Bigg Boss Kannada funny moments Archives - Samyukta Karnataka

ಬಿಗ್ ಬಾಸ್ ಮನೆಯಲ್ಲಿ ಗಾನವಿ ‘ಕೋಮಾ ಡ್ರಾಮಾ’: ಶೆಟ್ಟಿ ವ್ಯಂಗ್ಯ ವೈದ್ಯರ ಮುಂದೆಯೇ ಮಜವಾದ ನಾಟಕ!
BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಹೈಡ್ರಾಮಾ ಹಾಗೂ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯಲ್ಲಿ ಇತ್ತೀಚೆಗೆ ನಡೆದ ಟಾಸ್ಕ್ ಒಂದರ ವೇಳೆ ಸ್ಪರ್ಧಿ ಗಾನವಿ ಅವರ ವಿಚಿತ್ರ ವರ್ತನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಟದ ನಡುವೆ ಸಣ್ಣದಾಗಿ ಪೆಟ್ಟು ತಿಂದವರಂತೆ ನಟಿಸಿದ ಗಾನವಿ, ಏಕಾಏಕಿ ಪ್ರಜ್ಞೆ ತಪ್ಪಿ ಕೋಮಾಕ್ಕೆ ಹೋದವರಂತೆ ವರ್ತಿಸಿ ಎಲ್ಲರಲ್ಲೂ ಆತಂಕ ಮೂಡಿಸಿದರು. ಸ್ವಲ್ಪ ಸಮಯದ ಬಳಿಕ ಎಚ್ಚೆತ್ತವರಂತೆ ನಟಿಸಿ, “ನಾನೆಲ್ಲಿದ್ದೇನೆ? ನನಗೆ ಏನಾಯ್ತು?” ಎಂದು ಪ್ರಶ್ನಿಸುವ ಮೂಲಕ ಕಣ್ಣೀರು ಹಾಕಿದರು. ಆದರೆ ಗಾನವಿ ಅವರ ಈ ವರ್ತನೆ ಕೇವಲ ವೀಕ್ಷಕರಿಗೆ ಮಾತ್ರವಲ್ಲದೆ ಮನೆಯವರಿಗೂ ಕೇವಲ ಒಂದು ಡ್ರಾಮಾ ಎಂಬಂತೆ ಗೋಚರಿಸಿತು.

ಈ ಘಟನೆಯನ್ನು ಬಳಸಿಕೊಂಡ ಸ್ಪರ್ಧಿ ಸೌಂದರ್ಯಾ ಶೆಟ್ಟಿ, ಗಾನವಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಟಾಸ್ಕ್‌ನಲ್ಲಿ ಸೋಲುವ ಭಯ ಎದುರಾದಾಗ ಮತ್ತು ಆಡಲು ಸಾಧ್ಯವಾಗದ ಸಂದರ್ಭದಲ್ಲಿ ಗಾನವಿ ಈ ರೀತಿಯ ನಾಟಕ ಆಡುತ್ತಾರೆ ಎಂದು ಸೌಂದರ್ಯಾ ನೇರವಾಗಿ ಆರೋಪಿಸಿ, “ನೀವು ಕೋಮಾದಲ್ಲಿದ್ರಿ” ಎಂದು ವ್ಯಂಗ್ಯವಾಡುವ ಮೂಲಕ ಅವರ ನಾಟಕವನ್ನು ಬಯಲಿಗೆಳೆದರು.

ಇದೇ ಟಾಸ್ಕ್ ವೇಳೆ ಮತ್ತೊಂದು ಮಜೆಯ ಘಟನೆಯೂ ನಡೆಯಿತು. ಆಟ ಆಡುವಾಗ ಗಾನವಿಯ ಹಲ್ಲು ಸೌಂದರ್ಯಾ ಅವರ ಮುಖಕ್ಕೆ ತಕ್ಕಮಟ್ಟಿಗೆ ತಗುಲಿದೆ. ಇದರಿಂದ ಗಾಬರಿಗೊಂಡ ಸೌಂದರ್ಯಾ, ಗಾನವಿಯನ್ನು ಮನೆಯಲ್ಲಿ ಎಲ್ಲರೂ ‘ಹಾವು’ ಎಂದು ಕರೆಯುವುದನ್ನು ನೆನಪಿಸಿಕೊಂಡು, ತಮಗೆ ಹಾವು ಕಡಿದಿದೆ ಎಂದು ನೇರವಾಗಿ ವೈದ್ಯರ ಬಳಿಯೇ ಅಳಲು ತೋಡಿಕೊಂಡರು. ಗಂಭೀರ ಪರಿಸ್ಥಿತಿ ಎಂದು ಧಾವಿಸಿ ಬಂದ ವೈದ್ಯರಿಗೆ ಇದು ಸ್ಪರ್ಧಿಗಳ ಚೇಷ್ಟೆ ಎಂಬುದು ತಿಳಿದು ಅಚ್ಚರಿಯಾಯ್ತು. ಒಟ್ಟಿನಲ್ಲಿ ಈ ಎಲ್ಲಾ ಸಣ್ಣಪುಟ್ಟ ಘಟನೆಗಳನ್ನು ತಮ್ಮ ಆಟಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿರುವ ಸೌಂದರ್ಯಾ ಶೆಟ್ಟಿ, ದೊಡ್ಮನೆಯಲ್ಲಿ ಸಖತ್ ಮೈಲೇಜ್ ಪಡೆದುಕೊಳ್ಳುತ್ತಿದ್ದಾರೆ.

The post ಬಿಗ್ ಬಾಸ್ ಮನೆಯಲ್ಲಿ ಗಾನವಿ ‘ಕೋಮಾ ಡ್ರಾಮಾ’: ಶೆಟ್ಟಿ ವ್ಯಂಗ್ಯ ವೈದ್ಯರ ಮುಂದೆಯೇ ಮಜವಾದ ನಾಟಕ! appeared first on Samyukta Karnataka.