ತಾಜಾ ಸುದ್ದಿ Archives - Samyukta Karnataka

ಮಂಜ ಮಾತು ಕೇಳಿ ಮತ್ತೆ ಕಿರಿಕಿರಿಗೊಂಡ ಗಗನ್ ಚಿನ್ನಪ್ಪ: ವಾಕ್ಸಮರಕ್ಕೆ ವೇದಿಕೆಯಾಯ್ತು ವಿಐಪಿ ಉಸ್ತುವಾರಿ!
‘ಬಿಗ್ ಬಾಸ್ ಕನ್ನಡ 13’ ಅಖಾಡದಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಕಾದಾಟ ಕಾವೇರುತ್ತಿದೆ. ‘ಅಗ್ನಿಪರೀಕ್ಷೆ’ಯಲ್ಲಿ ಗೆದ್ದು ಮನೆಗೆ ಕಾಲಿಟ್ಟಿರುವ ‘ಮಾಡ್ರನ್ ಮಹಾಕವಿ’ ಮಂಜ ಅತಿಯಾದ ಮಾತುಗಳು ಇತರ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿವೆ. ಮೊದಲ ದಿನವೇ ಕಿರಣ್ ಶಾಸ್ತ್ರಿ, ಲಿಖಿತ್ ಹಾಗೂ ಮಂಜ ವಿರುದ್ಧ ಮನೆಯವರು ಅಸಮಾಧಾನ ಹೊರಹಾಕಿದ್ದರು. ಲೈಕ್-ಡಿಸ್‌ಲೈಕ್ ಟಾಸ್ಕ್‌ನಲ್ಲಿಯೇ ಗಗನ್ ಚಿನ್ನಪ್ಪ ಮತ್ತು ಮಂಜಗೆ ನೇರವಾಗಿ ವಾರ್ನಿಂಗ್ ನೀಡಿದ್ದರು. ಇದೀಗ ಅದೇ ಹಳೆಯ ಮುನಿಸು ಹೊಸ ಟಾಸ್ಕ್‌ನಲ್ಲೂ ಮುಂದುವರಿದು ಇಬ್ಬರ ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೆದಿದೆ.

ಪ್ರಸ್ತುತ ನಡೆದ ‘ತಿನ್ನುವ ಟಾಸ್ಕ್’ನಲ್ಲಿ ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಮನೆಯೊಳಗಿನ ಸ್ಪರ್ಧಿಗಳಿಗೆ ಸವಾಲು ನೀಡಲಾಗಿತ್ತು. ತಮಗೆ ನೀಡಿದ ಎಲ್ಲಾ ಆಹಾರ ಪದಾರ್ಥಗಳನ್ನು ಮೊದಲು ತಿಂದು ಮುಗಿಸುವ ತಂಡ ಗೆಲ್ಲುತ್ತದೆ ಎಂಬ ನಿಯಮವಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರ ತಂಡದಿಂದ ಕೆಟ್ಟದಾಗಿ ತಯಾರಿಸಿದ ತಿಂಡಿಗಳನ್ನು ತಿನ್ನಲು ಲಿಖಿತ್ ಮತ್ತು ಮಂಜ ಬಂದಿದ್ದರೆ, ಮನೆಯೊಳಗಿನ ಸ್ಪರ್ಧಿಗಳ ತಂಡದಿಂದ ಜಗದೀಶ್ ಹಾಗೂ ಓಂ ಪ್ರಕಾಶ್ ರಾವ್ ಕಣಕ್ಕಿಳಿದಿದ್ದರು. ಟಾಸ್ಕ್ ಆರಂಭದಲ್ಲೇ “ಎಲ್ಲವನ್ನೂ ಬಡಿದು ಬಾಯಿಗೆ ಹಾಕಿಕೊಂಡು ತೇಗಿ ಹೋಗುತ್ತೇನೆ” ಎಂದು ಮಂಜ ಪೂರ್ಣ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದರು.

ವಿಐಪಿ ಸ್ಟೇಟಸ್ ಹೊಂದಿದ್ದ ಗಗನ್ ಚಿನ್ನಪ್ಪ ಈ ಟಾಸ್ಕ್‌ನ ಉಸ್ತುವಾರಿ ವಹಿಸಿಕೊಂಡಿದ್ದರು. ಆಟದ ಮಧ್ಯೆ ಮಂಜ ಮಾತು ಬೆಳೆಸಿದಾಗ ಕೋಪಗೊಂಡ ಗಗನ್, “ಅಧಿಕ ಪ್ರಸಂಗ ಮಾತಾಡಬೇಡ, ಈಗಲೇ ಹೇಳುತ್ತಿದ್ದೇನೆ” ಎಂದು ನೇರವಾಗಿಯೇ ಗದರಿದರು. ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಮಂಜ, “ಆರಾಮಾಗಿ ಮಾತಾಡು” ಎಂದರು. ಗಗನ್ ಮತ್ತಷ್ಟು ಏರಿದ ಧ್ವನಿಯಲ್ಲಿ “ಸೈಡ್‌ಗೆ ಹೋಗ್ರಿ” ಎಂದಾಗ, “ಆರಾಮಾಗಿ.. ಹಾ.. ಅದೇ ಬೇಸ್ ವಾಯ್ಸ್.. ನಮ್ಮದೂನೂ ಇದೆ” ಎಂದು ಮಂಜ ಟಾಂಟ್ ನೀಡಿದರು. ಇಬ್ಬರ ನಡುವಿನ ಈ ಜಗಳ ಪ್ರೇಕ್ಷಕರ ಗಮನ ಸೆಳೆದಿದೆ.

ಒಟ್ಟಾರೆಯಾಗಿ.. ಅಂತಿಮವಾಗಿ ಈ ಕಠಿಣ ತಿನ್ನುವ ಟಾಸ್ಕ್‌ನಲ್ಲಿ ಮಂಜ ಹಾಗೂ ಲಿಖಿತ್ ಜೋಡಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಈ ಗೆಲುವಿನಿಂದಾಗಿ ವಿಮಾನದಲ್ಲಿದ್ದ ಮಂಜ ಪ್ರಮುಖ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟು ಸುರಕ್ಷಿತ ವಲಯ (ಸೇಫ್ ಝೋನ್) ತಲುಪಿದ್ದಾರೆ. ಮತ್ತೊಂದೆಡೆ, ಸೋತ ಓಂ ಪ್ರಕಾಶ್ ರಾವ್ ಮತ್ತೆ ವಿಮಾನವನ್ನು ಏರುವ ಮೂಲಕ ಡೇಂಜರ್ ಝೋನ್ ಪಟ್ಟಿಗೆ ಸೇರಿದ್ದಾರೆ.

The post ಮಂಜ ಮಾತು ಕೇಳಿ ಮತ್ತೆ ಕಿರಿಕಿರಿಗೊಂಡ ಗಗನ್ ಚಿನ್ನಪ್ಪ: ವಾಕ್ಸಮರಕ್ಕೆ ವೇದಿಕೆಯಾಯ್ತು ವಿಐಪಿ ಉಸ್ತುವಾರಿ! appeared first on Samyukta Karnataka.

Bigg Boss Kannada Season 13ಕ್ಕೆ ಸರ್ಕಾರದ ಬ್ರೇಕ್? ಶೋ ಆರಂಭಕ್ಕೆ ದಿನಗಳಿರುವಾಗಲೇ ಸಚಿವರಿಂದ ಶಾಕಿಂಗ್ ಹೇಳಿಕೆ!
Bigg Boss Kannada Season 13: ಕಿಚ್ಚ ಸುದೀಪ್ ನಿರೂಪಣೆಯ ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದರೂ, ರಿಯಾಲಿಟಿ ಶೋ ಆಯೋಜಕರಿಗೆ ಈ ಬಾರಿ ಸರ್ಕಾರದ ಅನುಮತಿ ಪಡೆಯುವುದು ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ಸೆಪ್ಟೆಂಬರ್ 6 ರಂದು ಶೋ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದರೂ ಇನ್ನೂ ಅಧಿಕೃತ ಅನುಮತಿ ಸಿಕ್ಕಿಲ್ಲ ಎಂಬ ವಿಷಯ ಈಗ ಸಂಚಲನ ಮೂಡಿಸಿದೆ.

ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, “ಬಿಗ್ ಬಾಸ್ ನಡೆಸಲು ಆಯೋಜಕರಿಗೆ ಇನ್ನೂ ಅನುಮತಿ ನೀಡಿಲ್ಲ. ಅವರು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆಯೇ ಎಂದು ಪರಿಶೀಲಿಸಿ ಮಾಹಿತಿ ನೀಡುತ್ತೇನೆ,” ಎಂದು ತಿಳಿಸಿದರು. ಅಷ್ಟೇ ಅಲ್ಲದೆ, ಒಂದು ವೇಳೆ ಆಯೋಜಕರು ಯಾವುದಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಕಟ್ಟುನಿಟ್ಟಾಗಿ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ 12ನೇ ಸೀಸನ್ ವೇಳೆ ಬೆಂಗಳೂರಿನ ಜಾಲಿವುಡ್ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದ ಸಂದರ್ಭದಲ್ಲಿ ಪರಿಸರ ಹಾಗೂ ವನ್ಯಜೀವಿ ಸಂಬಂಧಿತ ನಿಯಮಗಳ ಉಲ್ಲಂಘನೆಯ ಆರೋಪ ಕೇಳಿಬಂದಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಕಹಿ ನೆನಪಿನ ಹಿನ್ನೆಲೆಯಲ್ಲಿ ಈ ಬಾರಿ ಇಲಾಖೆಯು ಹೆಚ್ಚಿನ ಎಚ್ಚರಿಕೆ ವಹಿಸಿದೆ. ಪ್ರೋಮೋ ಮತ್ತು ಆಡಿಷನ್ ಪ್ರಕ್ರಿಯೆಗಳು ಪೂರ್ಣಗೊಂಡು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಹೊತ್ತಿನಲ್ಲಿ, ಸರ್ಕಾರದ ಈ ನಿಲುವು ಆಯೋಜಕರಲ್ಲಿ ಆತಂಕ ಮೂಡಿಸಿದೆ.

The post Bigg Boss Kannada Season 13ಕ್ಕೆ ಸರ್ಕಾರದ ಬ್ರೇಕ್? ಶೋ ಆರಂಭಕ್ಕೆ ದಿನಗಳಿರುವಾಗಲೇ ಸಚಿವರಿಂದ ಶಾಕಿಂಗ್ ಹೇಳಿಕೆ! appeared first on Samyukta Karnataka.

ಆಲಿಕಲ್ಲು ಮಳೆ: ರೈತರಿಗೆ ವರದಾನವೋ ಅಥವಾ ಶಾಪವೋ? ಇಲ್ಲಿದೆ ಡಿಟೇಲ್ಸ್
ಬೆಂಗಳೂರು: ರಾಜ್ಯದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಆಲಿಕಲ್ಲು ಮಳೆಯು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಪ್ರಕೃತಿಯ ಈ ವಿಸ್ಮಯಕಾರಿ ವಿದ್ಯಮಾನವು ನೋಡುಗರಿಗೆ ಹಿತವೆನಿಸಿದರೂ, ಇದರ ಪರಿಣಾಮಗಳು ಮಾತ್ರ ಪರಿಸರ ಮತ್ತು ಕೃಷಿ ಕ್ಷೇತ್ರದ ಮೇಲೆ ಆಳವಾದ ಪ್ರಭಾವ ಬೀರುತ್ತವೆ.

ಆಲಿಕಲ್ಲು ಮಳೆಯಿಂದಾಗುವ ಹಾನಿಗಳು: ಆಲಿಕಲ್ಲು ಮಳೆಯಿಂದಾಗುವ ಅತಿ ದೊಡ್ಡ ಹೊಡೆತ ಬೀಳುವುದು ಕೃಷಿ ವಲಯಕ್ಕೆ. ಗಾಳಿಯಲ್ಲಿ ವೇಗವಾಗಿ ಬರುವ ಹಿಮದ ಗಡ್ಡೆಗಳು ಬೆಳೆದು ನಿಂತ ಮಾವು, ದ್ರಾಕ್ಷಿ, ದಾಳಿಂಬೆ ಮತ್ತು ತರಕಾರಿ ಬೆಳೆಗಳನ್ನು ಅ‌ ಕ್ಷರಶಃ ನಾಶಪಡಿಸುತ್ತವೆ. ಇದು ರೈತರ ಶ್ರಮವನ್ನು ಮಣ್ಣುಪಾಲು ಮಾಡುವುದಲ್ಲದೆ, ಆರ್ಥಿಕವಾಗಿ ದೊಡ್ಡ ಸಂಕಷ್ಟ ತಂದೊಡ್ಡುತ್ತದೆ.

ಕೇವಲ ಕೃಷಿಯಷ್ಟೇ ಅಲ್ಲದೆ, ಅತಿ ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಾಗ ಮನೆಗಳ ಮೇಲ್ಛಾವಣಿ (ಹೆಂಚು ಅಥವಾ ಶೀಟ್), ವಾಹನಗಳ ಗಾಜುಗಳು ಜಖಂಗೊಳ್ಳುತ್ತವೆ. ಹಕ್ಕಿಗಳು ಮತ್ತು ಸಣ್ಣಪುಟ್ಟ ಪ್ರಾಣಿಗಳು ಈ ಮಳೆಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಆಲಿಕಲ್ಲಿನಿಂದ ಪ್ರಯೋಜನೆ: ಎಲ್ಲವೂ ನಷ್ಟವೇ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಆಲಿಕಲ್ಲು ಮಳೆಯಿಂದ ಕೆಲವು ಸಕಾರಾತ್ಮಕ ಅಂಶಗಳೂ ಇವೆ. ಮುಖ್ಯವಾಗಿ ವಾತಾವರಣದಲ್ಲಿನ ಅತಿಯಾದ ಶಾಖವನ್ನು ತಕ್ಷಣವೇ ಕಡಿಮೆ ಮಾಡಿ ತಂಪು ವಾತಾವರಣ ನಿರ್ಮಿಸಲು ಇದು ಸಹಕಾರಿ. ಭೂಮಿಯ ಆಳಕ್ಕೆ ತೇವಾಂಶ ಇಳಿಯಲು ಮತ್ತು ಅಂತರ್ಜಲ ಮಟ್ಟ ವೃದ್ಧಿಸಲು ಇಂತಹ ಮಳೆ ಪೂರಕವಾಗಿರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ, ಆಲಿಕಲ್ಲುಗಳು ಬೀಳುವಾಗ ವಾತಾವರಣದಲ್ಲಿರುವ ಧೂಳಿನ ಕಣಗಳನ್ನು ಮತ್ತು ಮಾಲಿನ್ಯಕಾರಕಗಳನ್ನು ನೆಲಕ್ಕೆ ತಳ್ಳುತ್ತವೆ, ಇದರಿಂದ ಗಾಳಿಯು ಶುದ್ಧವಾಗುತ್ತದೆ.

ಓದುಗರ ಗಮನಕ್ಕೆ: ಆಲಿಕಲ್ಲು ಮಳೆ ಬರುವ ಮುನ್ಸೂಚನೆ ಇದ್ದಾಗ ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವುದು ಉತ್ತಮ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರವು ಸೂಕ್ತ ಪರಿಹಾರ ನೀಡುವ ಮೂಲಕ ನಷ್ಟ ಅನುಭವಿಗಳ ನೆರವಿಗೆ ಧಾವಿಸಬೇಕಿದೆ.

ಒಟ್ಟಾರೆಯಾಗಿ.. ಆಲಿಕಲ್ಲು ಮಳೆಯು ಪ್ರಕೃತಿಯ ಒಂದು ಸೌಂದರ್ಯವಾದರೂ, ಅದರ ತೀವ್ರತೆ ಹೆಚ್ಚಾದಾಗ ಅದು ಮಾನವನ ಬದುಕಿಗೆ ಸವಾಲಾಗಿ ಪರಿಣಮಿಸುತ್ತದೆ.

The post ಆಲಿಕಲ್ಲು ಮಳೆ: ರೈತರಿಗೆ ವರದಾನವೋ ಅಥವಾ ಶಾಪವೋ? ಇಲ್ಲಿದೆ ಡಿಟೇಲ್ಸ್ appeared first on Samyukta Karnataka.

‘ನನ್ನನ್ನು ಬಿಟ್ಟು ಹೋಗಬೇಡಿ’: ವೈದ್ಯರ ಕೈಗವಸು ಬಿಗಿಯಾಗಿ ಹಿಡಿದ ನವಜಾತ ಶಿಶು, ವಿಡಿಯೋ ವೈರಲ್!
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಹರಿದಾಡುತ್ತವೆ. ಆದ್ರೆ ಕೆಲವು ದೃಶ್ಯಗಳು ಮಾತ್ರʻ ನಮ್ಮ ಮನಸ್ಸನ್ನು ಪೂರ್ತಿಯಾಗಿ ಆವರಿಸಿಕೊಳ್ಳುತ್ತವೆ. ಅಂತಹದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ (ಟ್ವಿಟರ್) ವೇದಿಕೆಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣಾಲಿಗಳು ತೇವವಾಗುವಂತೆ ಮಾಡಿದೆ.

ವೈದ್ಯರ ಕೈ ಹಿಡಿದ ಪುಟ್ಟ ಕಂದಮ್ಮ: ಯಶಸ್ವಿ ಹೆರಿಗೆಮಕನಯ ನಂತರ ವೈದ್ಯರು ತಮ್ಮ ಉಪಕರಣಗಳನ್ನು ಸರಿಹೊಂದಿಸಲು ಮಗುವಿನಿಂದ ದೂರ ಸರಿಯಲು ಪ್ರಯತ್ನಿಸುತ್ತಾರೆ. ಆದ್ರೆ ಆ ಕ್ಷಣದಲ್ಲಿ ನಡೆದದ್ದು ಮಾತ್ರ ಪವಾಡದಂತೆ ಭಾಸವಾಗುತ್ತದೆ. ಜಗತ್ತಿಗೆ ಬಂದು ಕೆಲವೇ ಸೆಕೆಂಡುಗಳಾಗಿರುವ ಆ ಪುಟ್ಟ ನವಜಾತ ಶಿಶು, ತನ್ನ ಪುಟ್ಟ ಕೈಗಳಿಂದ ವೈದ್ಯರ ಶಸ್ತ್ರಚಿಕಿತ್ಸಾ ಕೈಗವಸನ್ನು (Surgical Glove) ಬಹಳ ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ವೈದ್ಯರು ಮತ್ತು ನರ್ಸ್‌ಗಳು ಎಷ್ಟೇ ಸೌಮ್ಯವಾಗಿ ಕೈ ಬಿಡಿಸಲು ಪ್ರಯತ್ನಿಸಿದರೂ, ಆ ಮಗು ಮಾತ್ರ “ನನ್ನನ್ನು ಬಿಟ್ಟು ಈಗಲೇ ಹೋಗಬೇಡಿ” ಎಂದು ಬೇಡಿಕೊಳ್ಳುವಂತೆ ಹಠ ಹಿಡಿದು ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುತ್ತಿತ್ತು.

ವಿಜ್ಞಾನದ ಪ್ರಕಾರ: ಈ ದೃಶ್ಯವು ನೋಡುಗರಿಗೆ ಭಾವನಾತ್ಮಕವಾಗಿ ಕಂಡರೂ, ವೈದ್ಯಕೀಯ ವಿಜ್ಞಾನವು ಇದಕ್ಕೆ ಆಸಕ್ತಿದಾಯಕ ವಿವರಣೆಯನ್ನು ನೀಡುತ್ತದೆ. ಇದನ್ನು ‘ಪಾಮರ್ ಗ್ರಾಸ್ಪ್ ರಿಪ್ಲೆಕ್ಸ್’ (Palmar Grasp Reflex) ಎಂದು ಕರೆಯಲಾಗುತ್ತದೆ. ಇದು ನವಜಾತ ಶಿಶುಗಳಲ್ಲಿ ಕಂಡುಬರುವ ಒಂದು ಸಹಜವಾದ ಅನೈಚ್ಚಿಕ ಪ್ರತಿಕ್ರಿಯೆಯಾಗಿದೆ. ಶಿಶುವಿನ ಅಂಗೈಗೆ ಯಾವುದೇ ವಸ್ತು ಸ್ಪರ್ಶಿಸಿದಾಗ, ಮಗು ತನ್ನ ಬೆರಳುಗಳನ್ನು ಅದರ ಸುತ್ತಲೂ ಬಿಗಿಯಾಗಿ ಮುಚ್ಚುತ್ತದೆ. ಇದು ಮಗುವಿನ ಬೆಳವಣಿಗೆಯ ಒಂದು ಅವಿಭಾಜ್ಯ ಅಂಗವಾಗಿದೆ.

ನೆಟ್ಟಿಗರ ಮೆಚ್ಚುಗೆಯ ಮಹಾಪೂರ: ಈ ವಿಡಿಯೋ ಕಂಡು ಇಂಟರ್ನೆಟ್ ಲೋಕವೇ ಮರುಳಾಗಿದೆ. “ಈ ಮಗುವಿಗೆ ತನ್ನನ್ನು ಕಾಪಾಡಿದ ನಾಯಕ ಯಾರೆಂದು ಮೊದಲೇ ತಿಳಿದಿದೆ, ಅದಕ್ಕೆ ಧನ್ಯವಾದ ಹೇಳುತ್ತಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಆ ವೈದ್ಯರನ್ನು ಮಗು ಆಯ್ಕೆ ಮಾಡಿಕೊಂಡಿದೆ. ಇದು ಜೀವಮಾನದ ಒಪ್ಪಂದ” ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ. ಆರೋಗ್ಯ ಕಾರ್ಯಕರ್ತರ ದಣಿವರಿಯದ ಸೇವೆಗೆ ಸಿಕ್ಕ ಅತ್ಯುನ್ನತ ಗೌರವ ಇದಾಗಿದೆ ಎಂದು ಅನೇಕರು ಶ್ಲಾಘಿಸಿದ್ದಾರೆ.

ಒಟ್ಟಾರೆಯಾಗಿ.. ತಂತ್ರಜ್ಞಾನ ಮತ್ತು ಯಾಂತ್ರಿಕತೆಯ ಈ ಜಗತ್ತಿನಲ್ಲಿ, ನವಜಾತ ಶಿಶುವಿನ ಈ ಪುಟ್ಟ ಸ್ಪರ್ಶವು ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧ ಮತ್ತು ವೈದ್ಯಕೀಯ ವೃತ್ತಿಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

The post ‘ನನ್ನನ್ನು ಬಿಟ್ಟು ಹೋಗಬೇಡಿ’: ವೈದ್ಯರ ಕೈಗವಸು ಬಿಗಿಯಾಗಿ ಹಿಡಿದ ನವಜಾತ ಶಿಶು, ವಿಡಿಯೋ ವೈರಲ್! appeared first on Samyukta Karnataka.

ಗಂಡನ ಕೂದಲು ಹಿಡಿದು ಎಳೆದಾಡಿದ ಹೆಂಡತಿ ಚಿತ್ರಹಿಂಸೆ; ಬೆಚ್ಚಿಬೀಳಿಸುವ ದೃಶ್ಯ ವೈರಲ್; 2 ವರ್ಷದಿಂದ ಅಡಗಿತ್ತು ರಹಸ್ಯ?
ಮದುವೆಯ ಬಂಧವು ಪ್ರೀತಿ ಮತ್ತು ವಿಶ್ವಾಸದ ಮೇಲೆ ನಿಂತಿರುತ್ತದೆ ಎಂಬ ನಂಬಿಕೆಗೆ ವ್ಯತಿರೇಕವಾಗಿರುವ ಘಟನೆಯೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಲ್ಲಿ ಪತ್ನಿಯೊಬ್ಬಳು ತನ್ನ ಪತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಎಕ್ಸ್ (X) ಜಾಲತಾಣದಲ್ಲಿ ವೈರಲ್ ಆಗಿದ್ದು, ಪುರುಷರ ಮೇಲಿನ ಕೌಟುಂಬಿಕ ಹಿಂಸಾಚಾರದ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ವಿಶಾಲ್ ಮಾಲ್ವಿಯಾ ಎಂಬ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬಳು ತನ್ನ ಪತಿಗೆ ಕಪಾಳಮೋಕ್ಷ ಮಾಡುವುದು, ಪದೇ ಪದೇ ಹೊಡೆಯುವುದು ಮತ್ತು ಜಗಳದ ವೇಳೆ ಆತನ ಕೂದಲನ್ನು ಎಳೆಯುವ ಗೊಂದಲದ ದೃಶ್ಯಗಳಿವೆ. ಮಾಹಿತಿ ಪ್ರಕಾರ, ಈ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಪತ್ನಿಯ ದೌರ್ಜನ್ಯವನ್ನು ಮೌನವಾಗಿ ಸಹಿಸಿಕೊಂಡಿದ್ದನು. ಆದ್ರೆ ಪತ್ನಿಯ ಈ ಹುಚ್ಚಾಟದ ದೌರ್ಜನ್ಯ, ಮತ್ತು ತನ್ನ ಮೇಲಾಗುತ್ತಿರುವ ಅನ್ಯಾಯವನ್ನು ಜಗತ್ತಿಗೆ ತೋರಿಸಲು ತನ್ನ ಲ್ಯಾಪ್‌ಟಾಪ್ ಕ್ಯಾಮೆರಾವನ್ನು ರಹಸ್ಯವಾಗಿ ಬಳಸಿ ಈ ಕೃತ್ಯಗಳನ್ನು ದಾಖಲಿಸಿದ್ದಾನೆ.

ನಂತರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. “ಮದುವೆ ಎಂಬುದು ಇಂದು ಭಯಾನಕವಾಗಿ ಕಾಣಿಸುತ್ತಿದೆ” ಎಂದು ಕೆಲವರು ಆತಂಕ ವ್ಯಕ್ತಪಡಿಸಿದರೆ, ಇನ್ನು ಕೆಲವರು “ಮದುವೆಯಾಗುವ ಮೊದಲು ಹತ್ತು ಬಾರಿ ಯೋಚಿಸಿ” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯು ಸ್ತ್ರೀವಾದದ ತಪ್ಪು ಬಳಕೆ ಮತ್ತು ಪುರುಷರಿಗೆ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳಲ್ಲಿ ಇರುವ ಕಾನೂನು ರಕ್ಷಣೆಯ ಕೊರತೆಯ ಬಗ್ಗೆ ಪ್ರಶ್ನೆಗಳನ್ನು ಎಳುತ್ತಿದೆ.

ಒಟ್ಟಾರೆ.. ಈ ವೀಡಿಯೊದ ಕಾಮೆಂಟ್ ವಿಭಾಗದಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟುತ್ತಿದೆ. ಕೆಲವರು ನಿರ್ದಿಷ್ಟ ಸಮುದಾಯದ ಮಹಿಳೆಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದನ್ನು “ಮಂಗಳಸೂತ್ರ ಬಳಸಿದ ದೇಶೀಯ ಭಯೋತ್ಪಾದನೆ” ಎಂದು ಕರೆದಿದ್ದಾರೆ. ಸದ್ಯ ಈ ಘಟನೆಯು ಕೌಟುಂಬಿಕ ಹಿಂಸೆ ಕೇವಲ ಮಹಿಳೆಯರಿಗೆ ಸೀಮಿತವಲ್ಲ, ಪುರುಷರು ಕೂಡ ಇಂತಹ ಘಟನೆಗಳಿಗೆ ಬಲಿಪಶುಗಳಾಗುತ್ತಿದ್ದಾರೆ ಎಂಬ ಕಠೋರ ವಾಸ್ತವವನ್ನು ತಿಳಿಸುತ್ತಿದೆ.

The post ಗಂಡನ ಕೂದಲು ಹಿಡಿದು ಎಳೆದಾಡಿದ ಹೆಂಡತಿ ಚಿತ್ರಹಿಂಸೆ; ಬೆಚ್ಚಿಬೀಳಿಸುವ ದೃಶ್ಯ ವೈರಲ್; 2 ವರ್ಷದಿಂದ ಅಡಗಿತ್ತು ರಹಸ್ಯ? appeared first on Samyukta Karnataka.

ಕಿಡ್ನಿ ದಾನಕ್ಕೆ ಬದಲಾದ ಮಾರ್ಗಸೂಚಿ: ಸುಸಜ್ಜಿತ ಕಸಿ ವ್ಯವಸ್ಥೆ; ರೋಗಿಗಳ ಹಿತರಕ್ಷಣೆಗಾಗಿ ಹೊಸ ನಿಯಮ ಜಾರಿ!
ಕಿಡ್ನಿ ದಾನ ಮಾಡಲು ಇರುವ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ, ಬಹು ಜೋಡಿ ಮೂತ್ರಪಿಂಡ ವಿನಿಮಯ ಕಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಿಡ್ನಿ ದಾನಿಗಳು ಲಭ್ಯವಿದ್ದರೂ, ರಕ್ತದ ಗುಂಪು ಅಥವಾ ಆಂಗಾಂಶಗಳು ಹೊಂದಾಣಿಕೆಯಾಗದ ಕಾರಣ ಕಸಿ ಸಾಧ್ಯವಾಗದೆ ಪರದಾಡುತ್ತಿದ್ದ ರೋಗಿಗಳ ನೆರವಿಗೆ ಧಾವಿಸಿರುವ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ನೂತನ ನಿಯಮಾವಳಿಯಿಂದಾಗಿ ಇನ್ನು ಮುಂದೆ ದ್ವಿಮುಖ (ಇಬ್ಬರು ದಾನಿಗಳು), ತ್ರಿಮುಖ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜೋಡಿಗಳು ಪರಸ್ಪರ ಕಿಡ್ನಿಗಳನ್ನು ವಿನಿಮಯ ಮಾಡಿಕೊಂಡು ಮರುಜೀವ ಪಡೆಯಲು ಕಾನೂನುಬದ್ಧ ಅವಕಾಶ ಸಿಕ್ಕಂತಾಗಿದೆ.

ಏನಿದು ‘ಬಹು-ಜೋಡಿ’ ವಿನಿಮಯ: ಸಾಮಾನ್ಯವಾಗಿ ರೋಗಿಯ ಕುಟುಂಬದವರೇ ಕಿಡ್ನಿ ದಾನ ಮಾಡಲು ಮುಂದೆ ಬಂದರೂ, ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೆ ಕಸಿ ಮಾಡುವುದು ಕಷ್ಟವಾಗುತ್ತಿತ್ತು. ಈಗ ಜಾರಿಗೆ ಬಂದಿರುವ ‘ಸ್ವಾಪ್’ ವ್ಯವಸ್ಥೆಯಲ್ಲಿ, ಎ ಎಂಬ ರೋಗಿಯ ದಾನಿಯು ಬಿಎಂಬ ರೋಗಿಗೆ ಮತ್ತು ಬಿ ರೋಗಿಯ ದಾನಿಯು ಎ ರೋಗಿಗೆ ಕಿಡ್ನಿ ನೀಡಬಹುದು. ಈ ಹೊಸ ಮಾರ್ಗಸೂಚಿಯಡಿ ಕೇವಲ ಇಬ್ಬರಷ್ಟೇ ಅಲ್ಲದೆ, ಮೂರು ಅಥವಾ ಅದಕ್ಕಿಂತ ಹೆಚ್ಚು ಜೋಡಿಗಳು ಒಟ್ಟಾಗಿ ಈ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ಅಂಶಗಳು:

1994ರ ಮಾನವ ಅಂಗಾಂಗ ಕಸಿ ಕಾಯ್ದೆಯಡಿ ವ್ಯಾಖ್ಯಾನಿಸಲಾದ ‘ಸಮೀಪ ಸಂಬಂಧಿಗಳು’ ಮಾತ್ರ ಈ ವಿನಿಮಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರು.
ದಾನಿ ಮತ್ತು ಸ್ವೀಕರಿಸುವವರ ನಡುವೆ ರಕ್ತದ ಗುಂಪು ಅಥವಾ ಅಂಗಾಂಶಗಳ ಅಸಾಮರಸ್ಯ ಇರುವುದು ಅಧಿಕೃತವಾಗಿ ಪ್ರಮಾಣೀಕರಿಸಲ್ಪಟ್ಟಿರಬೇಕು.

ವಿನಿಮಯ ಗುಂಪಿನಲ್ಲಿರುವ ಎಲ್ಲಾ ದಾನಿಗಳು ಮತ್ತು ಸ್ವೀಕರಿಸುವವರು ಒಟ್ಟಾಗಿ ದಾನ ನೀಡಲು ಮತ್ತು ಸ್ವೀಕರಿಸಲು ಒಂದೇ ಜಂಟಿ ಒಪ್ಪಂದಕ್ಕೆ ಸಹಿ ಮಾಡುವುದು ಕಡ್ಡಾಯ.”ಯಾವುದೇ ಹಂತದಲ್ಲಿ ಹಣದ ವ್ಯವಹಾರ ಅಥವಾ ವಾಣಿಜ್ಯ ವಹಿವಾಟು ನಡೆದರೆ ಅಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪ್ರತಿಯೊಂದು ಕಸಿ ಪ್ರಕ್ರಿಯೆಗೂ ಮುನ್ನ ‘ರಾಜ್ಯ ಮಟ್ಟದ ಅಧಿಕಾರ ಸಮಿತಿ’ಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು. ಇಡೀ ಪ್ರಕ್ರಿಯೆಯನ್ನು

ಪಾರದರ್ಶಕತೆಗೆ ಆದ್ಯತೆ: ಈ ಕಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎನ್ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದಲೇ ರಕ್ತದ ಅಡ್ಡ-ಹೊಂದಾಣಿಕೆ ಪರೀಕ್ಷೆ ನಡೆಸಬೇಕು ಮತ್ತು ಅಗತ್ಯವಿದ್ದಲ್ಲಿ ಡಿಎನ್ಎ ಪ್ರೊಫೈಲಿಂಗ್ ವರದಿಗಳನ್ನು ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

The post ಕಿಡ್ನಿ ದಾನಕ್ಕೆ ಬದಲಾದ ಮಾರ್ಗಸೂಚಿ: ಸುಸಜ್ಜಿತ ಕಸಿ ವ್ಯವಸ್ಥೆ; ರೋಗಿಗಳ ಹಿತರಕ್ಷಣೆಗಾಗಿ ಹೊಸ ನಿಯಮ ಜಾರಿ! appeared first on Samyukta Karnataka.

ಚಿನ್ನ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ; ಅಕ್ಷಯ ತೃತೀಯ ಮುನ್ನವೇ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
ಚಿನ್ನ ಪ್ರಿಯರಿಗೆ ಗುರುವಾರ (ಇಂದು) ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿತ್ತು. ಹಾಗೇ ಇಂದು ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಈ ಇಳಿಕೆ ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ ಇಂದು ಬೆಲೆಗಳು ಗಣನೀಯವಾಗಿ ಕುಸಿದಿವೆ. ವಿಶೇಷವಾಗಿ 100 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 17,600 ರೂ. ಇಳಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಇಳಿಕೆಯಾಗಿದೆ. ಇಂದು 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ₹11,361 ಆಗಿದ್ದು, 10 ಗ್ರಾಂ ಬೆಲೆ ₹1,13,610 ಆಗಿದೆ. ವಾರಾಂತ್ಯದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹176 ಹಾಗೂ 10 ಗ್ರಾಂಗೆ ₹1,760 ಇಳಿಕೆಯಾಗಿದೆ.

ಇದೇ ರೀತಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕುಸಿತ ಕಂಡಿದೆ. 1 ಗ್ರಾಂ ಚಿನ್ನದ ಬೆಲೆ ₹13,885 ಆಗಿದ್ದು, 10 ಗ್ರಾಂಗೆ ₹1,38,850 ಆಗಿದೆ. ಏಪ್ರಿಲ್ ಮೊದಲ ವಾರದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹215 ಹಾಗೂ 10 ಗ್ರಾಂಗೆ ₹2,150 ಇಳಿಕೆಯಾಗಿದೆ. ಒಟ್ಟು 100 ಗ್ರಾಂ 1,88,500 ಆಗಿದ್ದು, ಬರೋಬ್ಬರಿ 21,500 ಹೆಚ್ಚಳ ಕಂಡಿದೆ.

24 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹15,148 ಹಾಗೂ 10 ಗ್ರಾಂ ಬೆಲೆ ₹1,51,480 ಆಗಿದೆ. ವಾರಾಂತ್ಯದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹234 ಹಾಗೂ 10 ಗ್ರಾಂಗೆ ₹2,340 ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ₹15,14,800 ಆಗಿದ್ದು, ಇದರಲ್ಲಿ ಬರೋಬ್ಬರಿ ₹23,400 ಇಳಿಕೆಯಾಗಿದೆ.

ಇನ್ನು ಚಿನ್ನದಂತೆ ಬೆಳ್ಳಿಯ ಬೆಲೆಯಲ್ಲೂ ಇಳಿಕೆ ಕಂಡಿದೆ. ಪ್ರಸ್ತುತ 1 ಗ್ರಾಂ ಬೆಳ್ಳಿ ಬೆಲೆ ₹255 ಆಗಿದ್ದು, 1 ಕೆ.ಜಿ ಬೆಳ್ಳಿ ಬೆಲೆ ₹2,55,000 ಆಗಿದೆ. ಈ ಬೆಲೆ ಇಳಿಕೆ ಬಂಗಾರ ಹಾಗೂ ಬೆಳ್ಳಿ ಪ್ರಿಯರಲ್ಲಿ ಸಮಾಧಾನ ತಂದಿದೆ.

The post ಚಿನ್ನ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ; ಅಕ್ಷಯ ತೃತೀಯ ಮುನ್ನವೇ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ appeared first on Samyukta Karnataka.

ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಮಗ, ಮಗಳಾದ ಕಹಾನಿಗೆ ಟ್ವಿಸ್ಟ್; ಲಿಂಗ ಪರಿವರ್ತನೆಗೆ ತಂದೆಯ ಸಾಥ್ ಇತ್ತಾ?
ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಸಂಜಯ್ ಬಂಗಾರ ಅವರ ಪುತ್ರ ಆರ್ಯನ್ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗಿದ್ದು, ಥೈಲ್ಯಾಂಡ್ನಲ್ಲಿ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆದಿದೆ.

ತಮ್ಮ ಹೊಸ ಗುರುತನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಆರ್ಯನ್ ಈಗ ಅನಾಯ ಬಂಗಾರ್ ಎಂಬ ಹೆಸರಿನಿಂದ ಪರಿಚಿತರಾಗಿದ್ದಾರೆ.

ಈ ಹೊಸ ಪರಿಚಯವು ಸಮಾಜದಲ್ಲಿ ಲಿಂಗ ಪರಿವರ್ತನೆ ಕುರಿತ ಅರಿವು ಮತ್ತು ಒಪ್ಪಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ ಎಂಬುದನ್ನು ಅನಾಯ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದರು.

ನನ್ನ ಜೀವನದ ಈ ಪ್ರಮುಖ ಹಂತದಲ್ಲಿ ನನ್ನ ತಂದೆ ನನಗಾಗಿ ಇದ್ದರು. ಅವರ ಬೆಂಬಲ ಸ್ವಲ್ಪ ತಡವಾದರೂ, ಅವರು ನನಗೆ ತಮ್ಮ ಪ್ರೀತಿಯನ್ನು ಸಂಪೂರ್ಣವಾಗಿ ತೋರಿಸಿದರು.

ಈ ಶಸ್ತ್ರಚಿಕಿತ್ಸೆ ನನ್ನ ಜೀವನದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ನನ್ನ ತಂದೆ ನನ್ನ ಪಕ್ಕದಲ್ಲಿದ್ದ ಕಾರಣ ಮಾತ್ರ ಇದು ಸಾಧ್ಯವಾಯಿತು.

ಪ್ರೀತಿ ಮತ್ತು ಬೆಳವಣಿಗೆಗೆ ಸಮಯ ಬೇಕಾಗುತ್ತದೆ. ಈ ವಿಷಯಗಳು ನಮ್ಮ ಜೀವನದಲ್ಲಿ ಬಂದ ನಂತರ, ಅವು ಬೇರೆ ಯಾವುದಕ್ಕಿಂತ ಹೆಚ್ಚು ಅಮೂಲ್ಯವಾಗುತ್ತವೆ.
ಅದಕ್ಕಾಗಿಯೇ ನಾನು ಯಾವಾಗಲೂ ನನ್ನ ತಂದೆಗೆ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ದೃಷ್ಟಿಯಿಂದ ನೋಡಿದರೆ, ಅನಾಯ ಬಂಗಾರ್ ಅವರ ಈ ಹಿಂತಿರುಗುವಿಕೆ ಲಿಂಗ ಪರಿವರ್ತನೆ ಬಗ್ಗೆ ಸಾರ್ವಜನಿಕ ಅರಿವು ಹೆಚ್ಚಿಸುತ್ತದೆ.

ಭಾರತೀಯ ಸಮಾಜದಲ್ಲಿ ಲಿಂಗ ಪರಿವರ್ತನೆ ಕುರಿತು ಚರ್ಚೆಗಳು ಹೆಚ್ಚಿನ ಅಪ್ರಚಲಿತವಾಗಿವೆ.

ಈ ಸಂದರ್ಭಗಳಲ್ಲಿ ಕುಟುಂಬ ಮತ್ತು ಸ್ನೇಹಿತರ ಬೆಂಬಲವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅನಾಯ ಬಂಗಾರ್ ಅವರು ತಮ್ಮ ಕುಟುಂಬದ ಬೆಂಬಲದಿಂದಲೇ ಈ ಹೋರಾಟವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಇತ್ತೀಚೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಲಿಂಗ ಪರಿವರ್ತನೆ ಸಂಬಂಧಿತ ವಿಷಯಗಳು ಹೆಚ್ಚು ಗಮನ ಸೆಳೆಯುತ್ತಿವೆ. ಅನಾಯ ಬಂಗಾರ್ ತಮ್ಮ ಅನುಭವವನ್ನು ಬಹಿರಂಗಪಡಿಸುವ ಮೂಲಕ ಇತರರಿಗೆ ಸಹಾಯ ಮಾಡುವ ಧೈರ್ಯವನ್ನು ತೋರಿದ್ದಾರೆ.

ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುವುದು, ಲಿಂಗ ಪರಿವರ್ತನೆ ಸಂಬಂಧಿತ ಚಿಂತೆ ಮತ್ತು ಗೊಂದಲಗಳನ್ನು ಎದುರಿಸುತ್ತಿರುವವರಿಗೆ ನಿಖರ ಮತ್ತು ಪ್ರೇರಣಾದಾಯಕ ಉದಾಹರಣೆ ಆಗುತ್ತದೆ.

ಸಂಜಯ್ ಬಂಗಾರ್ ಭಾರತೀಯ ಕ್ರಿಕೆಟ್ನ ಪ್ರಸಿದ್ಧ ಮುಖಗಳಲ್ಲಿ ಒಬ್ಬರಾಗಿದ್ದಾರೆ. ಅವರು ಪ್ಲೇಯಿಂಗ್ ಕೇರಿಯರ್ ನಂತರ ಕೋಚಿಂಗ್ ಕ್ಷೇತ್ರದಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.
ಅವರ ಕುಟುಂಬವು ಕೂಡ ಕ್ರಿಕೆಟ್ ಹಾಗೂ ಜೀವನದ ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಯಲ್ಲಿದೆ.
ಈ ಸಂದರ್ಭದಲ್ಲಿ, ಅವರ ಕುಟುಂಬವು ತಮ್ಮ ಹೋರಾಟ ಮತ್ತು ಸಾಧನೆಗಳೊಂದಿಗೆ ತಮ್ಮ ಹೆಮ್ಮೆಯನ್ನು ತೋರಿಸಿದೆ.

ಇಂತಹ ಬೆಳವಣಿಗೆಗಳು, ವಿಶೇಷವಾಗಿ ಜನಪ್ರಿಯ ವ್ಯಕ್ತಿಗಳ ಕುಟುಂಬಗಳಲ್ಲಿ ಸಂಭವಿಸಿದಾಗ, ಸಮುದಾಯದಲ್ಲಿ ಒಪ್ಪಿಗೆಯನ್ನು ಹೆಚ್ಚಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತವೆ.
ಅನಾಯ ಬಂಗಾರ್ ಅವರು ತಮ್ಮ ಪ್ರಯಾಣ ಮತ್ತು ಹೊಸ ಗುರುತನ್ನು ಬಹಿರಂಗಪಡಿಸುವ ಮೂಲಕ ಸಮಾಜದಲ್ಲಿ ಲಿಂಗ ಪರಿವರ್ತನೆ ಕುರಿತ ಅರಿವಿನ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ.https://samyuktakarnataka.

The post ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಮಗ, ಮಗಳಾದ ಕಹಾನಿಗೆ ಟ್ವಿಸ್ಟ್; ಲಿಂಗ ಪರಿವರ್ತನೆಗೆ ತಂದೆಯ ಸಾಥ್ ಇತ್ತಾ? appeared first on Samyukta Karnataka.

500 ರೂಪಾಯಿ ಕೊಟ್ರು ಗುಲಾಬಿಗಳ ಹೂಗುಚ್ಛ ಸಿಗೋದು ಕಷ್ಟ; ಪ್ರೇಮಿಗಳ ದಿನಕ್ಕೆ ಭರ್ಜರಿ ವ್ಯಾಪಾರ!
ವರದಿ: ಶ್ರೀನಿಧಿ ಹೆಚ್.ಜಿ ತುರುವೇಕೆರೆ

ಫೆಬ್ರವರಿ ತಿಂಗಳು ಅಂದಾಕ್ಷಣ ನೆನಪಾಗುವುದೇ ಪ್ರೇಮಿಗಳ ದಿನಾಚರಣೆ. ಪ್ರೀತಿ ಎನ್ನುವುದು ಕೇವಲ ಯುವಜೋಡಿಗಳ ನಡುವಿನ ಆಕರ್ಷಣೆಯಲ್ಲ, ಅದು ಆತ್ಮೀಯರ ನಡುವಿನ ಕಾಳಜಿ ಮತ್ತು ಗೌರವದ ಸಂಕೇತ. ವಿಶೇಷವಾಗಿ ಫೆಬ್ರವರಿ ೧೪ರ ‘ವ್ಯಾಲೆಂಟೈನ್ಸ್ ಡೇ’ ಸಂದರ್ಭದಲ್ಲಿ ಜಗತ್ತಿನಾದ್ಯಂತ ಜನರು ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಈ ಸಂಭ್ರಮಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಈಗ ಬಣ್ಣಬಣ್ಣದ ಗುಲಾಬಿಗಳ ಹಂಗಾಮು ಶುರುವಾಗಿದೆ.

ಪ್ರೇಮಿಗಳ ವಾರವು ರೋಸ್ ಡೇ ಮೂಲಕ ಅದ್ಧೂರಿಯಾಗಿ ಆರಂಭವಾಗುತ್ತದೆ. ಕೆಂಪು ಗುಲಾಬಿ ಎಂದಿಗೂ ಪ್ರೀತಿಯ ಶಾಶ್ವತ ಸಂಕೇತ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಬಿಳಿ ಮತ್ತು ಪಿಂಕ್ (ಗುಲಾಬಿ) ಬಣ್ಣದ ಹೂಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಪಿಂಕ್ ಗುಲಾಬಿ ಮೃದುತ್ವ, ಕಾಳಜಿ ಮತ್ತು ಸಹಾನುಭೂತಿಯನ್ನು ಬಿಂಬಿಸಿದರೆ, ಬಿಳಿ ಗುಲಾಬಿಯು ಪರಿಶುದ್ಧತೆ, ನಿಷ್ಠೆ ಹಾಗೂ ಹೊಸ ಆರಂಭದ ಸಂಕೇತವಾಗಿದೆ. ಯುವಜನತೆ ತಮ್ಮ ಭಾವನೆಗಳಿಗೆ ತಕ್ಕಂತೆ ಹೂಗಳನ್ನು ಆರಿಸಿಕೊಳ್ಳುತ್ತಿರುವುದು ಈ ಬಾರಿಯ ವಿಶೇಷ.

ಬೆಂಗಳೂರಿನ ಮಾರುಕಟ್ಟೆಗೆ ಸ್ಥಳೀಯವಾಗಿ ಬೆಳೆದ ಹೂಗಳಲ್ಲದೆ ಊಟಿ, ಹೊಸಕೋಟೆ, ತಮಿಳುನಾಡು ಹಾಗೂ ಚಿಕ್ಕಬಳ್ಳಾಪುರದಿಂದಲೂ ಗುಲಾಬಿಗಳು ಲಗ್ಗೆ ಇಟ್ಟಿವೆ. ಹೂವುಗಳ ಗುಣಮಟ್ಟ ಮತ್ತು ಬಣ್ಣಕ್ಕೆ ಅನುಗುಣವಾಗಿ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬAದಿದೆ. ಒಂದು ಬಂಚ್ ಗುಲಾಬಿಯ ಬೆಲೆ ರೂ. 250ರಿಂದ ಆರಂಭವಾಗಿ, ವಿಶೇಷ ಅಲಂಕಾರಿಕ ಬೊಕ್ಕೆಗಳ ದರ 1,000 ರಿಂದ ರೂ.5,000ದವರೆಗೂ ತಲುಪಿದೆ. ಬೇಡಿಕೆ ಹೆಚ್ಚಾದಂತೆ ಹೂವಿನ ದರವೂ ಏರುತ್ತಿರುವುದು ವ್ಯಾಪಾರಿಗಳಿಗೆ ಲಾಭ ತಂದಿದ್ದರೆ, ರೈತರ ಮೊಗದಲ್ಲೂ ಸಂತಸ ಮೂಡಿಸಿದೆ. ಪ್ರೇಮಿಗಳ ದಿನದ ಅಂಗವಾಗಿ ನಗರದ ಪ್ರಮುಖ ಮಾಲ್‌ಗಳು, ಪಾರ್ಕ್ಗಳು ಹಾಗೂ ಕಾಫಿ ಶಾಪ್‌ಗಳು ಜನರಿಂದ ತುಂಬಿ ತುಳುಕುತ್ತಿದ್ದವು.

ರೆಸ್ಟೋರೆಂಟ್‌ಗಳು ‘ಕಪಲ್ ಆಫರ್’ ಮತ್ತು ‘ಕ್ಯಾಂಡಲ್ ಲೈಟ್ ಡಿನ್ನರ್’ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ #Valentine’s Day ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಪ್ರೀತಿಯ ಸಂದೇಶಗಳ ಮಹಾಪೂರವೇ ಹರಿಯುತ್ತಿದೆ. ಹೂವಿನ ವ್ಯಾಪಾರಿಗಳ ಪ್ರಕಾರ, ಸಾಮಾನ್ಯ ದಿನಗಳಿಗಿಂತ ಇಂದು ಮಾರಾಟದಲ್ಲಿ ಮೂರರಿಂದ ನಾಲ್ಕು ಪಟ್ಟು ಏರಿಕೆ ಕಂಡಿದೆ.

ಪ್ರೀತಿ ಎಂದರೆ ಕೇವಲ ಪ್ರೇಮಿಗಳಿಗಷ್ಟೇ ಸೀಮಿತವಲ್ಲ ಎಂಬ ಸಂದೇಶವೂ ಈ ಬಾರಿ ಬಲವಾಗಿ ಕೇಳಿಬಂದಿದೆ. ತಂದೆ-ತಾಯಿ, ಒಡಹುಟ್ಟಿದವರು ಮತ್ತು ಸ್ನೇಹಿತರ ನಡುವಿನ ಬಾಂಧವ್ಯವೂ ಪ್ರೀತಿಯೇ ಆಗಿದೆ. ಕೆಲವು ಸ್ವಯಂಸೇವಾ ಸಂಸ್ಥೆಗಳು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಭೇಟಿ ನೀಡಿ, ಹೂವು ಮತ್ತು ಸಿಹಿ ಹಂಚುವ ಮೂಲಕ ದಿನವನ್ನು ಅರ್ಥಪೂರ್ಣವಾಗಿಸಿದರು. “ಒಂದು ಹೂವಿಗಿಂತ ಒಂದು ಕಿರುನಗೆ ಮತ್ತು ಪ್ರೀತಿಯ ಮಾತು ದೊಡ್ಡ ಉಡುಗೊರೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ವ್ಯಾಲೆಂಟೈನ್ಸ್ ಡೇ ಅತಿಯಾಗಿ ವಾಣಿಜ್ಯೀಕರಣಗೊಳ್ಳುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ದುಬಾರಿ ಗಿಫ್ಟ್ಗಳೇ ಪ್ರೀತಿಯ ಅಳತೆಗೋಲಾಗಬಾರದು ಎಂದು ಮನೋವೈದ್ಯರು ಎಚ್ಚರಿಸಿದ್ದಾರೆ. ಪ್ರೀತಿ ಎಂಬುದು ಕ್ಷಣಿಕ ಆಕರ್ಷಣೆಯಲ್ಲ, ಅದು ಪರಸ್ಪರ ನಂಬಿಕೆ ಮತ್ತು ಜವಾಬ್ದಾರಿಯ ದೀರ್ಘಕಾಲದ ಬದ್ಧತೆ ಎಂಬುದು ಅವರ ವಾದ. ಭಾರತೀಯ ಸಂಸ್ಕೃತಿಯಲ್ಲಿಯೂ ಪ್ರೀತಿಗೆ ಉನ್ನತ ಸ್ಥಾನವಿದ್ದು, ಅದನ್ನು ಮೌಲ್ಯಾಧಾರಿತವಾಗಿ ಆಚರಿಸುವುದು ಇಂದಿನ ಅಗತ್ಯವಾಗಿದೆ.

ಒಟ್ಟಾರೆಯಾಗಿ, ಈ ಬಾರಿಯ ವ್ಯಾಲೆಂಟೈನ್ಸ್ ಡೇ ಕೇವಲ ಹೂವು-ಹಣ್ಣುಗಳ ವ್ಯಾಪಾರಕ್ಕಷ್ಟೇ ಸೀಮಿತವಾಗದೆ, ಮನುಷ್ಯತ್ವ ಮತ್ತು ಸೌಹಾರ್ದತೆಯ ಸಂಕೇತವಾಗಿ ಹೊರಹೊಮ್ಮಿದೆ.

The post 500 ರೂಪಾಯಿ ಕೊಟ್ರು ಗುಲಾಬಿಗಳ ಹೂಗುಚ್ಛ ಸಿಗೋದು ಕಷ್ಟ; ಪ್ರೇಮಿಗಳ ದಿನಕ್ಕೆ ಭರ್ಜರಿ ವ್ಯಾಪಾರ! appeared first on Samyukta Karnataka.

ತಾರಾತಿಗಡಿ: ನಿಜಕ್ಕೂ ಬಿಗ್‌ಬಾಸ್ ಯಾರು?
ತಾರಾತಿಗಡಿ: ಕುರ್ಚಿ ಕಾಳಗ, ಅವರ ಕಡೆಯವರು ಹಂಗಂದರು, ಇವರ ಕಡೆಯವರು ಹಿಂಗಂದರು ಎಂಬ ಗದ್ದಲ ಗಲಾಟೆಗಳು ಹೆಚ್ಚಾಗಿವೆ ಹಾಗಾಗಿ ಅವರಿಗೊಂದು ಬಿಗ್‌ಬಾಸ್ ಕಾರ್ಯಕ್ರಮ ಮಾಡೋಣ ಸ್ವಲ್ಪ ದಿನ ಒಳಗಿದ್ದು ಬಂದರೆ ಎಲ್ಲವೂ ಆರಾಮಾಗಿ ಆಗುತ್ತೆ ಎಂబ ಲೆಕ್ಕಾಚಾರ ಹಾಕಿಕೊಂಡು ಕರ್ನಾಟಕ ಆಲ್‌ ಪೊಲಿಟಿಕಲ್ ಸಿನಿ
ಲಾಂಛನ(ಎಕೆಪಿಸಿಎಲ್) ನವರು ನಿರ್ಧರಿಸಿದರು.

ಮದ್ರಾಮಣ್ಣೂರು, ಬಂಡೇಸಿ, ಪಂ. ಲೇವೇಗೌಡರು, ಸಿಟ್ಯೂರಪ್ಪನವರು, ಸುಮಾರಣ್ಣೂರು, ಗೋಟಾಳ್ ಜಾಗಜಾರ್, ಗುತ್ನಾಳ ಸಾಹೇಬರು, ಗುಜೇಂದ್ರ, ಗುಬ್ಬಾಳಕರ ಲಚುಮವ್ವ ಅವರೆನ್ನೆಲ್ಲ ಆಯ್ಕೆ ಮಾಡಿಕೊಳ್ಳಲಾಯಿತು. ಮೊದಲ ದಿನ ಒಬ್ಬೊಬ್ಬರನ್ನಾಗಿ ವೇದಿಕೆಗೆ ಕರೆದು ಪರಿಚಯಿಸಿ ಒಳಗೆ ಬಿಡಲಾಯಿತು.

ಒಳಗಡೆ ಡೆಲ್ಲಿಯಲ್ಲಿ ಕುಳಿತಿದ್ದ ಯಜಮಾನ್‌ರ ಧ್ವನಿಯನ್ನೇ ಬಿಗ್‌ಬಾಸ್ ಧನಿ ಎಂದು ಘೋಷಿಸಲಾಯಿತು. ಮರುದಿನದಿಂದಲೇ ಎಲ್ಲರಿಗೂ ಟಾಸ್ಕ್ ಇರುತ್ತದೆ ಎಂದು ಹೇಳಲಾಯಿತು. ಮರುದಿನ ಮುಂಜಾನೆ ಸೋಬಾನ ಪದ ಹಾಕುವ ಮೂಲಕ ಎಲ್ಲರನ್ನೂ ಎಬ್ಬಿಸಿ ಇನ್ನ ಸ್ನಾನ ಮಾಡಿ ಎಂದು ಹೇಳಲಾಯಿತು. ತುಂಬಾ ಚಳಿಯಿದೆ ನಾನ್ಯಾಕೆ ಮಾಡಲಿ ಎಂದು ಒಬ್ಬರೆಂದರೆ ನಾನು ಸ್ಪಾಂಜ್ ಬಾತ್ ಮಾಡುತ್ತೇನೆ ಎಂದು ಇನ್ನೊಬ್ಬರು ಅಂದರು.

ನನಗೆ ಪೂರ್ತಿ ಬಿಸಿನೀರು ಆಗುವುದಿಲ್ಲ, ತಣ್ಣೀರೂ ಆಗಿಬರುವುದಿಲ್ಲ ಹಾಗಾಗಿ ಎರಡನ್ನೂ ಮಿಕ್ಸ್ ಮಾಡಿಕೊಡಿ ಎಂದು ಮತ್ತಿಬ್ಬರು ರಿಕ್ವೆಸ್ಟ್ ಮಾಡಿದರು. ನಂತರ ಮ್ಯಾಜಿಕ್ ಚೇರ್ ಆಟದ ಟಾಸ್ಕ್ ಆರಂಭವಾಯಿತು. ಚಪ್ಪಾಳೆ ಹೊಡೆದುಕೊಂಡು ತಿರುಗುತ್ತಿದ್ದಾಗ ಸೀಟಿ ಹೊಡೆಯಲಾಯಿತು. ಎಲ್ಲರೂ ಒಮ್ಮೆಲೇ ಕುರ್ಚಿಮೇಲೆ ಬಿದ್ದರು.

ಅವರು ಬಿದ್ದ ಹೊಡೆತಕ್ಕೆ ಕುರ್ಚಿ ನುಜ್ಜುಗುಜ್ಜಾಯಿತು. ಇನ್ನೊಂದು ಕುರ್ಚಿ ತರಿಸಿ ಆಟ ಶುರುಮಾಡಲಾಯಿತು. ಈ ಬಾರಿ ಸ್ವಲ್ಪ ಹೆಚ್ಚು ಅನ್ನುವಷ್ಟು ಹೊತ್ತು ತಿರುಗಿಸಿ ಆಮೇಲೆ ಸೀಟಿ ಹೊಡೆದರು ಅಷ್ಟರಲ್ಲಿ ಒಬ್ಬ ಚೇರ್ ಎತ್ತಿಕೊಂಡು ಇದು ನನ್ನ ಕುರ್ಚಿ.. ನನ್ನ ಕುರ್ಚಿ ಎಂದು ಓಟಕಿತ್ತ.

The post ತಾರಾತಿಗಡಿ: ನಿಜಕ್ಕೂ ಬಿಗ್‌ಬಾಸ್ ಯಾರು? appeared first on Samyukta Karnataka.