Team India Archives - Samyukta Karnataka

ಭಾರತ ಖಾತೆ ತೆರೆಯುವ ಮುನ್ನವೇ ಪ್ರಮುಖ 3 ವಿಕೆಟ್: 89 ರನ್‌ಗಳಿಗೆ ಆಲೌಟ್, ರೋಹಿತ್ ಹಾಗೂ ನಾಯಕ ಅಯ್ಯರ್ ಗೋಲ್ಡನ್ ಡಕ್!
ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಟೀಮ್ ಇಂಡಿಯಾ ವಿರುದ್ಧ 244 ರನ್‌ಗಳ ಬೃಹತ್ ಅಂತರದ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಕಿವೀಸ್ ಮೊದಲ ಗೆಲುವಿನ ರುಚಿ ಕಂಡಿದೆ.

ವೇಗಿ ಮ್ಯಾಟ್ ಹೆನ್ರಿ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ, ಕೇವಲ 26.4 ಓವರ್‌ಗಳಲ್ಲಿ 89 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಮುಖಭಂಗ ಅನುಭವಿಸಿದೆ.
334 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಮೊದಲ ಓವರ್‌ನಲ್ಲೇ ಮ್ಯಾಟ್ ಹೆನ್ರಿ ಮರ್ಮಾಘಾತ ನೀಡಿದರು. ರೋಹಿತ್ ಶರ್ಮಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಗೋಲ್ಡನ್ ಡಕ್ ಆದರೆ, ವಿರಾಟ್ ಕೊಹ್ಲಿ ನಾಲ್ಕು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಪರಿಣಾಮ ಭಾರತ ಖಾತೆ ತೆರೆಯುವ ಮುನ್ನವೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಪ್ರಪಾತಕ್ಕೆ ಬಿದ್ದಿತು. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (27), ಅಕ್ಷರ್ ಪಟೇಲ್ (21) ಮತ್ತು ನಮನ್ ಧೀರ್ (21) ಅಲ್ಪ ಪ್ರತಿರೋಧ ತೋರಿದರಾದರೂ, ಉಳಿದ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದ ಹೆನ್ರಿ 6 ವಿಕೆಟ್ ಕಬಳಿಸಿದರೆ, ಮ್ಯಾಥ್ಯೂ ಫಿಶರ್ 3 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಆರಂಭಿಕ ಆಟಗಾರ ಟಿಮ್ ಸೈಫರ್ಟ್ (58 ರನ್, 48 ಎಸೆತ) ಮತ್ತು ವಿಲ್ ಯಂಗ್ (125 ರನ್) ಸಿಡಿಸಿದ ಭರ್ಜರಿ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 333 ರನ್ ಪೇರಿಸಿತ್ತು. ಫಿನ್ ಅಲೆನ್ (41) ಹಾಗೂ ಮಿಚೆಲ್ ಸ್ಯಾಂಟ್ನರ್ (24) ಉಪಯುಕ್ತ ಕಾಣಿಕೆ ನೀಡಿದರು. ಭಾರತದ ಪರ ಅಕ್ಷರ್ ಪಟೇಲ್ 39 ರನ್ ನೀಡಿ 2 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ (73 ರನ್) ದುಬಾರಿಯಾದರು.

The post ಭಾರತ ಖಾತೆ ತೆರೆಯುವ ಮುನ್ನವೇ ಪ್ರಮುಖ 3 ವಿಕೆಟ್: 89 ರನ್‌ಗಳಿಗೆ ಆಲೌಟ್, ರೋಹಿತ್ ಹಾಗೂ ನಾಯಕ ಅಯ್ಯರ್ ಗೋಲ್ಡನ್ ಡಕ್! appeared first on Samyukta Karnataka.

ಭಾರತಕ್ಕೆ 3 ವಿಕೆಟ್‌ಗಳ ರೋಚಕ ಶಾಕ್ ಕೊಟ್ಟ ಪಾಕಿಸ್ತಾನ, ಅಂಡರ್-19 ಏಷ್ಯಾ ಕಪ್‌ನಲ್ಲಿ ಹಂಝಾ ಜಹೂರ್ ಅಬ್ಬರ
ಒಮನ್‌ನ ಅಲ್ ಅಮ್ರತ್ ಮೈದಾನದಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ 2026ರ ಹೈ-ವೋಲ್ಟೇಜ್ ಕದನದಲ್ಲಿ ಭಾರತ ತಂಡ ಬದ್ಧವೈರಿ ಪಾಕಿಸ್ತಾನ ವಿರುದ್ಧ 3 ವಿಕೆಟ್‌ಗಳ ಅಂತರದ ರೋಚಕ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿ 208 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ, ಎದುರಾಳಿಯನ್ನು ಕೇವಲ 61 ರನ್‌ಗಳಿಗೆ 5 ವಿಕೆಟ್ ಕೆಡವಿ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿತ್ತು.

ಆದರೆ ಪಾಕ್ ವಿಕೆಟ್ ಕೀಪರ್ ಬ್ಯಾಟರ್ ಹಂಝಾ ಜಹೂರ್ ಸಿಡಿಸಿದ ಅಜೇಯ ಶತಕದ ಬಲದಿಂದ ಪಾಕಿಸ್ತಾನ ಸೋಲಿನ ದವಡೆಯಿಂದ ಪಾರಾಗಿ ಐತಿಹಾಸಿಕ ಜಯ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅರ್ಜುನ್ ರಜಪೂತ್ (107 ರನ್, 85 ಎಸೆತ) ಏಕಾಂಗಿ ಹೋರಾಟ ನಡೆಸಿ ಅದ್ಭುತ ಶತಕ ಸಿಡಿಸಿದರು. ಆದರೆ ಮಾಜಿ ದಿಗ್ಗಜ ಆಟಗಾರರ ಪುತ್ರರಾದ ಆರ್ಯವೀರ್ ಸೆಹ್ವಾಗ್ (22) ಹಾಗೂ ಅನ್ವಯ್ ದ್ರಾವಿಡ್ ಬ್ಯಾಟಿಂಗ್‌ನಲ್ಲಿ ಹೆಚ್ಚು ಮಿಂಚಲಿಲ್ಲ. ಭಾರತ 46.3 ಓವರ್‌ಗಳಲ್ಲಿ 208 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ರಿಜ್ವಾನುಲ್ಲಾ, ಅಲಿ ರಜಾ ಮತ್ತು ನಿಕಾಬ್ ಶಫೀಕ್ ತಲಾ 3 ವಿಕೆಟ್ ಕಬಳಿಸಿದರು.

ಬಳಿಕ ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ನಲುಗಿ 61 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಭಾರತದ ಪರ ಸ್ಪಿನ್ನರ್ ಮನಲ್ ಚೌಹಾಣ್ 3 ವಿಕೆಟ್ ಕಿತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.

ಆದರೆ ಈ ಹಂತದಲ್ಲಿ ಕ್ರೀಸ್‌ಗೆ ಬಂದ ಹಂಝಾ ಜಹೂರ್ (100* ರನ್, 108 ಎಸೆತ) ಹಾಗೂ ಹುಸ್ನೈನ್ ಅಬ್ಬಾಸ್ ದಾರ್ (35) ಆರನೇ ವಿಕೆಟ್‌ಗೆ ಅಮೂಲ್ಯ 107 ರನ್‌ಗಳ ಜೊತೆಯಾಟವಾಡಿ ಪಂದ್ಯದ ಗತಿಯನ್ನೇ ಬದಲಿಸಿದರು.

ಅಂತಿಮ ಹಂತದಲ್ಲಿ ಭಾರತ ವಿಕೆಟ್ ಕಬಳಿಸಿ ಕಮ್‌ಬ್ಯಾಕ್ ಮಾಡಲು ಯತ್ನಿಸಿದರೂ, ಸಂಯಮದ ಬ್ಯಾಟಿಂಗ್ ಪ್ರದರ್ಶಿಸಿದ ಜಹೂರ್ ಬೌಂಡರಿ ಬಾರಿಸಿ ಶತಕ ಪೂರೈಸುವ ಮೂಲಕ 48.1 ಓವರ್‌ಗಳಲ್ಲಿ ಪಾಕಿಸ್ತಾನಕ್ಕೆ 209/7 ರನ್ ಗಳಿಸಿ ಗೆಲುವು ತಂದುಕೊಟ್ಟರು. ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆದ್ದಿದ್ದ ಭಾರತಕ್ಕೆ ಇದು ಟೂರ್ನಿಯಲ್ಲಿ ಮೊದಲ ಹಿನ್ನಡೆಯಾಗಿದೆ.

The post ಭಾರತಕ್ಕೆ 3 ವಿಕೆಟ್‌ಗಳ ರೋಚಕ ಶಾಕ್ ಕೊಟ್ಟ ಪಾಕಿಸ್ತಾನ, ಅಂಡರ್-19 ಏಷ್ಯಾ ಕಪ್‌ನಲ್ಲಿ ಹಂಝಾ ಜಹೂರ್ ಅಬ್ಬರ appeared first on Samyukta Karnataka.

ಭುವನೇಶ್ವರ್‌ಗೆ ಆಡಿಸಿದ್ದು ಸೆಲೆಕ್ಟರ್ಸ್ ಮಾಡಿದ ದೊಡ್ಡ ಎಡವಟ್ಟು: ಬಿಸಿಸಿಐ ವಿರುದ್ಧ ಗುಡುಗಿದ ಇರ್ಫಾನ್ ಪಠಾಣ್!
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 4 ವರ್ಷಗಳ ಸುದೀರ್ಘ ಅಂತರದ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರ ಆಯ್ಕೆಯ ವಿರುದ್ಧ ಭಾರತದ ಮಾಜಿ ಆಲ್‌ರೌಂಡರ್ ಹಾಗೂ ವಿಶ್ವಕಪ್ ವಿಜೇತ ಇರ್ಫಾನ್ ಪಠಾಣ್ ಗರಂ ಆಗಿದ್ದಾರೆ.

ಕಿವೀಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 4 ಪಂದ್ಯಗಳನ್ನಾಡಿದ ಭುವಿ, ಬರೋಬ್ಬರಿ 180 ರನ್ ಬಿಟ್ಟುಕೊಟ್ಟು ಕೇವಲ ಒಂದೇ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಪಠಾಣ್, ಆಯ್ಕೆ ಸಮಿತಿಯ ತೀರ್ಮಾನವನ್ನು ನೇರವಾಗಿ ಪ್ರಶ್ನಿಸಿದ್ದಾರೆ.

“ಸೆಲೆಕ್ಟರ್ಸ್ ಎಲ್ಲಿ ತಪ್ಪು ಮಾಡಿದರು ಗೊತ್ತಾ? ಈ ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆಡಿಸಿದ್ದು ಅವರು ಮಾಡಿದ ದೊಡ್ಡ ತಪ್ಪು. ಭುವಿ ಅದ್ಭುತ ಬೌಲರ್ ಮತ್ತು ಹಿರಿಯ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಅವರ ಸಾಮರ್ಥ್ಯದ ಮೇಲೆ ನನಗೆ ಅಪಾರ ಗೌರವವಿದೆ.

ಆದರೆ ಟಿ20 ವಿಶ್ವಕಪ್ ಸದ್ಯಕ್ಕೆ ಇಲ್ಲವೇ ಇಲ್ಲ ಎಂದ ಮೇಲೆ ಅವರಿಗೆ ಈ ಸರಣಿಯಲ್ಲಿ ಮಣೆ ಹಾಕಿದ್ದೇಕೆ? ಹತ್ತಿರದಲ್ಲಿರುವ 50 ಓವರ್‌ಗಳ ಏಕದಿನ ವಿಶ್ವಕಪ್‌ಗಾಗಿ ಅವರನ್ನು ಸಜ್ಜುಗೊಳಿಸುತ್ತಿದ್ದರೆ ಅದು ಅರ್ಥಪೂರ್ಣವಾಗಿರುತ್ತಿತ್ತು. ಆದರೆ ಇಲ್ಲಿ ಆಡಿಸುವ ಮೂಲಕ ಯುವ ವೇಗಿಗಳಿಗೆ ಸಿಗಬೇಕಿದ್ದ ಅತ್ಯಮೂಲ್ಯ ಅವಕಾಶವನ್ನು ಕಿತ್ತುಕೊಂಡಂತಾಗಿದೆ” ಎಂದು ಪಠಾಣ್ ಕಿಡಿಕಾರಿದ್ದಾರೆ.

ಭುವಿ ಬದಲಿಗೆ ಯುವ ವೇಗಿಗಳಾದ ಮಯಾಂಕ್ ಯಾದವ್ ಅಥವಾ ಪ್ರಿನ್ಸ್ ಯಾದವ್ ಅವರಿಗೆ ಎಲ್ಲಾ ಪಂದ್ಯಗಳಲ್ಲೂ ಆಡುವ ಅವಕಾಶ ನೀಡಿ ಕಿವೀಸ್ ಪಿಚ್‌ಗಳ ಅನುಭವ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ಇರ್ಫಾನ್, “ನಾನು ಭುವಿ ಪ್ರದರ್ಶನವನ್ನು ದೂರುತ್ತಿಲ್ಲ, ಅವರು ದುರದೃಷ್ಟವಶಾತ್ ಹೆಚ್ಚು ರನ್ ಬಿಟ್ಟುಕೊಟ್ಟರು. ಆದರೆ ಇದು ಸರಿಯಾದ ಸಮಯದ ಆಯ್ಕೆಯಲ್ಲ. ಭವಿಷ್ಯದ ದೃಷ್ಟಿಯಿಂದ ಯುವ ವೇಗದ ಬೌಲರ್‌ಗಳನ್ನು ಬೆಳೆಸಬೇಕಾದರೆ ಅವರಿಗೆ ಇಂತಹ ಕಠಿಣ ಸಾಗರೋತ್ತರ ಪಿಚ್‌ಗಳಲ್ಲಿ ಪೂರ್ಣಾವಕಾಶ ನೀಡಬೇಕು” ಎಂದು ಸ್ಪಷ್ಟ ಮಾತುಗಳಲ್ಲಿ ಸಲಹೆ ನೀಡಿದ್ದಾರೆ.

The post ಭುವನೇಶ್ವರ್‌ಗೆ ಆಡಿಸಿದ್ದು ಸೆಲೆಕ್ಟರ್ಸ್ ಮಾಡಿದ ದೊಡ್ಡ ಎಡವಟ್ಟು: ಬಿಸಿಸಿಐ ವಿರುದ್ಧ ಗುಡುಗಿದ ಇರ್ಫಾನ್ ಪಠಾಣ್! appeared first on Samyukta Karnataka.

India vs New Zealand: ಆಕ್ಲೆಂಡ್‌ನಲ್ಲಿ ಭಾರತಕ್ಕೆ ಮುಖಭಂಗ: ಕಿವೀಸ್ ದಾಳಿಗೆ 87 ರನ್‌ಗಳಿಂದ ಶರಣಾದ ಅಯ್ಯರ್ ಪಡೆ, ಕ್ಲೀನ್ ಸ್ವೀಪ್ ಕನಸು ಭಗ್ನ!
India vs New Zealand: ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ನಾಲ್ಕನೇ ಟಿ20 ಕದನದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 87 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸರಣಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಶ್ರೇಯಸ್ ಅಯ್ಯರ್ ಪಡೆಗೆ ಆತಿಥೇಯ ಕಿವೀಸ್ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ. ಆದಾಗ್ಯೂ, ಐದು ಪಂದ್ಯಗಳ ಈ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ನ್ಯೂಜಿಲೆಂಡ್ ನೀಡಿದ್ದ 260 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಿಂದಲೇ ತೀವ್ರ ಬ್ಯಾಟಿಂಗ್ ಕುಸಿತಕ್ಕೆ ಒಳಗಾಯಿತು. ಸಂಜು ಸ್ಯಾಮ್ಸನ್ (4) ಹಾಗೂ ಗಾಯದಿಂದ ಮರಳಿದ್ದ ಇಶಾನ್ ಕಿಶನ್ (0) ಮೊದಲ ಓವರ್‌ನಲ್ಲೇ ಪೆವಿಲಿಯನ್ ಸೇರಿ ಆಘಾತ ತಂದರು.

ಅಭಿಷೇಕ್ ಶರ್ಮಾ (27) ಮತ್ತು ನಾಯಕ ಶ್ರೇಯಸ್ ಅಯ್ಯರ್ (22) ಕ್ರೀಸ್‌ನಲ್ಲಿ ನಿಲ್ಲಲು ಯತ್ನಿಸಿದರೂ ಕಿವೀಸ್ ವೇಗಿಗಳ ದಾಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ನಿತೀಶ್ ಕುಮಾರ್ ರೆಡ್ಡಿ (21) ಮತ್ತು ಅಕ್ಷರ್ ಪಟೇಲ್ (7) ಅವರನ್ನು ಸ್ಯಾಂಟ್ನರ್ ಬೇಗನೆ ಪೆವಿಲಿಯನ್‌ಗೆ ಅಟ್ಟಿದರೆ, ನಮನ್ ಧೀರ್ (28) ಹಾಗೂ ಅರ್ಷ್‌ದೀಪ್ ಸಿಂಗ್ (0) ಅವರನ್ನು ಜೇಕಬ್ ಡಫಿ ಒಂದೇ ಓವರ್‌ನಲ್ಲಿ ಔಟ್ ಮಾಡಿದರು.

ಅಂತಿಮವಾಗಿ ತಿಲಕ್ ವರ್ಮಾ (35) ಹೋರಾಟ ನಡೆಸಿದರೂ, ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ ಪರ ಡಫಿ 4 ವಿಕೆಟ್ ಕಿತ್ತರೆ, ಸ್ಯಾಂಟ್ನರ್ ಮತ್ತು ಫಿಶರ್ ತಲಾ 2 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್, ಗ್ಲೆನ್ ಫಿಲಿಪ್ಸ್ (107 ರನ್, 49 ಎಸೆತ) ಸಿಡಿಸಿದ ಅಬ್ಬರದ ಶತಕ ಹಾಗೂ ಮೈಕಲ್ ಬ್ರೇಸ್‌ವೆಲ್ ಅವರ ಬಿರುಸಿನ ಅರ್ಧಶತಕದ (65 ರನ್, 25 ಎಸೆತ) ನೆರವಿನಿಂದ 259/7 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಭಾರತದ ಪರ ಮಯಾಂಕ್ ಯಾದವ್ 3 ವಿಕೆಟ್ ಪಡೆದಿದ್ದರು.

The post India vs New Zealand: ಆಕ್ಲೆಂಡ್‌ನಲ್ಲಿ ಭಾರತಕ್ಕೆ ಮುಖಭಂಗ: ಕಿವೀಸ್ ದಾಳಿಗೆ 87 ರನ್‌ಗಳಿಂದ ಶರಣಾದ ಅಯ್ಯರ್ ಪಡೆ, ಕ್ಲೀನ್ ಸ್ವೀಪ್ ಕನಸು ಭಗ್ನ! appeared first on Samyukta Karnataka.

ಫಿಲಿಪ್ಸ್ ಬಿರುಗಾಳಿಗೆ ಪುಡಿಪುಡಿಯಾದ ಬೌಲರ್ಸ್: ಆಕ್ಲೆಂಡ್‌ನಲ್ಲಿ ಭಾರತಕ್ಕೆ 260 ರನ್‌ಗಳ ಅಸಾಧ್ಯ ಗುರಿ ಕೊಟ್ಟ ಕಿವೀಸ್!
ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ಗಳು ಟೀಮ್ ಇಂಡಿಯಾ ಬೌಲಿಂಗ್ ಪಡೆಯನ್ನು ಅಕ್ಷರಶಃ ಧೂಳಿಪಟ ಮಾಡಿದ್ದಾರೆ. ಶುಕ್ರವಾರ ನಡೆದ ನಾಲ್ಕನೇ ಟಿ20 ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ, ಗ್ಲೆನ್ ಫಿಲಿಪ್ಸ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 259/7 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-0 ಅಂತರದಿಂದ ಮುನ್ನಡೆ ಸಾಧಿಸಿರುವ ಶ್ರೇಯಸ್ ಅಯ್ಯರ್ ಪಡೆ, ಈ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಕನಸು ಜೀವಂತವಾಗಿಡಬೇಕಾದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ತನ್ನ ಸಾರ್ವಕಾಲಿಕ ಗರಿಷ್ಠ ಚೇಸಿಂಗ್ ದಾಖಲೆಯನ್ನು ಬರೆಯಬೇಕಿದೆ.

ಆರಂಭದಲ್ಲೇ ಟಿಮ್ ಸೈಫರ್ಟ್ (3) ಮತ್ತು ಡೆರಿಲ್ ಮಿಚೆಲ್ (24) ಅವರನ್ನು ಬೇಗನೆ ಪೆವಿಲಿಯನ್‌ಗೆ ಅಟ್ಟಿದರೂ ಕಿವೀಸ್ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಗ್ಲೆನ್ ಫಿಲಿಪ್ಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್-ಬೌಂಡರಿಗಳ ಸುರಿಮಳೆಗರೆದರು. ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿದ ಫಿಲಿಪ್ಸ್ ಒಟ್ಟಾರೆ 49 ಎಸೆತಗಳಲ್ಲಿ ಭರ್ಜರಿ 107 ರನ್ ಚಚ್ಚಿದರು.

ಫಿಲಿಪ್ಸ್ ಗೆ ಸಾಥ್ ನೀಡಿದ ಮೈಕಲ್ ಬ್ರೇಸ್‌ವೆಲ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, 25 ಎಸೆತಗಳಲ್ಲಿ 65 ರನ್ ಸಿಡಿಸುವ ಮೂಲಕ ಭಾರತೀಯ ಬೌಲರ್‌ಗಳ ಬೆವರಿಳಿಸಿದರು. ನಿತೀಶ್ ಕುಮಾರ್ ರೆಡ್ಡಿ ಒಂದೇ ಓವರ್‌ನಲ್ಲಿ 32 ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಟೀಮ್ ಇಂಡಿಯಾ ಪರ ವೇಗಿ ಮಯಾಂಕ್ ಯಾದವ್ 3 ವಿಕೆಟ್ ಕಬಳಿಸಿ ತುಸು ನಿಯಂತ್ರಣ ತರಲು ಯತ್ನಿಸಿದರೆ, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್ ಮತ್ತು ಪ್ರಿನ್ಸ್ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಇಂದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಮತ್ತು ವೈಭವ್ ಸೂರ್ಯವಂಶಿಗೆ ವಿಶ್ರಾಂತಿ ನೀಡಲಾಗಿದ್ದು, ಮಯಾಂಕ್ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದಿದ್ದಾರೆ. ಗೆಲ್ಲಲು 260 ರನ್‌ಗಳ ಹಿಮಾಲಯದಂತಹ ಗುರಿ ಬೆನ್ನಟ್ಟಲಿರುವ ಭಾರತಕ್ಕೆ ಆರಂಭಿಕರ ಸ್ಪೋಟಕ ಆಟ ಅತ್ಯಗತ್ಯವಾಗಿದೆ.

The post ಫಿಲಿಪ್ಸ್ ಬಿರುಗಾಳಿಗೆ ಪುಡಿಪುಡಿಯಾದ ಬೌಲರ್ಸ್: ಆಕ್ಲೆಂಡ್‌ನಲ್ಲಿ ಭಾರತಕ್ಕೆ 260 ರನ್‌ಗಳ ಅಸಾಧ್ಯ ಗುರಿ ಕೊಟ್ಟ ಕಿವೀಸ್! appeared first on Samyukta Karnataka.

ಈ ಆಟಗಾರನ ಪರ ಗೌತಮ್ ಗಂಭೀರ್ ಬ್ಯಾಟಿಂಗ್: ವೈಭವ್ ಕಾಯಲೇಬೇಕು ಎಂದ ಕೋಚ್!
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 127 ರನ್‌ಗಳ ಭರ್ಜರಿ ಜಯ ಸಾಧಿಸಿ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಬೆನ್ನಲ್ಲೇ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡದ ಆಯ್ಕೆ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. 15 ವರ್ಷದ ಬಾಲಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಸರಣಿಯಲ್ಲಿ ಅವಕಾಶ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಗಂಭೀರ್, ಯುವ ಆಟಗಾರರು ತಮ್ಮ ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

‘ವೈಭವ್ ಅವರ ಬಳಿ ಅದ್ಭುತ ಪ್ರತಿಭೆ ಇರುವುದು ನಮಗೆ ತಿಳಿದಿದೆ. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಹೊಸಬರಿಗಿಂತ ಮೊದಲ ಆದ್ಯತೆ ಸಿಗುತ್ತದೆ. ಆಟಗಾರನಿಗೆ 15 ವರ್ಷವಿರಲಿ ಅಥವಾ 30 ವರ್ಷವಿರಲಿ, ಅವಕಾಶಕ್ಕಾಗಿ ಸರದಿಯಲ್ಲಿ ಕಾಯುವುದು ಅನಿವಾರ್ಯ. ವೈಭವ್‌ಗೆ ಅವಕಾಶ ಸಿಕ್ಕಾಗ ಅವರಿಗೆ ದೀರ್ಘಾವಧಿಯ ಕಾಲಾವಕಾಶ ನೀಡಲಾಗುವುದು’ ಎಂದು ಗಂಭೀರ್ ತಿಳಿಸಿದರು. ಇದೇ ವೇಳೆ ಸತತ ಎರಡು ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿದ ಕೋಚ್, ‘ಕೆಲವು ವೈಫಲ್ಯಗಳಿಂದಾಗಿ ವಿಶ್ವಕಪ್ ವಿಜೇತ ಆಟಗಾರರು ಕೆಟ್ಟವರಾಗುವುದಿಲ್ಲ. ಸ್ಯಾಮ್ಸನ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ’ ಎಂದರು.

ಇನ್ನೊಂದೆಡೆ, ವೇಗದ ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರ ಅಮೋಘ ಬೆಳವಣಿಗೆಯನ್ನು ಗಂಭೀರ್ ಹಾಡಿ ಹೊಗಳಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿಶ್ವಕಪ್ ದೃಷ್ಟಿಯಿಂದ ಸೀಮ್ ಬೌಲಿಂಗ್ ಆಲ್‌ರೌಂಡರ್‌ಗಳ ಪಾತ್ರ ಅತ್ಯಂತ ನಿರ್ಣಾಯಕ. ಸತತ ಪಂದ್ಯಗಳಲ್ಲಿ ತಲಾ ಮೂರು ವಿಕೆಟ್ ಪಡೆದು ಮಿಂಚಿರುವ ನಿತೀಶ್, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ.

ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ತರಾತುರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಗಂಭೀರ್, ಅವರು ಪುದುಚೇರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ‘ಭಾರತ ಎ’ ಸರಣಿಯಲ್ಲಿ 10 ಓವರ್ ಬೌಲಿಂಗ್ ಫಿಟ್‌ನೆಸ್ ಸಾಬೀತುಪಡಿಸಬೇಕಿದೆ ಎಂದರು. ಭವಿಷ್ಯದಲ್ಲಿ ಪಾಂಡ್ಯ ಮತ್ತು ನಿತೀಶ್ ರೆಡ್ಡಿ ಇಬ್ಬರೂ ಒಟ್ಟಿಗೆ ಆಡುವ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ. ಅಲ್ಲದೆ, ಮುಂಬರುವ ವಿಂಡೀಸ್ ಏಕದಿನ ಸರಣಿಯಲ್ಲಿ ನಮನ್ ಧೀರ್ ಮತ್ತು ಆಕಿಬ್ ನಬಿ ಅವರಂತಹ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ಸಿಗಲಿದೆ ಎಂದು ತಿಳಿಸಿದರು.

The post ಈ ಆಟಗಾರನ  ಪರ ಗೌತಮ್ ಗಂಭೀರ್ ಬ್ಯಾಟಿಂಗ್: ವೈಭವ್ ಕಾಯಲೇಬೇಕು ಎಂದ ಕೋಚ್! appeared first on Samyukta Karnataka.

ಟೀಮ್ ಇಂಡಿಯಾ ಎ-ತಂಡಕ್ಕೆ ಪಾಂಡ್ಯ ಎಂಟ್ರಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕನ್ನಡಿಗನ ನಾಯಕತ್ವದಲ್ಲಿ ತಂಡ ಪ್ರಕಟ
ಮುಂಬರುವ ಆಸ್ಟ್ರೇಲಿಯಾ ‘ಎ’ ವಿರುದ್ಧದ ತವರು ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ‘ಇಂಡಿಯಾ ಎ’ (India A) ತಂಡಗಳನ್ನು ಪ್ರಕಟಿಸಿದೆ. ಈ ಸರಣಿಯಲ್ಲಿ ಎರಡು ಬಹುದಿನಗಳ (Multi-day) ಪಂದ್ಯಗಳು ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಎಲ್ಲ ಪಂದ್ಯಗಳಿಗೂ ಪುದುಚೇರಿ ಆತಿಥ್ಯ ವಹಿಸಲಿದೆ. ಈ ಆಯ್ಕೆಯ ಅತ್ಯಂತ ಪ್ರಮುಖ ಅಂಶವೆಂದರೆ, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸೇರ್ಪಡೆ!

ಮಾರ್ಚ್ 2025ರ ನಂತರ ಟೀಮ್ ಇಂಡಿಯಾ ಪರ ಏಕದಿನ ಪಂದ್ಯಗಳನ್ನಾಡದ ಹಾರ್ದಿಕ್ ಪಾಂಡ್ಯ ಅವರನ್ನು ‘ಇಂಡಿಯಾ ಎ’ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಅವರು ಆಡುವ ಬಳಗದಲ್ಲಿ (Playing XI) ಸ್ಥಾನ ಪಡೆಯುವ ಮುನ್ನ ತಮ್ಮ ಫಿಟ್‌ನೆಸ್ ಸಾಬೀತುಪಡಿಸುವುದು ಕಡ್ಡಾಯವಾಗಿದೆ. ಮುಂದಿನ ವರ್ಷ (2027) ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುನ್ನ ಪಾಂಡ್ಯಗೆ ಮ್ಯಾಚ್ ಪ್ರಾಕ್ಟೀಸ್ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ತಂಡಗಳ ವಿವರ:

ಇಂಡಿಯಾ ‘ಎ’ (ಬಹುದಿನಗಳ ಪಂದ್ಯ): ದೇವದತ್ ಪಡಿಕ್ಕಲ್ (ನಾಯಕ), ಸಾಯಿ ಸುದರ್ಶನ್ (ಉಪನಾಯಕ), ಅಮನ್ ಮೊಖಾಡೆ, ಆಯುಷ್ ಪಾಂಡೆ, ಯಶ್ ರಾಥೋಡ್, ಶೇಖ್ ರಶೀದ್, ಕುಮಾರ್ ಕುಶಾಗ್ರ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ ಮುಂತಾದವರು.

ಇಂಡಿಯಾ ‘ಎ’ (ಏಕದಿನ ಪಂದ್ಯ): ರುತುರಾಜ್ ಗಾಯಕ್ವಾಡ್ (ನಾಯಕ), ದೇವದತ್ ಪಡಿಕ್ಕಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಪ್ರಿಯಾಂಶು ಆರ್ಯ, ಸಾಯಿ ಸುದರ್ಶನ್, ರಜತ್ ಪಾಟಿದಾರ್, ಪ್ರಭ್‌ಸಿಮ್ರಾನ್ ಸಿಂಗ್ ಮುಂತಾದವರು.

ಸೆಪ್ಟೆಂಬರ್ 22ರಿಂದ ಬಹುದಿನಗಳ ಪಂದ್ಯಗಳು ಹಾಗೂ ಅಕ್ಟೋಬರ್ 6ರಿಂದ ಏಕದಿನ ಸರಣಿ ಆರಂಭವಾಗಲಿದೆ. ಇದೇ ವೇಳೆ, ಭಾರತದ ಸೀನಿಯರ್ ತಂಡವು ಸೆಪ್ಟೆಂಬರ್ 27, 30 ಮತ್ತು ಅಕ್ಟೋಬರ್ 3ರಂದು ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

The post ಟೀಮ್ ಇಂಡಿಯಾ ಎ-ತಂಡಕ್ಕೆ ಪಾಂಡ್ಯ ಎಂಟ್ರಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕನ್ನಡಿಗನ ನಾಯಕತ್ವದಲ್ಲಿ ತಂಡ ಪ್ರಕಟ appeared first on Samyukta Karnataka.

ವೈಭವ್‌ಗೆ ಸಿಗದ ಅವಕಾಶ: ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಕೋಚ್ ರವಿಶಾಸ್ತ್ರಿ ವಿಡಿಯೋ ವೈರಲ್!
ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಇತ್ತೀಚಿನ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಪರ ಬ್ಯಾಟ್ ಬೀಸಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ, ಅದ್ಭುತ ಫಾರ್ಮ್‌ನಲ್ಲಿರುವ ವೈಭವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದಿರುವುದಕ್ಕೆ ಶಾಸ್ತ್ರಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಹಾಗೇ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 189 ರನ್ ಗಳಿಸಿದರೂ, ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (1 ರನ್) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಐರ್ಲೆಂಡ್ ಸರಣಿಯಲ್ಲೂ ಸಂಜು ಕಳಪೆ ಪ್ರದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಸ್ಯಾಮ್ಸನ್ ಬದಲಿಗೆ ಐಪಿಎಲ್‌ನಲ್ಲಿ ಜಗತ್ತಿನ ಖ್ಯಾತ ಬೌಲರ್‌ಗಳನ್ನೇ ಮನಬಂದಂತೆ ಚಚ್ಚಿ ಅಬ್ಬರಿಸಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಜಾಗ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

“ವೈಭವ್‌ನನ್ನು ಐರ್ಲೆಂಡ್ ಸರಣಿಯಲ್ಲೇ ಕಣಕ್ಕಿಳಿಸಬೇಕಿತ್ತು. ಅಲ್ಲಿನ ಸಣ್ಣ ಮೈದಾನಗಳಲ್ಲಿ ಸಿಕ್ಸರ್‌ಗಳ ಮಳೆ ಹರಿಸುತ್ತಿದ್ದರು. ಒಂದು ವೇಳೆ ಅವಕಾಶ ಸಿಕ್ಕಿದ್ದರೆ ಐರ್ಲೆಂಡ್ ಬೌಲರ್‌ಗಳ ‘ಪ್ಯಾಂಟ್ ಬಿಚ್ಚಿಸುತ್ತಿದ್ದರುʼ” ಎಂದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ. ಐಪಿಎಲ್‌ನಲ್ಲಿ ಸ್ಟಾರ್ ಬೌಲರ್‌ಗಳ ವಿರುದ್ಧವೇ ಅಬ್ಬರಿಸಿದ ಇಂತಹ ಪ್ರತಿಭಾವಂತ ಆಟಗಾರನನ್ನು ತಂಡದ ಹೊರಗಿಡುವುದು ಸರಿಯಲ್ಲ ಎಂದು ರವಿಶಾಸ್ತ್ರಿ ಗರಂ ಆಗಿದ್ದಾರೆ. ವೈಭವ್ ಯಾವುದೇ ಮಾನಸಿಕ ಒತ್ತಡವಿಲ್ಲದೆ ಆಡುತ್ತಾರೆ. ಆರಂಭದ ಓವರ್‌ಗಳಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಅವರಿಗೆ ತಂಡದಲ್ಲಿ ಶಾಶ್ವತ ಸ್ಥಾನ ನೀಡಬೇಕು.

ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿ ಮುಂದುವರಿದಿದ್ದು, ಮುಂಬರುವ ಪಂದ್ಯಗಳಲ್ಲಾದರೂ ಈ ಯುವ ಆಟಗಾರನಿಗೆ ಮ್ಯಾನೇಜ್‌ಮೆಂಟ್ ಅವಕಾಶ ನೀಡಲಿದೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

The post ವೈಭವ್‌ಗೆ ಸಿಗದ ಅವಕಾಶ: ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಕೋಚ್ ರವಿಶಾಸ್ತ್ರಿ ವಿಡಿಯೋ ವೈರಲ್! appeared first on Samyukta Karnataka.