#WarUpdate Archives - Samyukta Karnataka

ಅಮೆರಿಕ-ಇರಾನ್ ಸಂಘರ್ಷ; ದೊಡ್ಡಣ್ಣನ ಅಹಂಗೆ ಬಿದ್ದ ಪೆಟ್ಟು! ಗೆದ್ದಿದ್ದು ಟ್ರಂಪ್ ಅಥವಾ ಇರಾನ್?
ಹಾಳಾದರೂ ಹಂಗು ಬಿಡೋದಿಲ್ಲ ಎಂಬಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಎರಡು ವಾರಗಳ ಕದನ ವಿರಾಮ ಒಪ್ಪಂದವನ್ನು ತಮ್ಮ ಐತಿಹಾಸಿಕ ಜಯ ಎಂದು ಬಣ್ಣಿಸುತ್ತಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮರಳಿ ತೆರೆಸಿದ್ದೇ ತಮ್ಮ ಆಡಳಿತದ ಬಹುದೊಡ್ಡ ಸಾಧನೆ ಎಂದು ಅವರು ಬೀಗುತ್ತಿದ್ದರೂ, ವಾಸ್ತವದ ಕನ್ನಡಿ ಬೇರೆಯದೇ ಕಥೆ ಹೇಳುತ್ತಿದೆ.

ಇಸ್ರೇಲ್ ನೀಡಿದ ಪ್ರಚೋದನೆಗೆ ಬಲಿಯಾಗಿ ಇರಾನ್ ಮೇಲೆ ಯುದ್ಧ ಸಾರಿದ ಅಮೆರಿಕ, ಈ ಸುದೀರ್ಘ ಕಾದಾಟದಲ್ಲಿ ಅಕ್ಷರಶಃ ಕೈಸುಟ್ಟುಕೊಂಡಿರುವುದು ಇಂದು ಜಗತ್ತಿನ ಕಣ್ಣೆದುರಿಗಿರುವ ಸತ್ಯ. ಕೇವಲ ಎರಡು ದಿನಗಳಲ್ಲಿ ಇರಾನ್ ಮಂಡಿಯೂರಲಿದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಟ್ರಂಪ್ ಅವರಿಗೆ ಇರಾನ್‌ನ ಪ್ರತಿರೋಧ ಅಚ್ಚರಿ ಮೂಡಿಸಿತು. ಬರೋಬ್ಬರಿ ಒಂದು ತಿಂಗಳಿಗೂ ಅಧಿಕ ಕಾಲ ಮಧ್ಯಪ್ರಾಚ್ಯದ ಯುದ್ಧಭೂಮಿಯಲ್ಲಿ ಏದುಸಿರು ಬಿಟ್ಟ ಅಮೆರಿಕ, ಇರಾನ್‌ನ ರಕ್ಷಣಾ ಸಾಮರ್ಥ್ಯವನ್ನು ಅಂದಾಜಿಸುವಲ್ಲಿ ಸಂಪೂರ್ಣವಾಗಿ ಸೋತಿದೆ.

ಯುದ್ಧ ಬೇಡ ಎಂಬ ಸ್ವದೇಶಿ ಜನರ ಒಕ್ಕೊರಲ ಧ್ವನಿಯನ್ನು ಅಲಕ್ಷಿಸಿ ಯುದ್ಧೋನ್ಮಾದಕ್ಕೆ ತುಪ್ಪ ಸುರಿದ ಟ್ರಂಪ್, ಈಗ ತಮಗೆ ತಾವೇ ಶಹಬ್ಬಾಸ್‌ಗಿರಿ ನೀಡುತ್ತಿರುವುದು ಸ್ವತಃ ಅಮೆರಿಕನ್ನರನ್ನೇ ಕೆರಳಿಸಿದೆ. ಫೆಬ್ರವರಿ 28ರ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾಗಿರುವುದು ಇರಾನ್‌ಗೆ ಭರಿಸಲಾಗದ ನಷ್ಟವೇನೋ ನಿಜ, ಆದರೆ ಆ ಬಳಿಕ ಇರಾನ್ ನೀಡಿದ ತಿರುಗೇಟು ಅಮೆರಿಕದ ಸೊಕ್ಕನ್ನು ಅಡಗಿಸುವಲ್ಲಿ ಯಶಸ್ವಿಯಾಗಿದೆ.

ಈಗ ಯುದ್ಧ ಕದನ ವಿರಾಮದ ಹಂತಕ್ಕೆ ಬಂದು ನಿಂತಿದೆ. ತನ್ನ ಷರತ್ತುಗಳಿಗೆ ಅನುಗುಣವಾಗಿಯೇ ಈ ಒಪ್ಪಂದ ಜಾರಿಯಾಗಿದೆ ಎಂದು ಇರಾನ್ ಪ್ರತಿಪಾದಿಸುತ್ತಿದ್ದರೆ, ಟ್ರಂಪ್ ಅದನ್ನು ನಿರಾಕರಿಸುತ್ತಿದ್ದಾರೆ. ಆದರೆ ಸತ್ಯವೇನೆಂಬುದು ಇಂದು ಇಡೀ ಜಗತ್ತಿಗೆ ಅರಿವಾಗಿದೆ. ಅಮೆರಿಕ ಎಂಬ ದೈತ್ಯ ಶಕ್ತಿಯನ್ನೂ ಯುದ್ಧಭೂಮಿಯಲ್ಲಿ ದಿಟ್ಟವಾಗಿ ಎದುರಿಸಬಹುದು ಎಂಬ ಸತ್ಯವನ್ನು ಇರಾನ್ ತೋರಿಸಿಕೊಟ್ಟಿದೆ.

ಇದು ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಅಮೆರಿಕವನ್ನು ‘ಮನೆಯ ಯಜಮಾನ’ ಎಂದು ಒಪ್ಪಿಕೊಳ್ಳುತ್ತಿದ್ದ ದೇಶಗಳ ನಂಬಿಕೆಗೆ ಬಿದ್ದ ಬಹುದೊಡ್ಡ ಪೆಟ್ಟು. ಮುಂದಿನ ದಿನಗಳಲ್ಲಿ ಅಮೆರಿಕದ ಮಧ್ಯಸ್ಥಿಕೆಯನ್ನು ಜಗತ್ತು ಎಷ್ಟು ಗಂಭೀರವಾಗಿ ಪರಿಗಣಿಸಲಿದೆ ಎಂಬ ಪ್ರಶ್ನೆ ಈಗ ಎದ್ದಿದೆ. ಸದ್ಯಕ್ಕೆ ಎರಡು ವಾರಗಳ ಕದನ ವಿರಾಮ ಜಾರಿಯಲ್ಲಿರುವುದು ಜಾಗತಿಕ ಶಾಂತಿಪ್ರಿಯರಲ್ಲಿ ಸಮಾಧಾನ ತಂದಿದೆ. ಭಾರತ ಈ ನಿರ್ಧಾರವನ್ನು ಸ್ವಾಗತಿಸಿ ಮುಕ್ತ ವಾಣಿಜ್ಯ ಸಂಚಾರಕ್ಕೆ ಕರೆ ನೀಡಿದ್ದರೆ, ಜಾಗತಿಕ ಮಾರುಕಟ್ಟೆ ಕೂಡ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಮರಳುತ್ತಿರುವುದು ಜಗತ್ತಿಗೆ ಶುಭಸುದ್ದಿಯಾಗಿದ್ದರೂ, ಇರಾನ್ ಮೇಲೆ ಮುಗಿಬಿದ್ದು ಮುಖಭಂಗ ಅನುಭವಿಸಿರುವ ಅಮೆರಿಕಕ್ಕೆ ಮಾತ್ರ ಇದು ಕಹಿ ನೆನಪಾಗಿ ಉಳಿಯಲಿದೆ. ದೊಡ್ಡಣ್ಣನ ಸ್ಥಾನಮಾನಕ್ಕೆ ಬಿದ್ದಿರುವ ಈ ಪೆಟ್ಟು ಮಾಯಲು ಮತ್ತು ಅಮೆರಿಕ ಮತ್ತೆ ಸಹಜ ಸ್ಥಿತಿಗೆ ಮರಳಲು ಇನ್ನೂ ಹಲವು ದಿನಗಳು ಬೇಕಾಗಬಹುದು.

The post ಅಮೆರಿಕ-ಇರಾನ್ ಸಂಘರ್ಷ; ದೊಡ್ಡಣ್ಣನ ಅಹಂಗೆ ಬಿದ್ದ ಪೆಟ್ಟು! ಗೆದ್ದಿದ್ದು ಟ್ರಂಪ್ ಅಥವಾ ಇರಾನ್? appeared first on Samyukta Karnataka.