Gold prices drop Archives - Samyukta Karnataka

ಕ್ಷಣಕ್ಷಣಕ್ಕೂ ಪಾತಾಳಕ್ಕಿಳಿಯುತ್ತಿದೆ ಚಿನ್ನದ ಬೆಲೆ : 14 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಬಂಗಾರ; ಬೆಳ್ಳಿ ದರದಲ್ಲೂ ಭಾರಿ ಇಳಿಕೆ!
ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರು ಹಾಗೂ ಮದುವೆ ಸೀಸನ್ ಶಾಪಿಂಗ್ ಮಾಡುವವರಿಗೆ ಮಾರುಕಟ್ಟೆಯಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ದೇಶೀಯ ಚಿನಿವಾರ ಪೇಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ದರಗಳಲ್ಲಿ ಸತತ ಕುಸಿತ ಮುಂದುವರಿದಿದೆ.

ಚಿನ್ನದ ಬೆಲೆ ಕಳೆದ 14 ತಿಂಗಳ ಕನಿಷ್ಠ ಮಟ್ಟಕ್ಕೆ ಹಾಗೂ ಬೆಳ್ಳಿ ದರ ಒಂದು ವರ್ಷದಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನವೆಂಬರ್ 9ರಿಂದ ಇಲ್ಲಿಯವರೆಗೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಬರೋಬ್ಬರಿ ಶೇಕಡಾ 6ರಷ್ಟು ಇಳಿಕೆಯಾಗಿದ್ದರೆ, ಬೆಳ್ಳಿ ದರ ಕೇವಲ ಎಂಟು ದಿನಗಳಲ್ಲಿ ಶೇಕಡಾ 13ರಷ್ಟು ಕುಸಿತ ಕಂಡಿದೆ.

ಪ್ರಮುಖ ನಗರಗಳ ಇಂದಿನ ಚಿನ್ನ ಮತ್ತು ಬೆಳ್ಳಿ ದರ :

ಇಂದಿನ ಅಂದರೆ ನವೆಂಬರ್ 19 ಮಾರುಕಟ್ಟೆ ದರ ಗಮನಿಸಿದರೆ ಆಭರಣ ಪ್ರಿಯರಿಗೆ ಸಖತ್ ರಿಲೀಫ್ ಸಿಕ್ಕಿದೆ.

ಮುಂಬೈ ಮಾರುಕಟ್ಟೆ ದರ ಗಮನಿಸಿದರೆ  : 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ  ರುಪಾಯಿ 1,30,690ಕ್ಕೆ ಇಳಿದಿದ್ದರೆ, ಆಭರಣದ 22 ಕ್ಯಾರೆಟ್ ಚಿನ್ನ ರುಪಾಯಿ 1,19,800ಕ್ಕೆ ಲಭ್ಯವಿದೆ. 18 ಕ್ಯಾರೆಟ್ ದರ  98,020 ರೂಪಯಿ  ಇದೆ.

ದೆಹಲಿ ಮಾರುಕಟ್ಟೆ ದರ ಗಮನಿಸಿದರೆ: 24 ಕ್ಯಾರೆಟ್ ಚಿನ್ನ 1,30,840 ರೂಪಾಯ  ಹಾಗೂ 22 ಕ್ಯಾರೆಟ್ ಚಿನ್ನ ರುಪಾಯಿ 1,19,950ಕ್ಕೆ ಇಳಿಕೆಯಾಗಿದೆ. ಇನ್ನು ಬೆಳ್ಳಿ ದರ ಕೆ.ಜಿಗೆ  ರೂಪಾಯಿ 1,80,000 ಆಸುಪಾಸಿನಲ್ಲಿದೆ.

ಬೆಂಗಳೂರು ಮತ್ತು ಚೆನ್ನೈ ಮಾರುಕಟ್ಟೆ ಟ್ರೆಂಡ್: ಪ್ರಮುಖ ಜ್ಯುವೆಲ್ಲರಿ ಮಳಿಗೆಗಳಾದ ತನಿಷ್ಕ್ ಮತ್ತು ಮಲಬಾರ್ ಗೋಲ್ಡ್‌ನಲ್ಲೂ ದರ ಗಣನೀಯವಾಗಿ ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂಗೆ ರೂ. 1,22,150 ರಿಂದ ರೂ. 1,22,650 ಆಸುಪಾಸಿಗೆ ಬಂದಿದೆ. ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ರೂ. 1.60 ಲಕ್ಷದಿಂದ ರೂ.1.85 ಲಕ್ಷದ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿದೆ.

ಬೆಲೆ ಇಳಿಕೆಗೆ ಪ್ರಮುಖ ಕಾರಣಗಳೇನು?: ಅಮೆರಿಕದ ಡಾಲರ್ ಮೌಲ್ಯ ಕಳೆದ 19 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವುದು ಮತ್ತು ಡಿಸೆಂಬರ್‌ನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಶೇ. 95ರಷ್ಟಿರುವುದು ಚಿನ್ನದ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಬಡ್ಡಿದರ ಏರಿಕೆಯ ನಿರೀಕ್ಷೆಯಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಹಿಂಪಡೆಯುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್‌ಗೆ $3,743ಕ್ಕೆ ಕುಸಿದಿದೆ.

ಅಲ್ಲದೆ, ಜನವರಿಯ ದಾಖಲೆ ಮಟ್ಟಕ್ಕೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಸುಮಾರು ಶೇ. 62ರಷ್ಟು ಕುಸಿತ ದಾಖಲಾಗಿದ್ದು, ಜಾಗತಿಕ ಮಟ್ಟದಲ್ಲಿ ಬೆಳ್ಳಿಯ ಬೇಡಿಕೆಯೂ ಕಡಿಮೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯ ಒತ್ತಡ ಮುಂದುವರಿಯುವ ಸಾಧ್ಯತೆಯಿದ್ದು, ಆಭರಣ ಖರೀದಿದಾರರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

The post ಕ್ಷಣಕ್ಷಣಕ್ಕೂ ಪಾತಾಳಕ್ಕಿಳಿಯುತ್ತಿದೆ ಚಿನ್ನದ ಬೆಲೆ : 14 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಬಂಗಾರ; ಬೆಳ್ಳಿ ದರದಲ್ಲೂ ಭಾರಿ ಇಳಿಕೆ! appeared first on Samyukta Karnataka.