವಾಸಿಗಳು ಎನ್ನಲಾದ ವಲಸಿಗರಿಗೆ ಸರ್ಕಾರ ಮನೆ ನೀಡಲು ಹೊರಟಿದೆ. ಅದರ ಬದಲು ನಮ್ಮದೇ ರಾಜ್ಯದ ಲಕ್ಷಾಂತರ ಕನ್ನಡಿಗ ನಿರಾಶ್ರಿತರಿಗೆ ವಸತಿ ಅಥವಾ ಪರಿಹಾರ ಲಭಿಸಲಿ.

ಶುದ್ಧ ನೀರು
ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಅಗತ್ಯ. ಎಲ್ಲರಿಗೂ ಶುದ್ಧ ಕುಡಿಯುವ ನೀರು ನೀಡುವ ಸಂಕಲ್ಪವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಸಲ ಮಾಡಿ ಮರೆತಿವೆ. ಅದನ್ನು ನಿಜವಾಗಿಯೂ ಸಾಕಾರಗೊಳಿಸಲು ಕ್ರಮ ಕೈಗೊಳ್ಳಲಿ.

ಭ್ರಷ್ಟಾಚಾರ ಮುಕ್ತ…
ಆರ್‌ಟಿಒ ಕಚೇರಿಗಳು
ಸಬ್ ರಿಜಿಸ್ಟ್ರಾರ್ ಕಚೇರಿಗಳು
ತಾಲೂಕು ಕಚೇರಿಗಳು
ಗ್ರಾಮ ಪಂಚಾಯ್ತಿಗಳು
ನಗರ ಸ್ಥಳೀಯ ಸಂಸ್ಥೆಗಳು

ಲಂಚವಿಲ್ಲದೆ ವರ್ಗಾವಣೆ
ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಇನ್ನಿತರ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಹಣದ ಸುಲಿಗೆಗೆ ಪ್ರಮುಖವಾದ ಕಾರಣ ಅಲ್ಲಿನ ನೌಕರರು ವರ್ಗಾವಣೆಗೆ ಲಕ್ಷಾಂತರ ರೂ. ಲಂಚ ನೀಡುವುದು. ಅದನ್ನು ನಿಲ್ಲಿಸಿದರೆ ಜನರಿಂದ ಲಂಚ ಸುಲಿಗೆ ಕಡಿಮೆಯಾಗುತ್ತದೆ.

ಉತ್ತರ ಕರ್ನಾಟಕಕ್ಕೆ ನ್ಯಾಯ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸುವುದನ್ನು ಬಿಟ್ಟರೆ ಆ ವಿಷಯದಲ್ಲಿ ಇನ್ನೇನೂ ಪ್ರಗತಿಯಾಗುತ್ತಿಲ್ಲ. ಈ ವರ್ಷವಾದರೂ ಅದಕ್ಕೆ ಸರ್ಕಾರ ದೃಢ ಸಂಕಲ್ಪ ಮಾಡಿ ಮನಸಾರೆ ಕಾರ್ಯಕ್ರಮ ರೂಪಿಸಲಿ.

ರಾಜ್ಯದಲ್ಲಿ ನುಣುಪಾದ ರಸ್ತೆ
ಕಳೆದ ಎರಡು ವರ್ಷಗಳಿಂದ ರಾಜ್ಯಾದ್ಯಂತ ರಸ್ತೆಗಳ ಸ್ಥಿತಿ ಅಧ್ವಾನವಾಗಿದೆ. ಬೆಂಗಳೂರಿಗೆ ರಸ್ತೆ ಗುಂಡಿಗಳಿಂದ ಮುಕ್ತಿ ಲಭಿಸಿಲ್ಲ. ಉತ್ತಮ ರಸ್ತೆ ನಿರ್ಮಾಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆದ್ಯತೆಯಾಗಿ ಪರಿಗಣಿಸಿದರೆ ಅಭಿವೃದ್ಧಿಗೆ ವೇಗ ಲಭಿಸಲಿದೆ.

ಟ್ರಂಪ್‌ಗೆ ಒಳ್ಳೆಯ ಬುದ್ಧಿ!
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಕಂಡ ಕಂಡ ದೇಶದ ಮೇಲೆ ಯದ್ವಾತದ್ವಾ ತೆರಿಗೆ ಹಾಕುವುದೂ ಸೇರಿದಂತೆ ಅನೇಕ ಎಡವಟ್ಟು ನಿರ್ಧಾರ ಕೈಗೊಂಡು ಜಗತ್ತನ್ನು ಶೋಷಿಸುತ್ತಿದ್ದಾರೆ. ಅವರು ಬದಲಾಗಲಿ.

ದೇಶಭ್ರಷ್ಟರು ಕೈಗೆ ಸಿಗಲಿ
ಭಾರತಕ್ಕೆ ಸಾವಿರಾರು ಕೋಟಿ ರೂ. ವಂಚನೆ ಎಸಗಿ ವಿದೇಶಕ್ಕೆ ಓಡಿಹೋದ ವಿಜಯ್ ಮಲ್ಯ, ನೀರವ್ ಮೋದಿಯಂಥವರು ಈ ವರ್ಷವಾದರೂ ಮರಳಿ ದೇಶದ ಕೈಗೆ ಸಿಗುವಂತಾಗಲಿ. ಭಾರತಕ್ಕೆ ಬೇಕಾದ ಕ್ರಿಮಿನಲ್‌ಗಳೂ ಈ ವರ್ಷ ಸರ್ಕಾರದ ಕೈಗೆ ಸಿಗಲಿ.

ರಷ್ಯಾ-ಉಕ್ರೇನ್ ಯುದ್ಧ ಅಂತ್ಯ
ಎರಡು ವರ್ಷದಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಜಗತ್ತಿಗೆ ಸಾಕಷ್ಟು ನಷ್ಟವಾಗಿದೆ. ಇಡೀ ವಿಶ್ವದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮವಾಗಿದೆ. ಎಲ್ಲಾ ದೇಶಗಳೂ ಒಟ್ಟಾಗಿ ಈ ಯುದ್ಧಕ್ಕೆ ಅಂತ್ಯ ಹಾಡುವ ಕಾರ್ಯ ಮಾಡಬೇಕಿದೆ.

ಮೊಬೈಲ್ ಬಳಕೆಗೆ ಕಡಿವಾಣ
ಯುವಪೀಳಿಗೆ ಅತಿಯಾದ ಮೊಬೈಲ್ ಗೀಳಿನಿಂದ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದೊಂದು ಸಾಮಾಜಿಕ ಪಿಡುಗಾಗಿ ಬದಲಾಗುತ್ತಿದೆ. ಮೊಬೈಲ್, ಸೋಷಿಯಲ್ ಮೀಡಿಯಾ ಬಳಕೆಗೆ ಕಡಿವಾಣ ಬೀಳಲೇಬೇಕಿದೆ.

ಸಮೂಹ ಸಾರಿಗೆ ಬಳಕೆ
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಂತಹ ನಗರಗಳಲ್ಲಿ ಟ್ರಾಫಿಕ್ ಮತ್ತು ಮಾಲಿನ್ಯ ಹೆಚ್ಚಾಗುತ್ತಿದೆ. ಜನರು ಸಮೂಹ ಸಾರಿಗೆಯನ್ನು ಹೆಚ್ಚೆಚ್ಚು ಬಳಸುವಂತಾದರೆ ಮಾಲಿನ್ಯ ಮತ್ತು ಟ್ರಾಫಿಕ್ ನಿಯಂತ್ರಣವಾಗುತ್ತದೆ.

ಕುರ್ಚಿ ಫೈಟ್ ಶಮನ
ಕಳೆದ 3 ತಿಂಗಳಿನಿಂದ ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ರಾಜಕೀಯ ಮೇಲಾಟ ಜೋರಾಗಿದೆ. ಅದರ ನಡುವೆ ಆಡಳಿತ ಯಂತ್ರ ಮಂಕಾಗಿದೆ. ಈ ವರ್ಷ ಆದಷ್ಟು ಬೇಗ ಇದು ಇತ್ಯರ್ಥಗೊಂಡು, ಅಭಿವೃದ್ಧಿ ಕಾರ್ಯ ಚುರುಕು ಪಡೆಯಲಿ.

ರೈತರ ಸಂಕಷ್ಟ ನಿವಾರಣೆ
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಈಗಲೂ ಇದೆ. ಕೃಷಿಯ ಖರ್ಚು ಹೆಚ್ಚು, ಆದಾಯ ಕಡಿಮೆ. ಪಂಪ್‌ಸೆಟ್‌ಗೆ ಮಧ್ಯರಾತ್ರಿ ವಿದ್ಯುತ್ ಸಿಗುತ್ತದೆ. ಪ್ರಕೃತಿ ವಿಕೋಪಕ್ಕೆ ಪರಿಹಾರ ಸಿಗ್ತಿಲ್ಲ. ಇದಕ್ಕೆಲ್ಲ ಪರಿಹಾರ ಸಿಗಬಹುದೆ?

ಸ್ವದೇಶಿ ವಸ್ತುಗಳ ಖರೀದಿ
ಸ್ವದೇಶಿ ವಸ್ತುಗಳನ್ನೇ ಜನರು ಹೆಚ್ಚೆಚ್ಚು ಬಳಸುವುದರಿಂದ ದೇಶದ ಸಂಪತ್ತು ದೇಶದೊಳಗೇ ಹಂಚಿಕೆಯಾಗುತ್ತದೆ. ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ಅನುಕೂಲವಾಗುವ ಮೂಲಕ ಬಡವರು ಸ್ಥಿತಿವಂತರಾಗುತ್ತಾರೆ. ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.

ಬೆಂಗಳೂರಿನ ಹೊರೆ ಇಳಿಕೆ
ಅನ್ಯ ರಾಜ್ಯಗಳಿಂದ ಜನರ ವಲಸೆ ಹಾಗೂ ಕರ್ನಾಟಕದಲ್ಲೇ ಅನ್ಯ ಜಿಲ್ಲೆಗಳಿಂದ ಜನರ ವಲಸೆಯಿಂದಾಗಿ ಬೆಂಗಳೂರು ಅತಿ ಭಾರದಿಂದ ನಲುಗುತ್ತಿದೆ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡದೆ ಇದ್ದರೆ ಭವಿಷ್ಯದಲ್ಲಿ ಈ ನಗರದ ಸ್ಥಿತಿ ಗಂಭೀರವಾಗಲಿದೆ.

ಡಿಜಿಟಲ್ ಅರೆಸ್ಟ್‌ಗೆ ಇತಿಶ್ರೀ
ಡಿಜಿಟಲ್ ಅರೆಸ್ಟ್ ನೆಪದಲ್ಲಿ ಜನರನ್ನು ಸುಲಿಯುವುದೂ ಸೇರಿದಂತೆ ನಾನಾ ರೀತಿಯ ಆನ್‌ಲೈನ್ ವಂಚನೆಗಳು ದಿನೇದಿನೇ ಹೆಚ್ಚುತ್ತಿವೆ. ಅಮಾಯಕರು ಮೋಸ ಹೋಗುತ್ತಿದ್ದಾರೆ. ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ. ಇದರಿಂದ ಕಾಪಾಡಬೇಕಿದೆ.

ಮರ್ಯಾದಾ ಹತ್ಯೆಗೆ ತಡೆ
ಮಕ್ಕಳು ಅನ್ಯ ಜಾತಿಯವರನ್ನು ಮದುವೆಯಾದರು ಎಂಬ ಕಾರಣಕ್ಕೆ ಮನೆಯವರೇ ಅವರನ್ನು ಕೊಲ್ಲುವಂತಹ ಕ್ರೌರ್ಯಗಳು ಹೆಚ್ಚಾಗುತ್ತಿವೆ. ಮಕ್ಕಳ ಇಷ್ಟಾನಿಷ್ಟಗಳನ್ನು ಕೇಳುವ, ವಯಸ್ಸಿಗೆ ಬಂದವರು ಪ್ರೀತಿಸಿದರೆ ಅದನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕಿದೆ.

ಕೆರೆ, ನದಿಗಳ ಸಂರಕ್ಷಣೆ
ರಾಜ್ಯದಲ್ಲಿ ಜಲಮೂಲಗಳ ದುರ್ಬಳಕೆ ಮಿತಿ ಮೀರಿದೆ. ವರ್ಷದಿಂದ ವರ್ಷಕ್ಕೆ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಕೆರೆಗಳನ್ನು ರಕ್ಷಿಸಿ, ನದಿಗಳಿಗೆ ತ್ಯಾಜ್ಯ ಹರಿಯುವುದನ್ನು ತಪ್ಪಿಸದೆ ಇದ್ದರೆ ಅಮೂಲ್ಯವಾದ ನೈಸರ್ಗಿಕ ಸಂಪತ್ತನ್ನು ನಾವೇ ನಾಶ ಪಡಿಸಿಕೊಂಡು ಕಷ್ಟಕ್ಕೆ ಸಿಲುಕುತ್ತೇವೆ.

ಡ್ರಗ್ಸ್ ಹಾವಳಿ ನಿಯಂತ್ರಣ
ರಾಜ್ಯದಲ್ಲಿ ದಿನೇ ದಿನೇ ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿದೆ. ಶಾಲೆ, ಕಾಲೇಜಿನ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಯುವಜನತೆ ಡ್ರಗ್ಸ್ ವ್ಯಸನದಿಂದ ಚೈತನ್ಯ ಕಳೆದುಕೊಳ್ಳುತ್ತಿದೆ. ಈ ಮಾಫಿಯಾ ನಿಯಂತ್ರಣಕ್ಕೆ ಗಂಭೀರ ಕ್ರಮದ ಅಗತ್ಯವಿದೆ.

ಕೋಮು ದ್ವೇಷ ಅಂತ್ಯ
ರಾಜಕೀಯದ ಲಾಭಕ್ಕಾಗಿ ಧರ್ಮ-ಧರ್ಮಗಳ ನಡುವೆ ವೈಷಮ್ಯ ಬಿತ್ತುವಂತಹ ಕೀಳು ಕಾರ್ಯಗಳನ್ನು ನಿಲ್ಲಿಸಬೇಕಿದೆ. ಸಮಾಜವನ್ನು ಒಡೆದು ರಕ್ಷಣೆ ಮಾಡಿಕೊಳ್ಳಬೇಕಾದ ಧರ್ಮವಿಲ್ಲ. ಧರ್ಮದ ಬಗ್ಗೆ ಪ್ರೀತಿ ಇರಲಿ, ಆದರೆ ದುರಭಿಮಾನ ಬೇಡ.

ಸೋಷಿಯಲ್ ಮೀಡಿಯಾ ಸೌಜನ್ಯ
ಸೋಷಿಯಲ್ ಮೀಡಿಯಾಗಳಲ್ಲಿ ಜನರು ಅನಾಗರಿಕರಂತೆ ವರ್ತಿಸುವ ಪ್ರವೃತ್ತಿ ಬೆಳೆಯುತ್ತಿದೆ. ನಕಲಿ ಖಾತೆಗಳಿಂದ ತೇಜೋವಧೆ ಮಾಡುವುದು ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳನ್ನು ಸಂಯಮದಿಂದ ಬಳಸುವುದನ್ನು ಎಲ್ಲರೂ ಅಭ್ಯಾಸ ಮಾಡಿಕೊಳ್ಳಬೇಕಿದೆ.

ಪ್ಲಾಸ್ಟಿಕ್ ಬಳಕೆ ಸ್ಥಗಿತ
ಏಕಬಳಕೆಯ ಪ್ಲಾಸ್ಟಿಕ್ಕನ್ನು ಸರ್ಕಾರ ಹಲವು ಬಾರಿ ನಿಷೇಧಿಸಿದೆ. ಒಮ್ಮೆಯೂ ಅದು ಜಾರಿಗೆ ಬಂದಿಲ್ಲ. ಪರಿಸರವನ್ನು ಮಲೀನ ಮಾಡುವಲ್ಲಿ ಪ್ಲಾಸ್ಟಿಕ್ ಮುಂಚೂಣಿಯಲ್ಲಿದೆ. ಜನರೇ ಸ್ವಯಂಪ್ರೇರಿತವಾಗಿ ಈ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದರೆ ಮಾತ್ರ ಬದಲಾವಣೆ ಸಾಧ್ಯ.

ದೇಶದ ಗಡಿಯಲ್ಲಿ ಶಾಂತಿ ಸ್ಥಾಪನೆ
ಭಾರತ – ಪಾಕ್ ಗಡಿಯಲ್ಲಿ, ಭಾರತ-ಚೀನಾ ಗಡಿಯಲ್ಲಿ, ಭಾರತ – ನೇಪಾಳ ಗಡಿಯಲ್ಲಿ ಹಾಗೂ ಭಾರತ – ಬಾಂಗ್ಲಾ ಗಡಿಯಲ್ಲಿ ಅಶಾಂತಿ ಉಂಟುಮಾಡುವ ಚಟುವಟಿಕೆಗಳು ಹೆಚ್ಚುತ್ತಿವೆ. ಕಳ್ಳಸಾಗಣೆ, ಉಗ್ರರ ನುಸುಳುವಿಕೆ ಜಾಸ್ತಿಯಾಗುತ್ತಿದೆ. ಅದು ದೇಶದ ಭದ್ರತೆಗೆ ಅಪಾಯಕಾರಿ. ಅದಕ್ಕೆ ಕಡಿವಾಣ ಬೀಳಬೇಕಿದೆ.

ವೃದ್ಧರಿಗೆ ಗೌರವದ ಬದುಕು
ಹಣದ ಹಿಂದೆ ಬಿದ್ದಿರುವ ಜನರು ಸ್ವಂತ ತಂದೆ ತಾಯಿಯನ್ನೇ ಕೊನೆಗಾಲದಲ್ಲಿ ನಿರ್ಲಕ್ಷಿಸುವ ಪ್ರಕರಣಗಳು ಹೆಚ್ಚುತ್ತಿವೆ. ವೃದ್ಧರಿಗೆ ಕೊನೆಗಾಲದಲ್ಲಿ ನೆಮ್ಮದಿಯ ಬದುಕು ನೀಡುವುದು ಸಮಾಜದ ಕರ್ತವ್ಯ. ಹಿರಿಯರನ್ನು ಗೌರವಿಸುವ ಮಾನವೀಯ ಮೌಲ್ಯ ಪುನಃ ಎಲ್ಲರಲ್ಲೂ ನೆಲೆಸಲಿ.

ಓದುವ ಹವ್ಯಾಸ ಮರುಸ್ಥಾಪನೆ
ತಂತ್ರಜ್ಞಾನ ಬೆಳೆದಂತೆ ಬದುಕು ಯಾಂತ್ರಿಕವಾಗುತ್ತಿದೆ. ಮಾನವೀಯತೆ ಮರೆಯಾಗುತ್ತಿದೆ. ಪತ್ರಿಕೆ, ಸಾಹಿತ್ಯ, ಪುಸ್ತಕ ಓದುವ ಹವ್ಯಾಸ ಪುನಃ ಬೆಳೆಸಿಕೊಂಡರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ. ಕಳೆದುಕೊಂಡಿದ್ದನ್ನು ಮರಳಿ ಗಳಿಸುವ ಸಂಕಲ್ಪ ಮಾಡೋಣ.

The post 2026ಕ್ಕೆ ಸಂಯುಕ್ತ ಕರ್ನಾಟಕದ 26 ಅಜೆಂಡಾ appeared first on Samyukta Karnataka.

ಬೆನ್ನು ಚಪ್ಪರಿಸುತ್ತಿದ್ದ ಶ್ರೇಷ್ಠ ಪತ್ರಕರ್ತ ಸುರೇಂದ್ರ ದಾನಿ
ನನಗೂ ಸುರೇಂದ್ರ ದಾನಿ ಅವರಿಗೂ ಎಂದಿನಿಂದ ಸಂಪರ್ಕ ಬಂದಿತೆಂದು ಇಂದು 86ರ ಹೊಸ್ತಿಲಲ್ಲಿ ನಿಂತು ಖಚಿತವಾಗಿ ಹೇಳಲಾರೆ. 1962ರಲ್ಲಿ ಅಂದರೆ ಸುಮಾರು 60 ವರುಷಗಳಿಗಿಂತ ಅಧಿಕ ವರುಷಗಳ ಹಿಂದೆ ನಾನು ಬರೆಯಲು ಅಂಬೆಗಾಲಿಟ್ಟಂದಿನಿಂದ ಬಹುಶಃ ಸುರೇಂದ್ರ ದಾನಿ ಅವರ ಸಂಪರ್ಕ ಬಂದಿದೆ. ನನ್ನ ಮೊದಲ ಲೇಖನ 1962ರಲ್ಲಿ ಅಂದಿನ ಕರ್ಮವೀರ' ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೂ ನನಗೆಸಂಯುಕ್ತ ಕರ್ನಾಟಕ’ ಬಳಗದ ಕಸ್ತೂರಿ',ಕರ್ಮವೀರ’ ಮತ್ತು `ಸಂಯುಕ್ತ ಕರ್ನಾಟಕ’ದ ಸಂಬಂಧ ಅನೂಚಾನವಾಗಿ ನಡೆದುಕೊಂಡುಬಂದಿದೆ. ಅದರೊಂದಿಗೆ ಸುರೇಂದ್ರ ದಾನಿ ಅವರು ಇರುವವರೆಗೂ ಸಂಪರ್ಕ ಇತ್ತು.

ಖಾದಿಧಾರಿಗಳಾದ ದಾನಿ ಅವರು ಮೊದಲ ನೋಟದಲ್ಲಿಯೇ ನನ್ನನ್ನು ಸೆಳೆದಿದ್ದರು. ಅಂತೆಯೇ ಅವರು ನನ್ನ ಅಣ್ಣನಾಗಿದ್ದರು. ನನ್ನ ಬರವಣಿಗೆಯ ಬಗ್ಗೆ ಆಗಾಗ ಸಲಹೆ ಸೂಚನೆಗಳನ್ನು ನೀಡಿ, ತಿದ್ದಿ, ತೀಡಿದರು. ಹೊಸಹೊಸ ವಿಷಯಗಳನ್ನು ಹೇಳಿ ಬರೆಯಿಸುತ್ತಿದ್ದರು. ನಾನಾಗ ಮುಂಬಯಿಯಲ್ಲಿ ನೌಕರಿ ಮಾಡುತ್ತಿದ್ದೆ. ಅವರು ಮುಂಬಯಿಗೂ ಬರುತ್ತಿದ್ದ ನೆನಪು ಮಸುಕುಮಸುಕಾಗಿದೆ. ಅಲ್ಲಿ ಅವರ ಸಮವಯಸ್ಕ ಡಾ. ಶ್ರೀನಿವಾಸ ಹಾವನೂರ ಇರುತ್ತಿದ್ದರು. ಗೆಳೆತನ ಇತ್ತು. ನಾನೂ ಅಲ್ಲಿಗೆ ಹೋಗುತ್ತಿದ್ದೆ. ಹನ್ನೊಂದು ವರುಷಗಳ ನಂತರ ನಾನು ಬೆಳಗಾವಿಗೆ ವರ್ಗವಾಗಿ ಬಂದೆ. ಯಾವಾಗಾದರೊಮ್ಮೆ ಹುಬ್ಬಳ್ಳಿಗೆ ಹೋದಾಗ ತಪ್ಪದೆ ದಾನಿ ಅವರ ಭೆಟ್ಟಿ ಆಗುತ್ತಿತ್ತು.

ಅಂದಿನ ದಿನಗಳಲ್ಲಿ ಅವರಿಗೆ ನಾಡಿನ ಅನೇಕ ರಾಜಕಾರಣಿಗಳು, ಲೇಖಕರು ಹತ್ತಿರದ ಸಂಪರ್ಕದಲ್ಲಿದ್ದರು. ನಗೆಸಾಹಿತಿ ಬೀಚಿ ಅವರಿಗೂ ದಾನಿ ಅವರಿಗೂ ಗೆಳೆತನ. ಬೀಚಿ ಅವರನ್ನು ಕಂಡಾಗ ದಾನಿ ಅವರ ಹೆಸರು ಬರದೆ ಇರುತ್ತಿರಲಿಲ್ಲ. ಹೀಗೆ ನಿರಂತರ ಅವರ ಒಡನಾಟ ಇತ್ತು. ನಾನು ವಿಜಾಪುರಕ್ಕೆ ವರ್ಗವಾಗಿ ಬರುವ ಹೊತ್ತಿಗೆ ಅವರು `ಸಂಯುಕ್ತ ಕರ್ನಾಟಕ’ದಿಂದ ನಿವೃತ್ತಿಯಾಗಿದ್ದರು. ಆದರೆ ನನ್ನ ಅವರ ಸಂಪರ್ಕ ತಪ್ಪಿರಲಿಲ್ಲ. ಆ ದಿನಗಳಲ್ಲಿ ಹುಟ್ಟಿದ ಕರ್ನಾಟಕ ಗಮಕ ಕಲಾ ಪರಿಷತ್ತಿನ ವಿಜಾಪುರ ಜಿಲ್ಲೆಯ ಪ್ರತಿನಿಧಿಯನ್ನಾಗಿ ನನ್ನನ್ನು ನೇಮಕ ಮಾಡಲು ಅವರ ಪಾತ್ರವಿತ್ತು. ಈ ನಿಮಿತ್ತ ಅನೇಕ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿತ್ತು.

ಇದನ್ನೂ ಓದಿ: ಅರುಣ್ ಯೋಗಿರಾಜ್ ಕೆತ್ತಿದ ಶಾಮನೂರು ಪುತ್ಥಳಿ ಅನಾವರಣ

ಸುರೇಂದ್ರ ದಾನಿ ಅವರಿಗೆ ಗದುಗಿನ ಕವಿ ಕುಮಾರವ್ಯಾಸನೆಂದರೆ ಅಚ್ಚುಮೆಚ್ಚು. ಅವರ ಬಾಯಿಯಿಂದ ಕುಮಾರವ್ಯಾಸ ಭಾರತದ ವ್ಯಾಖ್ಯಾನ ಕೇಳಬೇಕು. ಕಾವ್ಯವನ್ನು ಅರಗಿಸಿಕೊಂಡಿದ್ದರು. ಅನಂತರದ ದಿನಗಳಲ್ಲಿ ಕುಮಾರವ್ಯಾಸ ಭಾರತದ ಎಲ್ಲ ಪರ್ವಗಳನ್ನು ಸರಳಾನುವಾದ ರೂಪದಲ್ಲಿ ಹೊರತರಬೇಕೆಂಬ ಹಂಬಲ ಅವರಲ್ಲಿತ್ತು. ಪ್ರಾರಂಭದಲ್ಲಿ ವಿರಾಟ ಪರ್ವ ಪ್ರಕಟಿಸಿದರು. ಅದರ ಬಿಡುಗಡೆಗೆ ಕೋಳಿವಾಡಕ್ಕೆ ಹೋದ ನೆನಪು.

ವಿಜಾಪುರದಲ್ಲಿ ನೌಕರಿ ಮಾಡುತ್ತಿದ್ದಾಗ ದಾನಿ ಅವರು ನನ್ನ ಆಫೀಸಿಗೂ ಬಂದು ಭೆಟ್ಟಿಯಾದ ನೆನಪು. ಅವರು ಆಗ ಸಂಯುಕ್ತ ಕರ್ನಾಟಕದಿಂದ ನಿವೃತ್ತಿಯಾಗಿದ್ದರು. ಮರಾಠಿಯ ಸುಪ್ರಸಿದ್ಧ ಕೇಸರಿ ಪತ್ರಿಕೆಯ ಕನ್ನಡ ಆವೃತ್ತಿಯ `ಕೇಸರಿ ಗರ್ಜನೆ’ಯ ಸಂಪಾದಕರಾಗಿ ಒಂದು ಹೊಸ ಹೆಜ್ಜೆಯನ್ನು ಇಟ್ಟಿದ್ದರು. ಅದರಲ್ಲಿ ಅವರೇ ಹೇಳಿ ಬರೆಯಿಸಿದ ನನ್ನ ಲೇಖನಗಳನ್ನು ಪ್ರಕಟಿಸಿದ್ದರು.

ಒಂದು ಸಲ ಬಂದಾಗ ನಾನು ನಿವೃತ್ತಿ ಪಡೆದು ಕೇಸರಿ ಗರ್ಜನೆ ಸೇರಲು ಸೂಚನೆ ಕೊಟ್ಟಿದ್ದರು. ಸಂಸಾರದ ಬಂಧನದಲ್ಲಿ ಸಿಲುಕಿದ, ಜೊತೆಗೆ ನಿಗದಿತ ಆದಾಯದ ಕೇಂದ್ರ ಸರ್ಕಾರದ ನೌಕರಿಯಲ್ಲಿದ್ದ ನಾನು ಅವರ ಸೂಚನೆಯನ್ನು ಪಾಲಿಸಲು ಆಗಲಿಲ್ಲ. ಹಾಗೆ ದಿಢೀರೆಂದು ನಿರ್ಧಾರ ತೆಗೆದುಕೊಳ್ಳುವ ಜಾಯಮಾನವೂ ನನ್ನದಾಗಿರಲಿಲ್ಲ.

ಇದನ್ನೂ ಓದಿ: ಎಸ್ಸೆಸ್ ದಾವಣಗೆರೆಯ ಬ್ರಾಂಡ್ ಅಂಬಾಸಿಡರ್: ಎಸ್ಸೆಸ್ಸೆಂ ಶ್ಲಾಘನೆ

ಸರಳ, ಸಜ್ಜನ, ನವಿರು ಹಾಸ್ಯದ ಸುರೇಂದ್ರ ದಾನಿಯವರಂಥ ಪತ್ರಿಕೋದ್ಯೋಗಿಯನ್ನು ಇಂದು ಕಾಣುವುದು ಕಷ್ಟ. ಜೀವನದ ಕೆಲವು ಕಾಲ ಅವರೊಂದಿಗೆ ಒಡನಾಟ ಇಟ್ಟುಕೊಂಡದ್ದೇ ನನ್ನ ಒಂದು ಭಾಗ್ಯ. ಅವರು ಅಗಲಿದ ದಿನ ತುಂಬ ದುಃಖಪಟ್ಟಿದ್ದೆ. ಬೆನ್ನು ಚಪ್ಪರಿಸುತ್ತಿದ್ದ ಅಣ್ಣನನ್ನು ಕಳೆದುಕೊಂಡಂತಾಗಿತ್ತು. ಅವರ ನೆನಪು ನನ್ನೊಳಗೆ ಸದಾ ಹಸಿರು.

– ಕೃಷ್ಣ ಕೊಲ್ಹಾರ ಕುಲಕರ್ಣಿ,
ಹಿರಿಯ ಸಂಶೋಧಕರು

The post ಬೆನ್ನು ಚಪ್ಪರಿಸುತ್ತಿದ್ದ ಶ್ರೇಷ್ಠ ಪತ್ರಕರ್ತ ಸುರೇಂದ್ರ ದಾನಿ appeared first on Samyukta Karnataka.

ಎಚ್ಚರ! ಒಟಿಪಿ ಕೇಳದೇ ಮೊಬೈಲ್ ಹ್ಯಾಕ್ ಮಾಡ್ತಾರೆ!
ವಾಟ್ಸಾಪ್ ಹೈಜಾಕ್ ಮಾಡುವ ಹೊಸ ದಂಧೆ `ಘೋಸ್ಟ್‌ಪೇರಿಂಗ್’ | ಡಿವೈಸ್ ಲಿಂಕ್ ಮಾಡಿ ಮೋಸ

ನಾನಾ ರೀತಿಯ ಸೈಬರ್ ವಂಚನೆಗಳ ಸಾಲಿಗೆ ಇದೀಗ ಹೊಸತೊಂದು ದಂಧೆ ಸೇರ್ಪಡೆಯಾಗಿದೆ. ಅದು ಘೋಸ್ಟ್ ಪೇರಿಂಗ್. ಇಲ್ಲಿ ನಿಮ್ಮ ಬಳಿ ಒಟಿಪಿ ಕೇಳದೆಯೇ, ಸ್ವಿಮ್ ಸ್ವಾಪ್ ಮಾಡದೆಯೇ, ವೆರಿಫಿಕೇಶನ್ ಕೋಡ್ ಕಳುಹಿ ಸದೆಯೇ, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡದೆಯೇ ವಂಚನೆ ಮಾಡಲಾಗುತ್ತದೆ. ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಾಪ್‌ಗೆ ತಮ್ಮ ಮೊಬೈಲ್ ಪೇರ್ ಮಾಡಿಕೊಂಡು, ನಿಮ್ಮ ಮೊಬೈಲನ್ನು ಸಂಪೂರ್ಣ ಹೈಜಾಕ್ ಮಾಡುವ ದಂಧೆಯಿದು. ನಿಮಗೆ ಗೊತ್ತಾಗುವವರೆಗೂ ಅವರು ನಿಮ್ಮ ಮೊಬೈಲನ್ನು ತಮ್ಮ ಮೊಬೈಲಿನಂತೆಯೇ ಬಳಸಬಲ್ಲರು!

ಏನಿದು ಘೋಸ್ಟ್ ಪೇರಿಂಗ್?: ನಮಗೆ ಗೊತ್ತಿಲ್ಲದೆಯೇ ನಮ್ಮ ಮೊಬೈಲಿನಲ್ಲಿರುವ ವಾಟ್ಸಾಪ್ ಅನ್ನು ಇನ್ನೊಬ್ಬರು ತಮ್ಮ ಮೊಬೈಲ್‌ಗೆ ಪೇರಿಂಗ್ ಮಾಡಿಕೊಂಡು ಬಳಸುವುದೇ ಘೋಸ್ಟ್ ಪೇರಿಂಗ್. ಇದರಲ್ಲಿ ಕೇವಲ ವಾಟ್ಸಾಪ್ ಮಾತ್ರ ಹೈಜಾಕ್ ಆಗುವುದಿಲ್ಲ. ಅದ ರಲ್ಲಿನ ಮಾಹಿತಿಯನ್ನು ಆಧರಿಸಿ ಕ್ರಮೇಣ ಇಡೀ ಫೋನನ್ನು ಹೈಜಾಕರ್‌ಗಳು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: ‘ನರೇಗಾ’ಗೆ ಪರ್ಯಾಯ VB—G RAM G ಕಾಯ್ದೆಗೆ ರಾಷ್ಟ್ರಪತಿ ಅಂಕಿತ

ಒಟಿಪಿ, ಪಾಸ್‌ವರ್ಡ್ ಬೇಕಿಲ್ಲ: ಈ ರೀತಿ ಮೊಬೈಲನ್ನು ಹ್ಯಾಕ್ ಮಾಡಲು ದಂಧೆಕೋರರು ಒಟಿಪಿ ಅಥವಾ ಪಾಸ್‌ವರ್ಡ್ಗಳನ್ನು ಬಳಸುವುದಿಲ್ಲ. ಸಾಂಪ್ರದಾಯಿಕ ಹ್ಯಾಕಿಂಗ್ ವಿಧಾನಗಳನ್ನು ಬಿಟ್ಟು, ಮೊಬೈಲ್ ಬಳಕೆದಾರರು ಹ್ಯಾಕಿಂಗ್‌ಗೆ ಸ್ವತಃ ತಾವೇ ಒಳಗಾಗುವಂತೆ ಮಾಡುವ ತಂತ್ರವಿದು. ಹೀಗೆ ಹ್ಯಾಕ್ ಆದವರಿಗೆ ತಾವು ಹ್ಯಾಕ್ ಆಗಿದ್ದೇವೆ ಎಂಬುದೇ ತಿಳಿಯುವುದಿಲ್ಲ. ಏಕೆಂದರೆ ವಿಶ್ವಾಸಾರ್ಹ ವ್ಯಕ್ತಿಗಳ ಸಂದೇಶದ ಮೂಲಕವೇ ಇವರು ಹ್ಯಾಕ್ ಆಗಿರುತ್ತಾರೆ. ಅಷ್ಟು ನಾಜೂಕಾಗಿ ಈ ಘೋಸ್ಟ್‌ಪೇರಿಂಗ್ ವಿಧಾನವನ್ನು ಹೆಣೆಯಲಾಗಿದೆ.

ನಂಬಿಕಸ್ಥರಿಂದಲೇ ಹರಡುವ ಸ್ಕ್ಯಾಮ್: ನಿಮ್ಮ ಮೊಬೈಲ್‌ನ ನಿಯಂತ್ರಣ ದಂಧೆಕೋರರಿಗೆ ಸಿಕ್ಕರೆ ನಿಮ್ಮ ವಾಟ್ಸಾಪ್ ಲಿಸ್ಟ್‌ನಲ್ಲಿರುವ ಎಲ್ಲರಿಗೂ ಅವರು ಸಂದೇಶ ಕಳುಹಿಸಬಹುದು. ಅವರಲ್ಲಿ ಯಾರಾದರೂ ಹ್ಯಾಕಿಂಗ್‌ಗೆ ಒಳಗಾದರೆ ಅವರ ಸ್ನೇಹಿತರಿಗೆಲ್ಲ ಹ್ಯಾಕರ್‌ಗಳು ಸಂದೇಶ ಕಳುಹಿಸಬಹುದು. ಹೀಗಾಗಿ ನಂಬಿಕಸ್ಥರ ಮೂಲಕವೇ ಒಬ್ಬರಿಂದ ಒಬ್ಬರಿಗೆ ಶರವೇಗದಲ್ಲಿ ಈ ದಂಧೆ ಹರಡುತ್ತಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್

ಪಾರಾಗುವುದು ಹೇಗೆ?: ಆಗಾಗ ವಾಟ್ಸಾಪ್‌ನಲ್ಲಿ ಲಿಂಕ್ಡ್ ಡಿವೈಸ್ ಚೆಕ್ ಮಾಡುತ್ತಿರಿ. ಗೊತ್ತಿಲ್ಲದ ಸಂಪರ್ಕದ ಜೊತೆ ಲಿಂಕ್ ಆಗಿದ್ದರೆ ಅದನ್ನು ತಕ್ಷಣ ತೆಗೆದುಹಾಕಿ ಕೊಂಚ ಅನುಮಾನವಿದ್ದರೂ ಪೇರಿಂಗ್ ಕೋಡ್‌ಗಳನ್ನು ಯಾವುದೇ ಕಾರಣಕ್ಕೆ ನಮೂದಿಸಬೇಡಿ. 2-ಸ್ಟೆಪ್ ವೆರಿಫಿಕೇಶನ್ ವಿಧಾನವನ್ನು ತಪ್ಪದೇ ಅಳವಡಿಸಿಕೊಳ್ಳಿ ಪರಿಚಯಸ್ಥರಿಂದ ಬಂದ ಸಂದೇಶ ಅನಿರೀಕ್ಷಿತವಾಗಿದ್ದರೆ ಇನ್ನೊಮ್ಮೆ ಖಚಿತಪಡಿಸಿಕೊಳ್ಳುವುದು ಉತ್ತಮ

ನೀವು ಹೇಗೆ ಹ್ಯಾಕ್ ಆಗುತ್ತೀರಿ?: ಮೊದಲಿಗೆ ನಿಮ್ಮ ಪರಿಚಯದವರೊಬ್ಬರ ಮೊಬೈಲ್ ನಿಂದಲೇ ನಿಮಗೆ ವಾಟ್ಸಾಪ್ ಸಂದೇಶ ಬರುತ್ತದೆ. ಹಾಯ್, ನಿನ್ನದೊಂದು ಫೋಟೋ ನೋಡಿದೆ' ಎಂಬಂತಹ ಮಾಮೂಲಿ ಸಂದೇಶ ಅದಾಗಿರುತ್ತದೆ ಅದರ ಜೊತೆಗೇ ಒಂದು ಲಿಂಕ್ ಇರುತ್ತದೆ. ಆದರೆ ಅದು ಲಿಂಕ್ ರೀತಿ ಕಾಣಿಸುವುದಿಲ್ಲ. ಬದಲಿಗೆ ವಾಟ್ಸಾಪ್‌ನೊಳಗಿನ ಫೇಸ್‌ ಬುಕ್‌ನ ಪ್ರಿವ್ಯೂ ರೀತಿ ಇರುತ್ತದೆ. ಹೇಗಿದ್ದರೂ ಇದು ಪರಿಚಯಸ್ಥರ ಮೆಸೇಜ್ ಎಂದು ನೀವು ಫೋಟೋ ನೋಡಲು ಲಿಂಕ್ ಒತ್ತುತ್ತೀರಿ ಆಗ ಫೇಸ್‌ಬುಕ್ ರೀತಿ ಕಾಣಿಸುವ ಫೇಕ್ ವೆಬ್‌ಪೇಜ್ ತೆರೆದುಕೊಳ್ಳುತ್ತೆ. ಅಲ್ಲಿವೆರಿಫೈ’ ಮಾಡಿರಿ ಸಂದೇಶ ಬರುತ್ತದೆ,

ಇದನ್ನೂ ಓದಿ: ಪಾಕ್‌ಗೆ ರಹಸ್ಯ ಮಾಹಿತಿ ಲೀಕ್ ಮತ್ತೊಬ್ಬ ಆರೋಪಿಯ ಬಂಧನ

ವೆರಿಫೈ ಮಾಡಲು ನಿಮ್ಮ ಫೋನ್ ನಂಬರ್ ಕೇಳಲಾಗುತ್ತದೆ. ಅದನ್ನು ಹಾಕಿದಾಗ ವಾಟ್ಸಾಪ್‌ನಲ್ಲಿ ಪೇರಿಂಗ್ ಕೋಡ್ ಜನರೇಟ್ ಆಗುತ್ತದೆ. ನಂತರ ಫೇಕ್ ಪೇಜ್‌ನವರು ನಿಮಗೆ ಈ ಕೋಡ್ ಅನ್ನು ವಾಟ್ಸಾಪ್‌ನಲ್ಲಿ ನಮೂದಿಸುವಂತೆ ಕೋರುತ್ತಾರೆ
ನೀವು ಕೋಡ್ ಹಾಕಿದಾಗ ಹ್ಯಾಕರ್ ಬಳಿ ಇರುವ ಡಿವೈಸ್‌ಗೆ ನಿಮ್ಮ ಮೊಬೈಲಿನಲ್ಲಿರುವ ವಾಟ್ಸಾಪ್ ಬಳಸಲು ಅನುಮತಿ ಸಿಗುತ್ತದೆ. ಆಗ ನಿಮ್ಮ ಮೊಬೈಲಿನಲ್ಲಿರುವ ಸಂದೇಶ ಓದಲು, ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು, ನಿಮ್ಮ ಹೆಸರಲ್ಲಿ ಬೇರೆಯವರಿಗೆ ಸಂದೇಶ ಕಳಿಸಲು ಹ್ಯಾಕರ್‌ಗೆ ಸಾಧ್ಯವಾಗುತ್ತದೆ.

ಇಷ್ಟೆಲ್ಲ ಆದರೂ ನಿಮ್ಮ ಮೊಬೈಲಿನಲ್ಲಿ ವಾಟ್ಸಾಪ್ ಎಂದಿನಂತೆ ಕೆಲಸ ಮಾಡುತ್ತಲೇ ಇರುತ್ತದೆ. ಹೀಗಾಗಿ ನಿಮಗೆ ಅನುಮಾನ ಬರುವುದಿಲ್ಲ. ಕ್ರಮೇಣ ನಿಮ್ಮ ಮೊಬೈಲಿನ ಸಂಪೂರ್ಣ ನಿಯಂತ್ರಣ ಸಿಕ್ಕಾಗ ಹ್ಯಾಕರ್‌ಗಳು ಅಲ್ಲಿನ ವಿವರವನ್ನೇ ಬಳಸಿ ಹಣವನ್ನೂ ಲಪಟಾಯಿಸಬಹುದು. ಜೆನ್ ಡಿಜಿಟಲ್ ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆ ಘೋಸ್ಟ್‌ಪೇರಿಂಗ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ವಿದೇಶಗಳಲ್ಲೂ ‘45’ ಅಬ್ಬರ: ಕೆನಡಾದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಸೋಲ್ಡ್ ಔಟ್

The post ಎಚ್ಚರ! ಒಟಿಪಿ ಕೇಳದೇ ಮೊಬೈಲ್ ಹ್ಯಾಕ್ ಮಾಡ್ತಾರೆ! appeared first on Samyukta Karnataka.