COLOSKANNADASERIALS Archives - Samyukta Karnataka

ಕಲರ್ಸ್‌ ಕನ್ನಡದಲ್ಲಿ ಮದುವೆ ಹಂಗಾಮಾ: ಭಾಗ್ಯ-ಪವಿತ್ರ ಬದುಕಿನಲ್ಲಿ ಎದುರಾಯ್ತು ಮಹಾಬಿರುಗಾಳಿ!
ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಕಲರ್ಸ್‌ ಕನ್ನಡ’ದ ಎರಡು ಪ್ರಮುಖ ಧಾರಾವಾಹಿಗಳಾದ ‘ಭಾಗ್ಯಲಕ್ಷ್ಮೀ’ ಮತ್ತು ‘ಪವಿತ್ರ ಬಂಧನ’ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿವೆ. ಈ ವಾರ ಬಿಡುಗಡೆಯಾಗಿರುವ ಹೊಸ ಪ್ರೋಮೋಗಳು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಇಬ್ಬರು ನಾಯಕಿಯರ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿವೆ.

ಕಲರ್ಸ್‌ ಕನ್ನಡದ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಕಥೆ ಈಗ ಸುನಾಮಿಯಂತೆ ಬದಲಾಗಿದೆ. ವಿಲನ್‌ ಪಾತ್ರದಾರಿ ಮನೋಜ್, ಪವಿತ್ರಾ ಕುಟುಂಬವನ್ನೇ ಒತ್ತೆ ಇಟ್ಟುಕೊಂಡು ಅವಳನ್ನು ಬಲವಂತವಾಗಿ ಮದುವೆಯಾಗಲು ಸಂಚು ಮಾಡಿದ್ದಾನೆ. ಆದ್ರೆ ಸರಿಯಾದ ಸಮಯಕ್ಕೆ ಎಂಟ್ರಿ ಕೊಟ್ಟ ನಾಯಕ ದೇವ್, ಮನೋಜ್‌ನ ಕೆಟ್ಟ ಆಟಕ್ಕೆ ತಕ್ಕ ಪಾಠ ಕಲಿಸಿದ್ದಾನೆ.

ತನ್ನ ತಮ್ಮ ತಿಲಕ್‌ಗೆ ಕೊಟ್ಟ ಮಾತಿನಂತೆ ಪವಿತ್ರಾಳ ಬದುಕನ್ನು ರಕ್ಷಿಸಲು ದೇವ್ ಆಕೇಯ ಕೊರಳಿಗೆ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದಾನೆ. ತಮ್ಮನನ್ನು ಕಳೆದುಕೊಂಡ ನೋವು ಮತ್ತು ಪವಿತ್ರಾ ಮೇಲಿರುವ ದ್ವೇಷದ ನಡುವೆಯೂ ದೇವ್ ಈ ನಿರ್ಧಾರ ತಗೆದುಕೊಂಡಿದ್ದಾನೆ. ದಿಗ್ಭ್ರಾಂತಳಾಗಿರುವ ಪವಿತ್ರಾ ಈ ಮದುವೆನ್ನು ಒಪ್ಪುತ್ತಾಳೆಯೇ? ದೇವ್‌ನ ತಾಯಿ ಈ ಹಠಾತ್ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಹಾಗೇ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಒಂದು ದೂಡ್ಡ ತಿರುವು ನೀಡಲಿದೆ. ಅಲ್ಲದೇ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಘಟನೆಯೊಂದು ಸಂಭವಿಸಲಿದೆ ಎನ್ನುವುದು ಸದ್ಯದ ಪ್ರೋಮೋದಲ್ಲಿದೆ. ಭಾಗ್ಯ ತನ್ನ ಮಾವನಿಗೆ ಕೊಟ್ಟ ಮಾತಿಗೆ ಕಟ್ಟುಬಿದ್ದು, ಮತ್ತೆ ತಾಂಡವ್ ಜೊತೆ ಮರುಮಾಂಗಲ್ಯ ಧಾರಣೆಗೆ ಸಜ್ಜಾಗಿದ್ದಾಳೆ.

ಇತ್ತ ಆದಿಶ್ವರ್ ಕೂಡ ಈ ಮದುವೆಗೆ ಸಮ್ಮತಿ ಸೂಚಿಸಿರುವುದು ವೀಕ್ಷಕರಲ್ಲಿ ಆಕ್ರೋಶ ಮೂಡಿಸಿದೆ. ತಾಂಡವ್ ಎಂದಿನಂತೆ ತನ್ನ ಸ್ವಾರ್ಥದ ಮುಖವಾಡ ಹಾಕಿಕೊಂಡು ಅಟ್ಟಹಾಸ ಮೆರೆಯುತ್ತಿದ್ದರೂ, ಭಾಗ್ಯ ಮಾತ್ರ ಮೌನಕ್ಕೆ ಶರಣಾಗಿದ್ದಾಳೆ. ಆದ್ರೆ ಈ ಮೌನದ ಹಿಂದೆ ದೊಡ್ಡ ಬಿರುಗಾಳಿಯೇ ಅಡಗಿರುವ ಸೂಚನೆ ಸಿಗುತ್ತಿದೆ. ಭಾಗ್ಯ ನಿಜವಾಗಿಯೂ ತಾಂಡವ್‌ನ ಮದುವೆಯಾಗುತ್ತಾಳಾ ಅಥವಾ ಮಂಟಪದಲ್ಲಿ ಏನಾದರೂ ಅಚ್ಚರಿಯ ತಿರುವು ಕಾದಿದೆಯೇ ಎಂಬ ಪ್ರಶ್ನೆ ಮೂಡಿದೆ.

ಇಂದಿನಿಂದ ಪ್ರಾರಂಭವಾಗಲಿರುವ ಈ ‘ಮದುವೆ ವಿಶೇಷ’ ಸಂಚಿಕೆಗಳು ಸ್ಯಾಂಡಲ್‌ವುಡ್ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮೂಡಿಸಲಿವೆ. ಪವಿತ್ರಾ ಮತ್ತು ಭಾಗ್ಯ ಈ ಇಬ್ಬರೂ ಹೆಣ್ಣುಮಕ್ಕಳು ತಮ್ಮ ಸಂಕಷ್ಟಗಳಿಂದ ಹೇಗೆ ಹೊರಬರುತ್ತಾರೆ? ವಿಧಿ ಆಟ ಇವರನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದು ಈ ವಾರದ ಪ್ರಮುಖ ಕುತೂಹಲಕಾರಿ ಸಂಚಿಕೆಯಾಗಿವೆ.

The post ಕಲರ್ಸ್‌ ಕನ್ನಡದಲ್ಲಿ ಮದುವೆ ಹಂಗಾಮಾ: ಭಾಗ್ಯ-ಪವಿತ್ರ ಬದುಕಿನಲ್ಲಿ ಎದುರಾಯ್ತು ಮಹಾಬಿರುಗಾಳಿ! appeared first on Samyukta Karnataka.

ʻನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ನಂದಕುಮಾರ್ ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು?
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗುತ್ತಿರುವ ಈ ಕೌಟುಂಬಿಕ ಕಥೆಯು ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದ್ದು, ಇದೀಗ ಕಥೆಯ ಹಾದಿಯೇ ಬದಲಾಗುವ ಮುನ್ಸೂಚನೆ ಸಿಕ್ಕಿದೆ. ಈ ಸಂಚಲನಕ್ಕೆ ಪ್ರಮುಖ ಕಾರಣವಾಗಿರುವುದು ನಂದಕುಮಾರ್ ಅವರ ಮುದ್ದಿನ ಹಿರಿ ಸೊಸೆ ಪ್ರಿಯಾಳ ಆಗಮನ.

ತಾನು ತೋರಿಸಿದ ಹುಡುಗಿಯನ್ನೇ ತನ್ನ ಮೂರೂ ಮಕ್ಕಳು ಮದುವೆಯಾಗಬೇಕೆಂಬುದು ತಂದೆ ನಂದಕುಮಾರ್ ಅವರ ಅಚಲ ನಿರ್ಧಾರವಾಗಿತ್ತು. ಆದರೆ, ಕೇಶವ-ಮೀನಾ ಪ್ರೇಮ ವಿವಾಹವಾದರೆ, ಅತ್ತ ನಂದನಿಗೆ ತಿಳಿಯದಂತೆ ವಲ್ಲಭ ಕೂಡ ಅಮೂಲ್ಯಳನ್ನು ಮದುವೆಯಾಗಿದ್ದಾನೆ. ಈ ಎಲ್ಲ ಗೊಂದಲಗಳ ನಡುವೆ, ತಂದೆಯ ಮಾತಿಗೆ ಬೆಲೆ ನೀಡಿ ಆತ ತೋರಿಸಿದ ಹುಡುಗಿಯನ್ನೇ ಮದುವೆಯಾಗಿ ನಂದನ ಕನಸನ್ನು ನನಸು ಮಾಡಿದವನು ಮಗ ಮಾಧವ. ಹೀಗಾಗಿಯೇ ನಂದಕುಮಾರ್‌ಗೆ ಮಾಧವ ಮತ್ತು ಆತನ ಪತ್ನಿ ಪ್ರಿಯಾ ಮೇಲೆ ಅತೀವವಾದ ಪ್ರೀತಿ ಮತ್ತು ಹೆಮ್ಮೆ.

ಸದ್ಯದ ಕಥೆಯಲ್ಲಿ, ಪ್ರಿಯಾ ಕೇವಲ ಸೊಸೆಯಾಗಿ ಮಾತ್ರವಲ್ಲದೆ ನಂದಕುಮಾರನ ಅತ್ಯಂತ ನೆಚ್ಚಿನ ಸೊಸೆಯಾಗಿ ಮನೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಪ್ರಿಯಾ ಏನನ್ನು ಹೇಳಿದರೂ ಅದು ಸರಿಯಾಗಿಯೇ ಇರುತ್ತದೆ ಎಂಬ ಕುರುಡು ನಂಬಿಕೆ ನಂದನದ್ದು. ಆದರೆ ಮಾವನ ಈ ಅತಿಯಾದ ಪ್ರೀತಿಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಪ್ರಿಯಾ, ಪ್ರತಿಯೊಂದು ವಿಚಾರದಲ್ಲೂ ತನ್ನದೇ ಮೇಲುಗೈ ಇರಬೇಕೆಂದು ನಂದಕುಮಾರ್ ಮೇಲೆ ಇಂಪ್ರೆಷನ್ ಮಾಡಲು ಶುರು ಮಾಡಿದ್ದಾಳೆ.

ಇದರಿಂದಾಗಿ ನಂದಗೋಕುಲದ ಮನೆಯ ಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತಿದೆ. ಅತ್ತೆ ಗಿರಿಜಾ, ಮೀನಾ ಮತ್ತು ಅಮೂಲ್ಯ ಒಂದು ಕಡೆಯಾದರೆ, ತನ್ನ ಚಾಣಾಕ್ಷ ನಡೆಯಿಂದ ಪ್ರಿಯಾ ಮತ್ತೊಂದು ಕಡೆ ನಿಂತಿದ್ದಾಳೆ. ಮೇಲ್ನೋಟಕ್ಕೆ ಸಮರದಂತೆ ಕಾಣದಿದ್ದರೂ, ಒಳಗೊಳಗೆ ವಾರಗಿತ್ತಿಯರ ನಡುವೆ ಕಿಡಿ ಹೊತ್ತಿಕೊಂಡಿದೆ. ಆ ಜಟಾಪಟಿಯಲ್ಲಿ ಕೆಲವೊಮ್ಮೆ ಮೀನಾ ಗೆದ್ದರೆ, ಮಗದೊಮ್ಮೆ ಪ್ರಿಯಾ ತನ್ನ ಪಟ್ಟು ಸಡಿಲಿಸದೆ ಗೆಲುವಿನ ನಗು ಬೀರುತ್ತಿದ್ದಾಳೆ.

ಈ ಎಲ್ಲ ಬೆಳವಣಿಗೆಗಳಿಂದ ನಂದಕುಮಾರನ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಲು ಶುರುವಾಗಿವೆ. ಇದು ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ. ಈ ಎಲ್ಲ ಗದ್ದಲಗಳ ನಡುವೆ ಪ್ರಿಯಾಳ ಈ ವರ್ತನೆ ನಿಜಕ್ಕೂ ಕುಟುಂಬದ ಹಿತಕ್ಕಾಗಿಯೋ ಅಥವಾ ಆಕೆಯ ಅಸಲಿ ಮುಖವಾಡವೇ ಬೇರೆಯಿದೆಯೋ ಎಂಬ ಪ್ರಶ್ನೆ ಮೂಡಿದೆ. ನಂದಕುಮಾರ್ ಅವರ ಕಣ್ಣಿಗೆ ಮಣ್ಣೆರಚಿ ಆಕೆ ಮನೆ ಮುರಿಯುವ ಕೆಲಸಕ್ಕೆ ಕೈ ಹಾಕಿದ್ದಾಳಾ ಎಂಬ ಆತಂಕವೂ ಮನೆ ಮಾಡಿದೆ.

ಇದರ ಜೊತೆಗೆ ಕಥೆಯಲ್ಲಿ ಮತ್ತೊಂದು ಭಾವನಾತ್ಮಕ ಎಳೆ ಕೂಡ ತೆರೆದುಕೊಳ್ಳುತ್ತಿದೆ. ಮದುವೆಯಾದ ಮೇಲೆ ಅಮೂಲ್ಯ ಈವರೆಗೂ ತನ್ನ ತವರಿಗೆ ಹೋಗಿಲ್ಲ. ಪತ್ನಿಯನ್ನು ಒಮ್ಮೆಯಾದರೂ ಅವಳ ತವರು ಮನೆಗೆ ಕಳಿಸಬೇಕು ಎನ್ನುವ ವಲ್ಲಭನ ಆಸೆ ಇನ್ನು ಈಡೇರಿಲ್ಲ. ಈ ನಡುವೆ ಹೋಳಿ ಹಬ್ಬದ ಸಂಭ್ರಮವನ್ನು ಬಳಸಿಕೊಂಡು ಅಮೂಲ್ಯಳನ್ನು ತವರಿಗೆ ಕಳಿಸಲು ವಲ್ಲಭ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ.

ಅಮೂಲ್ಯಳ ತವರಿನ ಆಸೆ ಈಡೇರುತ್ತಾ? ವಲ್ಲಭ ಹಾಕಿದ ಆ ಉಪಾಯವಾದರೂ ಏನು? ಹಿರಿ ಸೊಸೆ ಪ್ರಿಯಾಳ ಅಸಲಿ ಮುಖ ನಂದಕುಮಾರ್ ಮುಂದೆ ಬಯಲಾಗುತ್ತಾ? ಎಂಬ ಕುತೂಹಲಕಾರಿ ಸಂಚಿಕೆಗಳು ಮುಂಬರುವ ದಿನಗಳಲ್ಲಿ ತೆರೆದುಕೊಳ್ಳಲಿವೆ.

ನಂದಗೋಕುಲದ ಒಗ್ಗಟ್ಟು ಉಳಿಯುತ್ತದೆಯೇ ಅಥವಾ ಸೊಸೆಯಂದಿರ ಶೀತಲ ಸಮರ ಕುಟುಂಬವನ್ನು ಹಾದಿ ತಪ್ಪಿಸುತ್ತದೆಯೇ ಎಂಬ ಉತ್ತರ ತಿಳಿಯಲು ತಪ್ಪದೇ ವೀಕ್ಷಿಸಿ ‘ನಂದಗೋಕುಲ’, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ, ನಿಮ್ಮ ನೆಚ್ಚಿನ ಕಲರ್ಸ್ ಕನ್ನಡದಲ್ಲಿ.

The post ʻನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ನಂದಕುಮಾರ್ ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು? appeared first on Samyukta Karnataka.