#IndianMusic Archives - Samyukta Karnataka

ಮಕ್ಕಳ ಸಾವು.. ಪತಿಯ ಕಿರುಕುಳ! ಗಾಯಕಿ ಆಶಾ ಭೋಸ್ಲೆ ಬದುಕಿನ ಕರಾಳ ದಿನಗಳು
ಆಶಾ ಭೋಸ್ಲೆ.. ಅದ್ಭುತ ಕಂಠಸಿರಿ ಹೊಂದಿದ್ದ ಖ್ಯಾತ ಗಾಯಕಿ. ಆಶಾ ಭೋಸ್ಲೆ ಎಂದರೆ ನಮಗೆ ನೆನಪಾಗುವುದು ಅವರ ಮಧುರ ಧ್ವನಿ. ಆಶಾ ಅವರ ಜೀವನ ಸಪ್ತಸ್ವರಗಳ ಹಾಗೆ ಲಯಬದ್ಧವಾಗಿರಲಿಲ್ಲ. ಆಶಾ ಅವರ ಜೀವನದಲ್ಲಿ ಅಪಸ್ವರಗಳು ಕೂಡ ಇದ್ದವು. ಆಶಾ ಜೀವನದಲ್ಲಿ ಅವರು ಎದುರಿಸಿದ 5 ಕಷ್ಟಕರ, ಕಣ್ಣೀರಿನ ಕಥೆಗಳು.

ಅಕ್ಕನ ನೆರಳಿನಲ್ಲೇ ಬದುಕಬೇಕಾದ ಅನಿವಾರ್ಯತೆ
ಆಶಾ ಅವರಿಗೆ ತಮ್ಮ ಅಕ್ಕ ಲತಾ ಮಂಗೇಶ್ಕರ್ ಅವರೇ ಅತಿದೊಡ್ಡ ಸ್ಪರ್ಧಿಯಾಗಿದ್ದರು. ಅಂದು ಲತಾ ಅವರು ಉತ್ತುಂಗದಲ್ಲಿದ್ದ ಕಾಲ. ಚಿತ್ರರಂಗದ ಪ್ರಮುಖ ಹಾಡುಗಳೆಲ್ಲಾ ಲತಾ ಅವರಿಗೆ ಸಿಗುತ್ತಿದ್ದವು. ಆಶಾ ಅವರಿಗೆ ಕೇವಲ ಸೈಡ್ ರೋಲ್ ಅಥವಾ ನಾಯಕಿಯ ಗೆಳತಿಯರಿಗೆ ಮೀಸಲಾದ ಹಾಡುಗಳನ್ನೇ ನೀಡಲಾಗುತ್ತಿತ್ತು. ಲತಾ ಅವರ ನೆರಳಿನಿಂದ ಹೊರಬಂದು ಸ್ವಂತ ಗುರುತು ಮೂಡಿಸಲು ಅವರು ದಶಕಗಳ ಕಾಲ ಹೋರಾಡಬೇಕಾಯಿತು.

ವೈವಾಹಿಕ ಜೀವನದಲ್ಲಿ ಕಹಿ ಅನುಭವ
ತಮ್ಮ 16ನೇ ವಯಸ್ಸಿನಲ್ಲಿ ಆಶಾ ಅವರು ಮನೆಯವರ ಇಚ್ಛೆಗೆ ವಿರುದ್ಧವಾಗಿ 31 ವರ್ಷದ ಗಣಪತ್ ರಾವ್ ಭೋಸ್ಲೆ ಅವರ ಜೊತೆ ಓಡಿ ಹೋಗಿ ಮದುವೆಯಾದರು. ಆದರೆ ಆ ಜೀವನ ಸುಖಮಯವಾಗಿರಲಿಲ್ಲ. ಅಲ್ಲಿ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಎದುರಾಯಿತು. ಅಂತಿಮವಾಗಿ ಇಬ್ಬರು ಮಕ್ಕಳೊಂದಿಗೆ, ಮೂರನೇ ಮಗುವನ್ನು ಹೊಟ್ಟೆಯಲ್ಲಿ ಹೊತ್ತ ಸ್ಥಿತಿಯಲ್ಲಿ ಅವರು ಪತಿಯ ಮನೆಯಿಂದ ಹೊರಬರಬೇಕಾಯಿತು.

ಆರ್ಥಿಕ ಸಂಕಷ್ಟ
ಪತಿಯ ಮನೆಯಿಂದ ಹೊರ ಬಂದ ನಂತರ ಆಶಾ ಅವರ ಮುಂದೆ ಇದ್ದದ್ದು ಶೂನ್ಯ. ಕೈಯಲ್ಲಿ ಹಣವಿರಲಿಲ್ಲ, ತಲೆಯ ಮೇಲೆ ಸೂರಿರಲಿಲ್ಲ. ಮೂವರು ಮಕ್ಕಳನ್ನು ಒಬ್ಬಂಟಿಯಾಗಿ ಸಾಕುವ ಜವಾಬ್ದಾರಿ ಅವರ ಮೇಲಿತ್ತು. ಜೀವನೋಪಾಯಕ್ಕಾಗಿ ಅವರು ಸಿಕ್ಕ ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಒಪ್ಪಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅವರು ಅನುಭವಿಸಿದ ಆರ್ಥಿಕ ಮುಗ್ಗಟ್ಟು ಅವರ ಜೀವನದ ಕರಾಳ ದಿನಗಳು.

ಗಂಡನ ಅಗಲಿಕೆಯ ನೋವು
ಆಶಾ ಅವರ ಜೀವನದಲ್ಲಿ ಸಾವು ಪದೇ ಪದೇ ನೋವು ನೀಡಿದೆ. ಅವರ ಎರಡನೇ ಪತಿ, ಖ್ಯಾತ ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ (ಪಂಚಮ್ ದ) ಅವರ ಸಾವು ಆಶಾ ಅವರನ್ನು ಕಂಗೆಡಿಸಿತು. ಕೇವಲ 14 ವರ್ಷಗಳ ದಾಂಪತ್ಯದ ನಂತರ ಪಂಚಮ್ ದ ಅಗಲಿದ್ದು ಅವರಿಗೆ ಭರಿಸಲಾಗದ ನಷ್ಟವಾಗಿತ್ತು.

ಮಕ್ಕಳ ಸಾವಿನ ಆಘಾತ
ಒಬ್ಬ ತಾಯಿಗೆ ತನ್ನ ಮಕ್ಕಳನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ. 2012ರಲ್ಲಿ ಆಶಾ ಅವರ ಮಗಳು ವರ್ಷಾ ಭೋಸ್ಲೆ ಆತ್ಮಹತ್ಯೆ ಮಾಡಿಕೊಂಡರು. ಅದಾದ ಕೆಲವೇ ವರ್ಷಗಳಲ್ಲಿ (2015) ಹಿರಿಯ ಮಗ ಹೇಮಂತ್ ಭೋಸ್ಲೆ ಕ್ಯಾನ್ಸರ್‌ನಿಂದ ನಿಧನರಾದರು. ವೃದ್ಧಾಪ್ಯದಲ್ಲಿ ಮಕ್ಕಳನ್ನು ಕಳೆದುಕೊಂಡ ಈ ನೋವು ಇಂದಿಗೂ ಅವರನ್ನು ಕಾಡುತ್ತಿದೆ.

ಇಷ್ಟೆಲ್ಲಾ ನೋವುಗಳ ನಡುವೆಯೂ ಆಶಾ ಭೋಸ್ಲೆ ಅವರು ಎಂದೂ ಹತಾಶರಾಗಿ ಕುಳಿತುಕೊಳ್ಳಲಿಲ್ಲ. ತಮ್ಮ ನೋವನ್ನು ಹಾಡಿನ ಮೂಲಕ ಮರೆತು, ಇಂದು ವಿಶ್ವದ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಜೀವನ “ಸೋಲೊಪ್ಪಬಾರದು” ಎಂಬ ಪಾಠಕ್ಕೆ ಅತ್ಯುತ್ತಮ ಉದಾಹರಣೆ.

The post ಮಕ್ಕಳ ಸಾವು.. ಪತಿಯ ಕಿರುಕುಳ! ಗಾಯಕಿ ಆಶಾ ಭೋಸ್ಲೆ ಬದುಕಿನ ಕರಾಳ ದಿನಗಳು appeared first on Samyukta Karnataka.

80 ವರ್ಷ, 12,000 ಹಾಡುಗಳು; ಬಾರದ ಲೋಕಕ್ಕೆ ‘ರಂಗೀಲಾ’ ಗಾಯಕಿ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಂಸ್ಲೆ. ಆಶಾ ಭೋಂಸ್ಲೆ ಅವರು, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಶಾ ಅವರ ಅಗಲಿಕೆ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಪಿಯಾ ತು ಅಬ್ ತೊ ಆಜಾ.. ಕಜ್ರಾ ಮೊಹಬ್ಬತ್ ವಾಲಾ.. ರಂಗೀಲಾ ರೇ ಮತ್ತು ದಿಲ್ ಚೀಜ್ ಕ್ಯಾ ಹೈ ಹಾಡು ಅಂದ್ರೆ ಆಶಾ ಭೋಸ್ಲೆ ನೆನಪಾಗುತ್ತೆ. ಆಶಾ ಭೋಸ್ಲೆ ಸೆಪ್ಟೆಂಬರ್ 8ರಂದು 93ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ಅವರ ನಿಧನ ಸಂಗೀತ ಪ್ರೇಮಿಗಳಿಗೆ ಆಘಾತವನ್ನ ಉಂಟು ಮಾಡಿದೆ.

ಮೆಲೋಡಿ ರಾಣಿ ಲತಾ ಮಂಗೇಶ್ಕರ್ ಅವರ ತಂಗಿ ಆಶಾ ಭೋಸ್ಲೆ. ಆಶಾ ತಮ್ಮದೇ ಆದ ರೀತಿಯಲ್ಲಿ ಹೊಸ ಛಾಪು ಮೂಡಿಸಿದ್ದ ಪ್ರತಿಭೆ. ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಗಾಯಕಿ ಉಷಾ ಮಂಗೇಶ್ಕರ್ ಮೂವರು ಸಹೋದರಿಯರು. ಇವರು ಪೌರಾಣಿಕ ಮಂಗೇಶ್ಕರ್ ಕುಟುಂಬದಲ್ಲಿ ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಶೇವಂತಿ ಮಂಗೇಶ್ಕರ್ ದಂಪತಿ ಮಕ್ಕಳು. ದೀನನಾಥ್‌ ಮಂಗೇಶ್ಕರ್‌ ಅವರಿಗೆ ಲತಾ, ಮೀನಾ, ಆಶಾ, ಉಷಾ ಮತ್ತು ಹೃದಯನಾಥ್ ಐವರು ಮಕ್ಕಳು.

ತಮ್ಮ ಅದ್ಭುತ ಗಾಯನದ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದಿರುವ ಆಶಾ ಭೋಂಸ್ಲೆ ಅವರ ಧ್ವನಿ ಎಂದೆಂದಿಗೂ ಅಮರವಾಗಿರುತ್ತದೆ. ಸಂಗೀತವೇ ಉಸಿರಾಗಿರುವ ಅವರ ಬದುಕು ಮುಂಬರುವ ಪೀಳಿಗೆಗೆ ಒಂದು ಮಹಾನ್ ಪುಸ್ತಕ. ಅವರ ಧ್ವನಿ ನಮ್ಮ ಕಿವಿಯಲ್ಲಿ ಸದಾ ನಿರಂತರವಾಗಿ ಪ್ರತಿಧ್ವನಿಸುತ್ತಲೇ ಇರುತ್ತದೆ.

The post 80 ವರ್ಷ, 12,000 ಹಾಡುಗಳು; ಬಾರದ ಲೋಕಕ್ಕೆ ‘ರಂಗೀಲಾ’ ಗಾಯಕಿ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು? appeared first on Samyukta Karnataka.