Soft Skin Tips Archives - Samyukta Karnataka

ಸೌಂದರ್ಯಕ್ಕೆ ಮನೆಯಲ್ಲೇ ಮಾಡಿ ‘ಬೀಟ್‌ರೂಟ್ ಬಾಡಿ ಸ್ಕ್ರಬ್’: ಒಣಚರ್ಮದ ಸಮಸ್ಯೆಗೆ ಸರಳ ಪರಿಹಾರ!
ಬೆಂಗಳೂರು: ದಿನನಿತ್ಯದ ಕಠಿಣ ಸೋಪುಗಳ ಬಳಕೆ, ಧೂಳು, ಹವಾಮಾನ ಬದಲಾವಣೆ ಹಾಗೂ ಸೂರ್ಯನ ಬಿಸಿಲಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಕೈಗಳಲ್ಲಿರುವ ನೈಸರ್ಗಿಕ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಚರ್ಮವು ಒಣಗಿ, ಒರಟಾಗಿ ತನ್ನ ಜೀವಕಳೆಯನ್ನು ಕಳೆದುಕೊಳ್ಳುವುದು ಇತ್ತೀಚೆಗೆ ಸಾಮಾನ್ಯ ಸಮಸ್ಯೆಯಾಗಿದೆ.

ಚರ್ಮದ ಮೇಲ್ಪದರದಲ್ಲಿ ಸತ್ತ ಜೀವಕೋಶಗಳು (Dead Skin Cells) ಸಂಗ್ರಹವಾಗುವುದೇ ಈ ಸಮಸ್ಯೆಗೆ ಮೂಲ ಕಾರಣ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಸುಗಂಧ ಹಾಗೂ ರಾಸಾಯನಿಕಯುಕ್ತ ಉತ್ಪನ್ನಗಳು ಚರ್ಮದ ನೈಸರ್ಗಿಕ ತೈಲವನ್ನು ನಾಶಮಾಡಿ ಅಲರ್ಜಿ ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ, ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಚರ್ಮದ ಮೃದುತ್ವವನ್ನು ಮರಳಿ ಪಡೆಯಬಹುದು.

ತಯಾರಿಸುವ ವಿಧಾನ: ಈ ಮನೆಮದ್ದು ತಯಾರಿಸಲು ತಲಾ ಎರಡು ಚಮಚ ಅಕ್ಕಿ, ಓಟ್ಸ್ ಮತ್ತು ಸಕ್ಕರೆಯನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಹದವಾಗಿ ಪುಡಿಮಾಡಿಕೊಳ್ಳಿ. ನಂತರ ಒಂದು ಸಣ್ಣ ಬೀಟ್‌ರೂಟ್ ತುಂಡುಗಳಿಗೆ ಸ್ವಲ್ಪ ಗುಲಾಬಿ ನೀರು ಸೇರಿಸಿ ರುಬ್ಬಿ, ರಸವನ್ನು ಸೋಸಿಕೊಳ್ಳಿ. ಈಗ ಸಿದ್ಧಪಡಿಸಿದ ಪುಡಿಗೆ ತೆಂಗಿನ ಎಣ್ಣೆ, ಬೀಟ್‌ರೂಟ್ ರಸ ಮತ್ತು ಗುಲಾಬಿ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ‘ಬಾಡಿ ಸ್ಕ್ರಬ್’ ಸಿದ್ಧವಾಗುತ್ತದೆ.

ಬಳಸುವ ಕ್ರಮ: ಈ ಸ್ಕ್ರಬ್ ಅನ್ನು ಕೈಗಳಿಗೆ ಹಚ್ಚಿ, ೨ ರಿಂದ ೩ ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮೃದುವಾಗಿ ಮಸಾಜ್ ಮಾಡಬೇಕು. ಅತಿಯಾಗಿ ಉಜ್ಜುವುದರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುವುದರಿಂದ ಹಗುರವಾಗಿ ಮಸಾಜ್ ಮಾಡಿ, ನಂತರ ಶುದ್ಧ ನೀರಿನಿಂದ ತೊಳೆದು ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಇದರಲ್ಲಿರುವ ಅಕ್ಕಿ ಮತ್ತು ಓಟ್ಸ್ ಸತ್ತ ಕೋಶಗಳನ್ನು ನಿವಾರಿಸಿದರೆ, ತೆಂಗಿನ ಎಣ್ಣೆಯು ತೇವಾಂಶ ನೀಡುತ್ತದೆ. ಬೀಟ್‌ರೂಟ್ ಚರ್ಮಕ್ಕೆ ನೈಸರ್ಗಿಕ ಗುಲಾಬಿ ಕಾಂತಿಯನ್ನು ನೀಡುತ್ತದೆ. ನಿಯಮಿತ ಬಳಕೆಯಿಂದ ಕೈಗಳು ಮೃದು ಹಾಗೂ ಕಾಂತಿಯುತವಾಗುತ್ತವೆ.

The post ಸೌಂದರ್ಯಕ್ಕೆ ಮನೆಯಲ್ಲೇ ಮಾಡಿ ‘ಬೀಟ್‌ರೂಟ್ ಬಾಡಿ ಸ್ಕ್ರಬ್’: ಒಣಚರ್ಮದ ಸಮಸ್ಯೆಗೆ ಸರಳ ಪರಿಹಾರ! appeared first on Samyukta Karnataka.