Ganavi Gowda Gagan Chinnappa Archives - Samyukta Karnataka

ಬಿಗ್ ಬಾಸ್ 13: ಗಾನವಿ-ಗಗನ್ ಕ್ಯಾಪ್ಟನ್ಸಿ ಬಗ್ಗೆ ಯಶಸ್ ವ್ಯಂಗ್ಯ; ಸೌಂದರ್ಯ ನಗುವಿಗೂ ವೀಕ್ಷಕರ ಆಕ್ರೋಶ!
BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ಮನೆಯಲ್ಲಿ ಕ್ಯಾಪ್ಟನ್ಸಿ ವಿಚಾರವಾಗಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಗಾನವಿ ಗೌಡ ‘ಮಹಾರಾಣಿ’ ಪಟ್ಟದೊಂದಿಗೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ಗೆಲುವಿಗೆ ಕಾರಣರಾದ ಗಗನ್ ಚಿನ್ನಪ್ಪ ‘ಕ್ವೀನ್ ಮೇಕರ್’ ಹಾಗೂ ಎರಡನೇ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಆದ್ರೆ ಈ ಸಂಭ್ರಮದ ನಡುವೆ ಸಹಸ್ಪರ್ಧಿ ಯಶಸ್ ಕೃಷ್ಣ ಆಡಿದ ಒಂದು ಮಾತು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಕ್ಯಾಪ್ಟನ್ ಹೆಸರು ಘೋಷಣೆಯಾದ ಬೆನ್ನಲ್ಲೇ ಮನೆಯ ಸದಸ್ಯರೊಂದಿಗೆ ಮಾತನಾಡುತ್ತಿದ್ದ ಯಶಸ್, “ನನಗೊಂದು ಡೌಟು, ಮನೆಯಲ್ಲಿ ಕ್ಯಾಪ್ಟನ್ ರೂಮ್ ಒಂದೇ ಇರೋದು..” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಯಶಸ್ ಅವರ ಈ ಮಾತಿಗೆ ಪಕ್ಕದಲ್ಲೇ ಇದ್ದ ಸೌಂದರ್ಯ ಶೆಟ್ಟಿ ಜೋರಾಗಿ ನಗುವ ಮೂಲಕ ಸಾಥ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಟಾಸ್ಕ್ ಗೆದ್ದು ಕ್ಯಾಪ್ಟನ್ ಆದವರನ್ನು ಅಭಿನಂದಿಸುವ ಬದಲು, ತಮಾಷೆಯ ಹೆಸರಿನಲ್ಲಿ ಯಶಸ್ ಕೀಳುಮಟ್ಟದ ಕಾಮೆಂಟ್ ಮಾಡಿದ್ದಾರೆ ಎಂದು ವೀಕ್ಷಕರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಇಂತಹ ಮಾತುಗಳನ್ನು ಖಂಡಿಸುವ ಬದಲು ನಕ್ಕ ಸೌಂದರ್ಯ ಶೆಟ್ಟಿ ನಡೆಗೂ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಬ್ಬರು ಕ್ಯಾಪ್ಟನ್‌ಗಳಿದ್ದಾಗ ಒಬ್ಬರು ಕ್ಯಾಪ್ಟನ್ ರೂಮ್ ತ್ಯಾಗ ಮಾಡಬೇಕು ಎಂಬ ನಿಯಮ ಮನೆಯ ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಯಶಸ್ ಬೇಕೆಂದೇ ಇಂತಹ ಮಾತುಗಳನ್ನಾಡಿದ್ದಾರೆ ಎಂಬುದು ಬಹುಪಾಲು ವೀಕ್ಷಕರ ಅಭಿಪ್ರಾಯವಾಗಿದೆ. ಕೆಲ ಅಭಿಮಾನಿಗಳು ಇದನ್ನು ತಮಾಷೆ ಎಂದು ಸಮರ್ಥಿಸಿಕೊಂಡರೂ, ಒಟ್ಟಾರೆ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

The post ಬಿಗ್ ಬಾಸ್ 13: ಗಾನವಿ-ಗಗನ್ ಕ್ಯಾಪ್ಟನ್ಸಿ ಬಗ್ಗೆ ಯಶಸ್ ವ್ಯಂಗ್ಯ; ಸೌಂದರ್ಯ ನಗುವಿಗೂ ವೀಕ್ಷಕರ ಆಕ್ರೋಶ! appeared first on Samyukta Karnataka.