Home News ರಾಮನಗರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆ

ರಾಮನಗರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆ

ರಾಮನಗರ: ಭಾರತ ಚುನಾವಣಾ ಆಯೋಗವು ರಾಮನಗರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು 2025ರ ಜ. 6ರಂದು ಬಿಡುಗಡೆ ಮಾಡಿದೆ. ರಾಮನಗರ ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ 182-ಮಾಗಡಿ, 183-ರಾಮನಗರ, 184-ಕನಕಪುರ ಹಾಗೂ 185-ಚನ್ನಪಟ್ಟಣ  ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 4,53,403 ಪುರುಷ ಮತದಾರರು, 4,74,445 ಮಹಿಳಾ ಮತದಾರರು, 54 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟಾರೆ 9,27,902 ಮತದಾರರಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಮತದಾರರು: ಅಂತಿಮ ಮತದಾರರ ಪಟ್ಟಿಯಲ್ಲಿ 182-ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 1,17,910 ಪುರುಷ ಮತದಾರರು, 1,20,655 ಮಹಿಳಾ ಮತದಾರರು, 19 ತೃತೀಯ ಲಿಂಗಿ ಮತದಾರರಿದ್ದು, ಒಟ್ಟಾರೆ 2,38,584 ಮತದಾರರಿದ್ದಾರೆ, 183-ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 1,08,793 ಪುರುಷ ಮತದಾರರು, 1,13,626 ಮಹಿಳಾ ಮತದಾರರು, 18 ತೃತೀಯ ಲಿಂಗಿ ಮತದಾರರಿದ್ದು, ಒಟ್ಟಾರೆ 2,22,437 ವ್ಮತದಾರರು, 184-ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 1,14,371 ಪುರುಷ ಮತದಾರರು, 1,19,260 ಮಹಿಳಾ ಮತದಾರರು ಹಾಗೂ 10 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,33,641 ಮತದಾರರಿದ್ದಾರೆ ಹಾಗೂ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 1,12,329 ಪುರುಷ ಮತದಾರರು, 1,20,904 ಮಹಿಳಾ ಮತದಾರರು ಹಾಗೂ 7 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,33,240 ಮತದಾರರಿದ್ದಾರೆ.

ಯುವ ಮತದಾರರು: 182-ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 1,756 ಪುರುಷ ಮತದಾರರು ಹಾಗೂ 1,473 ಮಹಿಳಾ ಮತದಾರರು ಸೇರಿ ಒಟ್ಟಾರೆ 3,229 ಜನ ಯುವ ಮತದಾರರಿದ್ದಾರೆ.

183-ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 1,701 ಪುರುಷ ಮತದಾರರು ಹಾಗೂ 1,542 ಮಹಿಳಾ ಮತದಾರರು ಸೇರಿ ಒಟ್ಟಾರೆ 3,243 ಜನ ಯುವ ಮತದಾರರಿದ್ದಾರೆ.

184-ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 1,746 ಪುರುಷ ಮತದಾರರು ಹಾಗೂ 1,528 ಮಹಿಳಾ ಮತದಾರರು ಸೇರಿ ಒಟ್ಟಾರೆ 3,274 ಜನ ಯುವ ಮತದಾರರಿದ್ದಾರೆ.

185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 2,463 ಪುರುಷ ಮತದಾರರು ಹಾಗೂ 2,372 ಮಹಿಳಾ ಮತದಾರರು ಸೇರಿ ಒಟ್ಟಾರೆ 4,835 ಜನ ಯುವ ಮತದಾರರಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 14,581 ಜನ ಯುವ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಿಳಿಸಿದ್ದಾರೆ.

Exit mobile version