#BasanagoudaPatilYatnal Archives - Samyukta Karnataka

ಅಭಿಮಾನೋತ್ಸವವೇ ‘ರಿನಿವಲ್’ ತಂತ್ರ: ಈ ಉತ್ಸವ ಯಾವ ಪುರುಷಾರ್ಥಕ್ಕೆ ?
ಹೈಕಮಾಂಡ್ ವಿರುದ್ಧ ಯತ್ನಾಳ್‌ ಅಸಮಾಧಾನ: ಯತ್ನಾಳ್‌

ಕೊಪ್ಪಳ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಮತ್ತೊಮ್ಮೆ ಬಿಜೆಪಿ ಪಕ್ಷದ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, “ಈ ತಂದೆ-ಮಕ್ಕಳು ಇರುವವರೆಗೂ ನಾನು ಬಿಜೆಪಿ ಕಚೇರಿ ಮೆಟ್ಟಿಲು ಹತ್ತಲ್ಲ” ಎಂದು ಕಿಡಿಕಾರಿದರು.

ಕರ್ನಾಟಕ ಬಿಜೆಪಿಯ ಪ್ರಸ್ತುತ ಸ್ಥಿತಿಯನ್ನು ವ್ಯಂಗ್ಯವಾಗಿ ಟೀಕಿಸಿದ ಯತ್ನಾಳ್ :  “ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಸಾಧನೆ ಮಾಡಿದ್ದಾರೆ?  ಎಂದು ಪ್ರಶ್ನಿಸಿದರು.

ಪಕ್ಷದ ನಿರಂತರ ಸೋಲು: ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ನಿರಂತರ ಸೋಲು ಕಾಣುತ್ತಿದೆ ಎಂದು ಆರೋಪಿಸಿದ ಅವರು, “ಒಂದು ಕಾಲದಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸಂಸದರನ್ನು ಗೆಲ್ಲಿಸಿತ್ತು. ಈಗ ಅದು 17ಕ್ಕೆ ಇಳಿದಿದೆ. ಇದು ಅವರ ‘ಡೀಲಿಂಗ್’ ರಾಜಕಾರಣದ ಪರಿಣಾಮ,” ಎಂದು ದೂರಿದರು.

“ಅಭಿಮಾನೋತ್ಸವದ ಹಿಂದೆ ಹೈಕಮಾಂಡ್‌ಗೆ ಸಂದೇಶ” : ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮವನ್ನೂ ಯತ್ನಾಳ್ ಟೀಕಿಸಿದರು. “ಯಾವ ಪುರುಷಾರ್ಥಕ್ಕೆ ಈ ಉತ್ಸವ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಬಂದವರಿಗಾ ಈ ಸಂಭ್ರಮ?” ಎಂದು ಪ್ರಶ್ನಿಸಿದರು.

“ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು, ತಾವು ದೊಡ್ಡ ಲಿಂಗಾಯತ ನಾಯಕರು ಎಂದು ಹೈಕಮಾಂಡ್‌ಗೆ ತೋರಿಸಲು ಈ ಅಭಿಮಾನೋತ್ಸವ ನಾಟಕ ನಡೆಯುತ್ತಿದೆ,” ಎಂದು ಆರೋಪಿಸಿದರು.

“ಕುಟುಂಬ ರಾಜಕಾರಣ ಹೆಚ್ಚಾಗಿದೆ” : ಯಡಿಯೂರಪ್ಪ ಕುಟುಂಬದ ರಾಜಕೀಯ ವಿಸ್ತರಣೆಯ ಬಗ್ಗೆಯೂ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು. “ಈಗ ಕುಟುಂಬದ ಇನ್ನೂ ಮೂವರು ರಾಜಕೀಯಕ್ಕೆ ಬರುತ್ತಿದ್ದಾರೆ. ಬಿ.ವೈ. ರಾಘವೇಂದ್ರ ಅವರ ಪುತ್ರ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಮಹಿಳಾ ಘಟಕದಲ್ಲೂ ಕುಟುಂಬದವರೇ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು?” ಎಂದು ಪ್ರಶ್ನಿಸಿದರು.

“ಹಿಂದುತ್ವ ನಾಯಕತ್ವ ಬಂದರೆ ಮಾತ್ರ ಸಕ್ರಿಯ” : “ಹಿಂದುತ್ವದ ವಿಚಾರಧಾರೆ ಮತ್ತು ಅಭಿವೃದ್ಧಿ ರಾಜಕಾರಣ ಮಾಡುವ ನಾಯಕತ್ವ ಬಂದರೆ ಮಾತ್ರ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ಈ ಭ್ರಷ್ಟ ತಂದೆ-ಮಕ್ಕಳ ಜೊತೆ ಗುರುತಿಸಿಕೊಳ್ಳುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ವಿರುದ್ಧವೂ ಟೀಕೆ : ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದರು. “ಡಿ.ಕೆ. ಶಿವಕುಮಾರ್ ಅವರಂತಹ ಅಯೋಗ್ಯ ಮತ್ತು ರಾಕ್ಷಸ ರಾಜಕಾರಣಿ ಇನ್ನೊಬ್ಬರಿಲ್ಲ. ಅವರಿಗಿಂತ ಸಿದ್ದರಾಮಯ್ಯ ಉತ್ತಮ,” ಎಂದು ಹೇಳಿದರು.

ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ : ಕರ್ನಾಟಕದ ಜನರ ಭಾವನೆಗಳನ್ನು ಬಿಜೆಪಿ ಹೈಕಮಾಂಡ್ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಯತ್ನಾಳ್, “ಯಡಿಯೂರಪ್ಪ-ವಿಜಯೇಂದ್ರ ನಾಯಕತ್ವ ಮುಂದುವರಿದರೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಮಣ್ಣು ಮುಕ್ಕುತ್ತದೆ. ಹೊಸ ನಾಯಕತ್ವಕ್ಕೆ ಅವಕಾಶ ನೀಡಿದರೆ ಮಾತ್ರ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ,” ಎಂದು ಎಚ್ಚರಿಸಿದರು.

ಬಿಜೆಪಿಯೊಳಗಿನ ಆಂತರಿಕ ಅಸಮಾಧಾನ ಮತ್ತೆ ಬಹಿರಂಗವಾಗಿರುವ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

The post ಅಭಿಮಾನೋತ್ಸವವೇ ‘ರಿನಿವಲ್’ ತಂತ್ರ: ಈ ಉತ್ಸವ ಯಾವ ಪುರುಷಾರ್ಥಕ್ಕೆ ? appeared first on Samyukta Karnataka.

ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಹಾಕುವೆ
ಶಿವಮೊಗ್ಗ: ಪದೇ ಪದೆ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಪಮುಖ್ಯಮಂತ್ರಿ ಆಗಲು ಯೋಜನೆ ನಡೆದಿದ್ದು, ಡಿಕೆಶಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಗೆ ಕರೆದೊಯ್ದು ವಿಜಯೇಂದ್ರ ಚರ್ಚೆ ನಡೆಸಿದ್ದಾರೆ ಎಂಬ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ಯತ್ನಾಳ್ ನನ್ನ ಬಗ್ಗೆ ಮಾತನಾಡದಿದ್ದರೆ ಅವರಿಗೆ ಊಟ ಸೇರುವುದಿಲ್ಲ. ನನ್ನ ತಾಳ್ಮೆಗೂ ಮಿತಿ ಇದೆ, ಆದ್ದರಿಂದ ಇಂತಹ ಸುಳ್ಳು ಆರೋಪದ ವಿರುದ್ಧ ರೂ. 1 ಇಲ್ಲವೆ ರೂ. 1 ಕೋಟಿ ಪರಿಹಾರ ಕೋರಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಯೋಚನೆ ಮಾಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ಕೈʼಯಲ್ಲಿ ಅಚ್ಚರಿಯ ಬೆಳವಣಿಗೆ: ಡಿಕೆಶಿಗೆ ಇಕ್ಬಾಲ್ ಜ. 6 ಮುಹೂರ್ತ!

ಅಧಿವೇಶನ ಮುಂದೂಡಿ: ರಾಜ್ಯದ ಹಿತದೃಷ್ಟಿಯಿಂದ ಸಮಗ್ರವಾಗಿ ಚರ್ಚಿಸಲು ಅಧಿವೇಶನ ಕರೆಯಿರಿ, ನಾಯಕತ್ವಕ್ಕಾಗಿ ಪೈಪೋಟಿ ಮಾಡುತ್ತಿರುವುದರಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ. ನಾಯಕತ್ವ ಸಮಸ್ಯೆ ಬಗೆಹರಿಯುವ ತನಕ ಅಧಿವೇಶನ ಮುಂದೂಡಬೇಕೆಂದು ಮುಖ್ಯಮಂತ್ರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

ಯತೀಂದ್ರ ಕಾಂಗ್ರೆಸ್ ಹೈಕಮಾಂಡ್: ಮುಖ್ಯಮಂತ್ರಿ ಕುರ್ಚಿ ಗದ್ದಲದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯವನ್ನು ಸಂಪೂರ್ಣ ಮರೆತಿದೆಯಲ್ಲದೆ, ರೈತರ ಹಿತ ಕಡೆಗೆಣಿಸಿದೆ. ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನಂತೆ ಯತೀಂದ್ರ ಹೇಳಿಕೆ ನೀಡುತ್ತಿದ್ದಾರೆ. ಸ್ವತಃ ಕಾಂಗ್ರೆಸ್ ಶಾಸಕರೇ ಖಾಸಗಿಯಾಗಿ ಮಾತನಾಡುವಾಗ `ಯತೀಂದ್ರ ಅವರನ್ನು ಪಕ್ಷದ ಹೈಕಮಾಂಡ್’ ಎಂದು ವ್ಯಂಗವಾಡುತ್ತಾರೆ ಎಂದರು.

The post ಯತ್ನಾಳ್ ವಿರುದ್ಧ ಮಾನನಷ್ಟ ಕೇಸ್ ಹಾಕುವೆ appeared first on Samyukta Karnataka.

ನನ್ನ ಷರತ್ತು ಒಪ್ಪಿದರೆ ಮಾತ್ರ ಬಿಜೆಪಿಗೆ ಹೋಗುವೆ: ಯತ್ನಾಳ್
ಬೆಳಗಾವಿ: ಸುಮ್ಮನೇ ಶಾಸಕನಾಗಿ ಮತ್ತೇ ಬಿಜೆಪಿಗೆ ವಾಪಸ್​ ಬರಲ್ಲ. ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ನೀಡಿದರೆ ಮಾತ್ರ ಬರುತ್ತೇನೆ ಎಂದು ಹೇಳಿರುವುದಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿಂದು ಮಾತನಾಡಿರುವ ಅವರು, ಘರ್ ವಾಪಸ್ಸಿ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಸುವರ್ಣಸೌಧದಲ್ಲಿನ ವಿಪಕ್ಷ ನಾಯಕರ ಕಚೇರಿಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದು, ವಾಪಸ್ ಪಕ್ಷಕ್ಕೆ ಕರೆತರುವ ಬಗ್ಗೆ ಚರ್ಚಿಸಿದ್ದಾರೆ ಎಂದು ಸ್ವತಃ ಯತ್ನಾಳ್ ಅವರೇ ಹೇಳಿದ್ದಾರೆ.

ನಮ್ಮ ಹೋರಾಟಕ್ಕೆ ಜನ ಸೇರುತ್ತಿಲ್ಲ. ಯತ್ನಾಳ್‌ ಹೋದಲೆಲ್ಲಾ ಸಾವಿರಾರು ಜನರು ಸೇರುತ್ತಾರೆ. ಜನಪ್ರಿಯತೆ ಹೆಚ್ಚಾಗಿರುವುದರಿಂದ ಮತ್ತೆ ಬಿಜೆಪಿಗೆ ವಾಪಸ್‌ ಕರೆತರೋಣ ಎಂದಿದ್ದಾರೆ ಎಂದು ಬಿಜೆಪಿ ನಾಯಕ ಅಭಿಪ್ರಾಯವನ್ನು ಬಿಚ್ಚಿಟ್ಟರು.

‌ಇದನ್ನೂ ಓದಿ: ಡಿಕೆಶಿ‌ ಬಿಜೆಪಿಗೆ ಕರೆತರುವ ಪ್ರಯತ್ನ ನಡೆದಿತ್ತು: ಯತ್ನಾಳ ಹೊಸ ಬಾಂಬ್

ಸುಮ್ಮನೇ ಶಾಸಕನಾಗಿ ಮತ್ತೇ ಬಿಜೆಪಿಗೆ ವಾಪಸ್​ ಬರಲ್ಲ. ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ನೀಡಿಬೇಕು. ಇದಕ್ಕೆ ಅಮಿತ್‌ ಶಾ ಒಪ್ಪಿಕೊಂಡರೆ ಮಾತ್ರ ಬಿಜೆಪಿಗೆ ಹೋಗುತ್ತೇನೆ. ಇಲ್ಲವಾದಲ್ಲಿ ನಾವೇ ಜೆಸಿಬಿ ಪಕ್ಷವನ್ನು ಕಟ್ಟುತ್ತೇವೆ ಎಂದು ಯತ್ನಾಳ್‌ ತಿಳಿಸಿದರು.

The post ನನ್ನ ಷರತ್ತು ಒಪ್ಪಿದರೆ ಮಾತ್ರ ಬಿಜೆಪಿಗೆ ಹೋಗುವೆ: ಯತ್ನಾಳ್ appeared first on Samyukta Karnataka.

ಟಿಪ್ಪು ಹೆಸರಲ್ಲಿ ಬೆಂಕಿ: ‘ಭಯೋತ್ಪಾದಕ’ ಎಂದವನಿಗೆ ಯತ್ನಾಳ್ ಕೊಟ್ಟ ತಿರುಗೇಟೇನು?
ಕರ್ನಾಟಕದ ರಾಜಕೀಯದಲ್ಲಿ ಟಿಪ್ಪು ಸುಲ್ತಾನ್ ಹೆಸರು ಕೇಳಿಬಂದಾಗಲೆಲ್ಲಾ ವಿವಾದದ ಕಿಡಿ ಹೊತ್ತಿಕೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ ರಾಮನಗರದಲ್ಲಿ ಎಸ್‌ಡಿಪಿಐ (SDPI) ಮುಖಂಡರೊಬ್ಬರು ಆಡಿದ ಮಾತುಗಳು ವಿವಾದದ ಸ್ವರೂಪವನ್ನು ಮತ್ತಷ್ಟು ತೀವ್ರಗೊಳಿಸಿವೆ.

ಕನ್ನಡ ರಾಜ್ಯೋತ್ಸವದ ವೇದಿಕೆಯಲ್ಲಿ ನಿಂತು ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಸ್‌ಡಿಪಿಐ ನಾಯಕ ಮೌಲಾನಾ ನೂರುದ್ದೀನ್ ಅವಾಚ್ಯ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದು, ಇದಕ್ಕೆ ಯತ್ನಾಳ್ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ವಿವಾದದ ಕಿಡಿಯಾದ ಮೌಲಾನಾ ಹೇಳಿಕೆ: ರಾಮನಗರದ ರೈಲ್ವೆ ಸ್ಟೇಷನ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ನೂರುದ್ದೀನ್, ಶಾಸಕ ಯತ್ನಾಳ್ ಅವರನ್ನು ನೇರವಾಗಿ “ಭಯೋತ್ಪಾದಕ” ಎಂದು ಕರೆದಿದ್ದಾರೆ.

ಅಷ್ಟಕ್ಕೇ ನಿಲ್ಲದೆ, ಟಿಪ್ಪು ಸುಲ್ತಾನ್ ಪರಾಕ್ರಮವನ್ನು ಹೊಗಳುವ ಭರಾಟೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. “ಒಂದು ವೇಳೆ ಟಿಪ್ಪು ಸುಲ್ತಾನ್ ಇಲ್ಲದಿದ್ದರೆ, ಪ್ರತಾಪ್ ಸಿಂಹ ಬ್ರಿಟಿಷರ ನಾಯಿಗಳನ್ನು ತೊಳೆಯುವ ಕೆಲಸ ಮಾಡಬೇಕಿತ್ತು,” ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಯತ್ನಾಳ್ ಕೊಟ್ಟ ಖಡಕ್ ಕೌಂಟರ್: ಮೌಲಾನಾ ಹೇಳಿಕೆ ಕಿವಿಗೆ ಬೀಳುತ್ತಿದ್ದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿದೆದ್ದಿದ್ದಾರೆ. “ಯಾರ್ಯಾರೋ ಬಂದು ಬಾಯಿಗೆ ಬಂದಂತೆ ಮಾತನಾಡಿದರೆ ಕೇಳಿಸಿಕೊಳ್ಳಲು ನಾವೇನು ಬಳೆ ತೊಟ್ಟು ಕುಳಿತಿಲ್ಲ. ಟಿಪ್ಪು ಸುಲ್ತಾನನನ್ನು ಆರಾಧಿಸುವವರು ಮತ್ತು ಆತನ ಪರ ಇರುವವರು ದೇಶದ್ರೋಹಿಗಳು,” ಎಂದು ನೇರವಾಗಿಯೇ ಗುಡುಗಿದ್ದಾರೆ.

ಟಿಪ್ಪುವಿನ ಇತಿಹಾಸವನ್ನು ಕೆದಕಿದ ಯತ್ನಾಳ್, ಟಿಪ್ಪು ಒಬ್ಬ ಮತಾಂಧ. ಆತನ ಕಾಲದಲ್ಲಿ ಲಕ್ಷಾಂತರ ಹಿಂದೂಗಳ ಕಗ್ಗೊಲೆ ನಡೆದಿದೆ. ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ಸುಮಾರು 3,500ಕ್ಕೂ ಹೆಚ್ಚು ದೇವಸ್ಥಾನಗಳನ್ನು ಆತ ಧ್ವಂಸ ಮಾಡಿದ್ದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ.

ಕೊಡಗಿನಲ್ಲಿ ಲಕ್ಷಾಂತರ ಕೊಡವರ ನರಮೇಧ ನಡೆಸಿದ ಕ್ರೂರಿ ಆತ. ಇಸ್ಲಾಮೀಕರಣ ಮಾಡುವುದೇ ಆತನ ಗುರಿಯಾಗಿತ್ತು. ಇಂತಹ ಹಿನ್ನೆಲೆ ಇರುವ ವ್ಯಕ್ತಿ ನಮಗೆಂದೂ ಆದರ್ಶವಾಗಲು ಸಾಧ್ಯವಿಲ್ಲ. ಆತನಿಂದ ನಾವು ಕಲಿಯಬೇಕಾದದ್ದು ಏನೂ ಇಲ್ಲ, ಎಂದು ಇತಿಹಾಸದ ಪುಟಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದರು.

ದೆಹಲಿ ಸ್ಫೋಟ ಮತ್ತು ಅಂಬೇಡ್ಕರ್ ಉಲ್ಲೇಖ: ಇದೇ ಸಂದರ್ಭದಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ವಿಚಾರವನ್ನು ಪ್ರಸ್ತಾಪಿಸಿದ ಯತ್ನಾಳ್, ಅಲ್ಪಸಂಖ್ಯಾತ ನಾಯಕರ ಮೌನವನ್ನು ಪ್ರಶ್ನಿಸಿದ್ದಾರೆ. “ದೆಹಲಿಯಲ್ಲಿ ಸ್ಫೋಟ ನಡೆದಾಗ ಯಾವೊಬ್ಬ ಮುಸ್ಲಿಂ ಧರ್ಮಗುರುವಾಗಲಿ, ಮುಖಂಡರಾಗಲಿ ಅದನ್ನು ಖಂಡಿಸುವುದಿಲ್ಲ.

ಆದರೆ ಇಲ್ಲಿ ಮಾತ್ರ ಶಾಂತಿ ಸಭೆಗಳ ಹೆಸರಿನಲ್ಲಿ ‘ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂಬ ನಾಟಕವಾಡುತ್ತಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅಂದೇ ಹೇಳಿದ್ದರು, ‘ಮುಸ್ಲಿಮರ ನಿಷ್ಠೆ ಎಂದಿಗೂ ದೇಶಕ್ಕಲ್ಲ, ಬದಲಾಗಿ ಅವರ ಧರ್ಮಕ್ಕೆ ಮಾತ್ರ ಸೀಮಿತವಾಗಿರುತ್ತದೆ’ ಎಂದು. ಇಂದಿನ ಘಟನೆಗಳು ಅದನ್ನೇ ಸಾಬೀತುಪಡಿಸುತ್ತಿವೆ,” ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.

The post ಟಿಪ್ಪು ಹೆಸರಲ್ಲಿ ಬೆಂಕಿ: ‘ಭಯೋತ್ಪಾದಕ’ ಎಂದವನಿಗೆ ಯತ್ನಾಳ್ ಕೊಟ್ಟ ತಿರುಗೇಟೇನು? appeared first on Samyukta Karnataka.

ನಮಾಜ್‌ಗೆ ನಿಷೇಧ: ಸಿಎಂಗೆ ಯತ್ನಾಳ್ ಪತ್ರ; ಶುರುವಾಗಿದೆ ಹೊಸ ಚರ್ಚೆ!
ರಾಜ್ಯದಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಲು ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಗಳು, ಸರ್ಕಾರಿ ಆವರಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜ್‌ಗಳನ್ನು ನಿಷೇಧಿಸುವಂತೆ ಯತ್ನಾಳ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ, ಸರ್ಕಾರಿ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯ ಅನುಮತಿ ಪಡೆಯಬೇಕು ಎಂದು ರಾಜ್ಯ ಸರ್ಕಾರ ಹೇಳಿತ್ತು. ಈ ಸಂಬಂಧ “ರೆಗ್ಯುಲೇಷನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಆ್ಯಂಡ್ ಪ್ರಾಪರ್ಟೀಸ್ ಬಿಲ್ 2025″ರ ಕರಡು ಸಿದ್ಧವಾಗುತ್ತಿದೆ ಎಂಬ ವರದಿಗಳೂ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಯತ್ನಾಳ್ ಈ ಪತ್ರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಯತ್ನಾಳ್ ಪತ್ರದ ಪ್ರಮುಖ ಅಂಶಗಳು

ಸಂಚಾರಕ್ಕೆ ಅಡಚಣೆ: ಅನುಮತಿಯಿಲ್ಲದೆ ರಸ್ತೆಗಳು ಮತ್ತು ಸರ್ಕಾರಿ ಆವರಣಗಳಲ್ಲಿ ನಮಾಜ್ ಮಾಡುವುದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅಡಚಣೆಯಾಗುತ್ತದೆ.

ಮೂಲಭೂತ ಹಕ್ಕುಗಳ ಉಲ್ಲಂಘನೆ: ಈ ಚಟುವಟಿಕೆಗಳು ಸಂವಿಧಾನದ ಕಲಂ 19 ಮತ್ತು 21ರ ಅಡಿಯಲ್ಲಿ ಖಾತರಿಯಾದ ಮುಕ್ತ ಸಂಚಾರ ಮತ್ತು ಭದ್ರತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ.

ವಿಶೇಷ ಅನುಮತಿ ಬೇಡ: ಸರ್ಕಾರದ ಕಚೇರಿಗಳು ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್‌ಗೆ ವಿಶೇಷ ಅನುಮತಿ ನೀಡಬಾರದು.

ಆಡಳಿತದ ನಂಬಿಕೆಗೆ ಧಕ್ಕೆ: ಇತರ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ನಿರ್ಬಂಧಿಸಿ ಇಂತಹ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದು ಆಡಳಿತದ ಮೇಲಿನ ನಂಬಿಕೆಗೆ ಧಕ್ಕೆ ತರಬಹುದು.

ಸೂಚನೆ ನೀಡುವಂತೆ ಆಗ್ರಹ: ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅನುಮತಿಯಿಲ್ಲದೆ ರಸ್ತೆಗಳು, ಪಾದಚಾರಿ ಮಾರ್ಗಗಳು ಅಥವಾ ಸರ್ಕಾರಿ ಆವರಣಗಳಲ್ಲಿ ನಮಾಜ್ ಸಲ್ಲಿಸಲು ಅವಕಾಶ ನೀಡದಂತೆ ಆದೇಶಿಸಬೇಕು.

ಎಸ್.ಒ.ಪಿ. ರೂಪಿಸಲು ಕರೆ: ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಸಂಬಂಧಿತ ಸಂಚಾರ ನಿಯಮಾವಳಿಗಳ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಉದ್ದೇಶಗಳಿಗೆ ಅನಧಿಕೃತವಾಗಿ ಬಳಸುವುದನ್ನು ತಡೆಯಲು ಸ್ಪಷ್ಟವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್  ಅನ್ನು ಸರ್ಕಾರ ರೂಪಿಸಬೇಕು.

ಯತ್ನಾಳ್ ಈ ಬೇಡಿಕೆಗಳು ರಾಜ್ಯದಲ್ಲಿ ಧರ್ಮನಿರಪೇಕ್ಷತೆ, ಕಾನೂನಿನ ಸಮಾನತೆ ಮತ್ತು ಸಾರ್ವಜನಿಕ ಶಿಸ್ತಿನ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿವೆ. ಸರ್ಕಾರ ಈ ಬಗ್ಗೆ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

The post ನಮಾಜ್‌ಗೆ ನಿಷೇಧ: ಸಿಎಂಗೆ ಯತ್ನಾಳ್ ಪತ್ರ; ಶುರುವಾಗಿದೆ ಹೊಸ ಚರ್ಚೆ! appeared first on Samyukta Karnataka.

ಕನೇರಿ ಸ್ವಾಮೀಜಿ ಗಡಿಪಾರು: ರಾಜಕೀಯ ಕೆಸರೆರೆಚಾಟ, ಬಂದ್‌ಗೆ ಯತ್ನಾಳ್ ಎಚ್ಚರಿಕೆ
ವಿಜಯಪುರದಿಂದ ಕೆನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗಳ ಗಡಿಪಾರು ಆದೇಶ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಹಿಂದುಗಳನ್ನು ಒಡೆಯುವ ಯತ್ನವನ್ನು ವಿರೋಧಿಸಿದ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಅಕ್ಟೋಬರ್ 16 ರಂದು ವಿಜಯಪುರ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ, ಸ್ವಾಮೀಜಿಗಳು ಜಿಲ್ಲೆಯ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿ, ಡಿಸೆಂಬರ್ 14, 2025 ರವರೆಗೆ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿಬಂಧಿಸಿದ್ದಾರೆ.

ಯತ್ನಾಳ್ ಆಕ್ರೋಶ: ಈ ಆದೇಶವನ್ನು ಖಂಡಿಸಿರುವ ಯತ್ನಾಳ್, ಸಮಾಜದಲ್ಲಿನ ಘಟನೆಗಳನ್ನು ವಿವರಿಸಿದ್ದಕ್ಕಾಗಿ ಸ್ವಾಮೀಜಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದು ರಾಜಕೀಯ ಪ್ರಾಬಲ್ಯ ಸಾಧಿಸಲು ಮತ್ತು ವೋಟ್ ಬ್ಯಾಂಕ್ ರಾಜಕಾರಣವನ್ನು ಧಿಕ್ಕರಿಸಿದ ಕಾರಣಕ್ಕಾಗಿ ನಡೆದಿದೆ.

ಆತ್ಮನಿರ್ಭರ ಸಮಾಜವನ್ನು ಸ್ಥಾಪಿಸಲು ದುಡಿಯುತ್ತಿರುವ ಸ್ವಾಮೀಜಿಗಳ ಮೇಲೆ ಸರ್ಕಾರ ಕ್ರಮ ಜರುಗಿಸಿರುವುದು ಖಂಡನೀಯ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಯತ್ನಾಳ್ ಪ್ರಕಾರ, ಇದು ಪ್ರಜೆಗಳ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನವಾಗಿದೆ.

“ಮೊಹಬ್ಬತ್ ಕಿ ದುಕಾನ್” ಎಂದು ಹೇಳುವವರು ಪೊಲೀಸರನ್ನು ಬಳಸಿಕೊಂಡು ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಇದು ಹೇಯ ಮತ್ತು ಖಂಡನೀಯ ಸಂಗತಿ ಹಾಗೂ ಪ್ರಜಾಪ್ರಭುತ್ವದ ಅಣಕ ಎಂದು ಯತ್ನಾಳ್ ಹೇಳಿದ್ದಾರೆ.

ಸರ್ಕಾರಕ್ಕೆ ಗಡುವು: ಸರ್ಕಾರ ಕೂಡಲೇ ಈ ನಿಷೇಧವನ್ನು ವಾಪಸ್ ಪಡೆಯಬೇಕು ಮತ್ತು ಈ ರೀತಿಯ ನಿರಂಕುಶ ಧೋರಣೆಯನ್ನು ಕೈಬಿಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ. ಒಂದು ವೇಳೆ, ನಿಷೇಧವನ್ನು ವಾಪಸ್ ಪಡೆಯದಿದ್ದರೆ, ವಿಜಯಪುರ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಡಿಸಿ ಆದೇಶದಲ್ಲಿ ಏನಿದೆ?: ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಕಲಂ 163 (1), (2) ಮತ್ತು (3) ಪ್ರಕಾರ, ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕನೇರಿ ಮಠ, ಬೀಳೂರು ಗ್ರಾಮ, ತಾಲ್ಲೂಕು ಜತ್ತ, ಮಹಾರಾಷ್ಟ್ರ ರಾಜ್ಯ ಇವರನ್ನು ಅಕ್ಟೋಬರ್ 16, 2025 ರಿಂದ ಡಿಸೆಂಬರ್ 14, 2025 ರವರೆಗೆ ವಿಜಯಪುರ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿಬಂಧಿಸಿ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗುವ ಸಾಧ್ಯತೆಯನ್ನು ಈ ಆದೇಶದಲ್ಲಿ ಪ್ರಮುಖ ಕಾರಣವಾಗಿ ಉಲ್ಲೇಖಿಸಲಾಗಿದೆ.ಗಡಿಪಾರು ಆದೇಶದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಜೋಳದ ರೊಟ್ಟಿ” ಎಂಬ ಎಕ್ಸ್ ಖಾತೆ ಈ ಆದೇಶವನ್ನು ಹಂಚಿಕೊಂಡು, ಹಿಂದುಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬರೆದಿದೆ. ಯತ್ನಾಳ್ ಈ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡುವ ಮೂಲಕ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

The post ಕನೇರಿ ಸ್ವಾಮೀಜಿ ಗಡಿಪಾರು: ರಾಜಕೀಯ ಕೆಸರೆರೆಚಾಟ, ಬಂದ್‌ಗೆ ಯತ್ನಾಳ್ ಎಚ್ಚರಿಕೆ appeared first on Samyukta Karnataka.

ಉತ್ತರ ಕರ್ನಾಟಕ ಪ್ರವಾಹದ ನೆರವಿಗೆ ಕೇಂದ್ರಕ್ಕೆ ಯತ್ನಾಳ್ ಮನವಿ
ವಿಜಯಪುರ: ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಉಂಟಾದ ಪರಿಸ್ಥಿತಿ ಕುರಿತು ಜನಜೀವನ ಅಸ್ತವ್ಯಸ್ತಗೊಂಡಿರುವ ಪರಿಸ್ಥಿತಿಯಲ್ಲಿ, ಸ್ಥಳೀಯ ಆಡಳಿತ ಹಾಗೂ ರಾಜ್ಯ ಸರ್ಕಾರದಿಂದ ತಕ್ಷಣದ ಕ್ರಮ ಕೈಗೊಳ್ಳದಿರುವುದನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ವಿಜಯಪುರ ಶಾಸಕರಾದ ಯತ್ನಾಳ ಅವರು ಪ್ರವಾಹ ಪರಿಸ್ಥಿತಿ ಕುರಿತು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದು, “ಉತ್ತರ ಕರ್ನಾಟಕದ ಜನತೆ ಆಪತ್ತಿನಲ್ಲಿದ್ದಾರೆ, ಪ್ರವಾಹದಿಂದ ಜನರು ಬೀದಿಗೆ ಬಂದಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪರಿಸ್ಥಿತಿಯ ಬಗ್ಗೆ ಸೂಕ್ತ ಕಾಳಜಿ ತೋರಿಸದೆ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ಘೋಷಿಸಬೇಕು” ಎಂದು ಮನವಿ ಮಾಡಿದ್ದಾರೆ.

ಅವರ ಮನವಿಯ ಪ್ರಕಾರ, ಕಳೆದ ಕೆಲವು ದಿನಗಳಿಂದ ಭಾರೀ ಮಳೆಯ ಪರಿಣಾಮವಾಗಿ ಭೀಮಾ ನದಿ ಉಕ್ಕಿ ಹರಿದು, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೂರಾರು ಹಳ್ಳಿಗಳು ಜಲಾವೃತಗೊಂಡಿವೆ. ಒಟ್ಟು 117 ಗ್ರಾಮಗಳು ನೀರಿನಲ್ಲಿ ಮುಳುಗಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅನೇಕರು ತಮ್ಮ ಮನೆಗಳನ್ನೇ ಕಳೆದುಕೊಂಡಿದ್ದು, 547 ಮನೆಗಳು ಸಂಪೂರ್ಣ ಹಾನಿಗೊಳಗಾದವು, ಹಾಗೂ ಸಾವಿರಾರು ಜನರು ತಾತ್ಕಾಲಿಕ ಆಶ್ರಯ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಯತ್ನಾಳ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಯತ್ನಾಳ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡಿದ್ದು “ಉತ್ತರ ಕರ್ನಾಟಕದ ಜನತೆ ದುಃಖದಲ್ಲಿ ಇದ್ದಾರೆ. ರಾಜ್ಯ ಸರ್ಕಾರದಿಂದ ಯಾವುದೇ ಸ್ಪಷ್ಟ ಪರಿಹಾರ ಕ್ರಮಗಳಿಲ್ಲ. ಆದ್ದರಿಂದ ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿ ತಕ್ಷಣ ಮಧ್ಯಪ್ರವೇಶಿಸಿ ಸಹಾಯಧನ ಘೋಷಣೆ ಮಾಡಬೇಕು” ಎಂದು ಕೋರಿದ್ದಾರೆ.

ಈ ವೇಳೆ ಅವರು ಕೇಂದ್ರ ಸರ್ಕಾರದ ತುರ್ತು ನಿಧಿ ಅಥವಾ ವಿಪತ್ತು ನಿರ್ವಹಣಾ ನಿಧಿಯಿಂದ ನೆರವು ನೀಡಲು, ಹಾಗೂ ನಷ್ಟ ಪತ್ತೆಹಚ್ಚಲು ಕೇಂದ್ರ ತಂಡವನ್ನು ಕಳುಹಿಸುವಂತೆ ವಿನಂತಿಸಿದ್ದಾರೆ.

ಪ್ರವಾಹದಿಂದ ತತ್ತರಿಸಿದ ಉತ್ತರ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಸಹಾಯ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ರೈತರ ಬೆಳೆ ನಷ್ಟವೂ ಅಪಾರವಾಗಿದೆ.

The post ಉತ್ತರ ಕರ್ನಾಟಕ ಪ್ರವಾಹದ ನೆರವಿಗೆ ಕೇಂದ್ರಕ್ಕೆ ಯತ್ನಾಳ್ ಮನವಿ appeared first on Samyukta Karnataka.

ಬೆಳಗಾವಿ: ಪಂಚಮಸಾಲಿ ಟ್ರಸ್ಟ್ ಕಳ್ಳರ ಕುಟುಂಬ – ಯತ್ನಾಳ್
ಹುಕ್ಕೇರಿ: ಕೂಡಲಸಂಗಮ ಪಂಚಮಸಾಲಿ ಪೀಠಕ್ಕೂ ಮತ್ತು ಟ್ರಸ್ಟಿಗೂ ಸಂಬಂಧವಿಲ್ಲ. ಟ್ರಸ್ಟ್‌ನವರು ಉಚ್ಚಾಟನೆ ಮಾಡಿದರೂ ಪೀಠಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳೇ ಜಗದ್ಗುರು ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿಗಳು ಆಸ್ತಿ ಮಾಡಿದ್ದಾರೆ ಎಂಬುದು ಸುಳ್ಳು. ಆಸ್ತಿಗೂ ಸ್ವಾಮೀಜಿಯವರಿಗೂ ಸಂಬಂಧವಿಲ್ಲ. ಅದು ಟ್ರಸ್ಟಿನ ಆಸ್ತಿ ಆಗಿದ್ದು ಸ್ವಾಮೀಜಿಯವರದು ಎಂಬ ದಾಖಲೆಗಳಿದ್ದರೆ ಅದನ್ನು ಬಿಡುಗಡೆಗೊಳಿಸಲಿ. ಪಂಚಮಸಾಲಿ ಸಮಾಜದ ಟ್ರಸ್ಟ್ ಮಾಡಿಕೊಂಡವರದು ಒಂದು ಕಳ್ಳರ ಕುಟುಂಬ ಎಂದು ಛೇಡಿಸಿದರು.

ಸಂವಿಧಾನದಲ್ಲಿ ಲಿಂಗಾಯತ ಮತ್ತು ವೀರಶೈವ ಎಂಬ ಧರ್ಮಕ್ಕೆ ಮಾನ್ಯತೆ ಇಲ್ಲ. ಅದಕ್ಕಾಗಿ ಹಿಂದೂ ಪದ ಬಳಸಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದ್ವಂದ್ವದಲ್ಲಿದ್ದಾರೆ. ರಾಹುಲ್ ಗಾಂಧಿ ಮುಸ್ಲಿಂ ರಾಷ್ಟ್ರವೆಂದರೆ, ಸೋನಿಯಾ ಗಾಂಧಿ ಕ್ರಿಶ್ಚಿಯನ್ ರಾಷ್ಟ್ರ ಮಾಡಲು ಹೇಳುತ್ತಿದ್ದಾರೆ. ಇದರಿಂದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಎರಡರ ನಡುವಿನ ಗೊಂದಲದಲ್ಲಿ ಸಿದ್ದರಾಮಯ್ಯ ಅವರು ಸಿಕ್ಕೆ ಹಾಕಿಕೊಂಡಿದ್ದಾರೆಂದು ವ್ಯಂಗ್ಯವಾಡಿದರು.

The post ಬೆಳಗಾವಿ: ಪಂಚಮಸಾಲಿ ಟ್ರಸ್ಟ್ ಕಳ್ಳರ ಕುಟುಂಬ – ಯತ್ನಾಳ್ appeared first on Samyukta Karnataka.

ದಾವಣಗೆರೆ: ಯತ್ನಾಳ್ ಅಧಿಕಾರಕ್ಕೆ ಬಂದರೆ ಕೊಡುವ ಭಾಗ್ಯ ಬಹಿರಂಗ!
ದಾವಣಗೆರೆ: ರಾಜ್ಯದಲ್ಲಿ ಶೇಕಡ 90ರಷ್ಟು ಮಸಿದಿಗಳು ಕಾನೂನುಬಾಹಿರವಾಗಿದ್ದು, ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಇವುಗಳನ್ನು ಸ್ವಚ್ಛ ಮಾಡಲು ಜೆಸಿಬಿ ಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಮರಡಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಮುಸ್ಲಿಂರ ತುಷ್ಠಿಕರಣದಲ್ಲಿಯೇ ಕಾಲಹರಣ ಮಾಡುತ್ತಿದೆ. ಹಿಂದೂ ಮತ್ತು ಮುಸ್ಲಿಂರಿಗೆ ತಾರತಮ್ಯದ ಕಾನೂನು ಯೋಜನೆಗಳನ್ನು ಅನುಸರಿಸುತ್ತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಕಾನೂನು ಬಾಹಿರವಾಗಿ ನಡೆಯುತ್ತಿರುವ ಮಸೀದಿಗಳನ್ನು ಜೆಸಿಬಿ ಮುಖಾಂತರ ಸ್ವಚ್ಛಗೊಳಿಸುತ್ತೇವೆ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತದಂತೆ ಕರ್ನಾಟಕದಲ್ಲಿ ಜೆಸಿಬಿಯಿಂದ ಎಲ್ಲ ಸ್ವಚ್ಛ ಆಗಲಿದೆ. ಅಕ್ರಮ ಮಸೀದಿ ಸ್ವಚ್ಚ ಮಾಡಲು ಜೆಸಿಬಿ ಬೇಕು, ಎಲ್ಲ ಕಡೆ ಜೆಸಿಬಿ ಸ್ವಾಗತ ಮಾಡುತ್ತಿದ್ದಾರೆ. ನಮ್ಮ ಪ್ರಮಾಣ ವಚನ ನಂತರ ಜಿಸಿಬಿ ಮೂಲಕ ಬೆಂಗಳೂರಿನಲ್ಲಿ ಮೆರವಣಿಗೆ ಎಂದರು.

ಶಾಮನೂರು ಕುಟುಂಬದ ವಿರುದ್ಧ ಯತ್ನಾಳ್‌ ಕಿಡಿ: ದಾವಣಗೆರೆ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.‌ ಮಲ್ಲಿಕಾರ್ಜುನ ಅವರು ಮಸೀದಿ ಮುಂದೆಯೇ ಫ್ಲೆಕ್ಸ್ ಹಾಕಬೇಕಾ ಅಂತಾ ಹೇಳಿಕೆ ನೀಡಿದ್ದನ್ನು ನೋಡಿದ್ದೇನೆ. ಮುಸ್ಲಿಮರು ಮಾತ್ರ ಇವರಿಗೆ ವೋಟ್ ಹಾಕಿ ಗೆಲ್ಲಿಸಿದ್ದಾರಾ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಶಾಮನೂರು ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರು. ಬರುವ 2028ರ ಚುನಾವಣೆಯಲ್ಲಿ ಮುಸ್ಲಿಂರು ಮಾತ್ರ ಶಾಮನೂರು ಕಂಪನಿಗೆ ಮತ ಹಾಕ್ತಾರೆ. ಉಳಿದವರು ಬಿಜೆಪಿ, ಹಿಂದೂತ್ವದ ಪಕ್ಷಕ್ಕೆ ಮತ ಹಾಕ್ತಾರೆ ಎಂದು ಟಾಂಗ್‌ ಕೊಟ್ಟರು.

ಕೇಂದ್ರಕ್ಕೆ ಹೋಗಲ್ಲ: ನಾನಾಗಲಿ, ಈಶ್ವರಪ್ಪ ಆಗಲಿ ಕೇಂದ್ರಕ್ಕೆ ಹೋಗಲ್ಲ. ಇಂಗ್ಲಿಷ್ ಬರೋರು ಕೇಂದ್ರಕ್ಕೆ ಹೋಗಲಿ, ನಮಗೆ ಇಂಗ್ಲಿಷ್ ಬರಲ್ಲ. ನಾವು ಇಲ್ಲೇ ತಾಯಿ ಭುವನೇಶ್ವರಿ ಸೇವೆ ಮಾಡುತ್ತಾ ಇರುತ್ತೇವೆ ಎಂದು ಸ್ಪಷ್ಟನೆ ನೀಡಿದರು. ನಾನು ಯಾವುದೇ ಪಕ್ಷಕ್ಕೆ ಹೋಗಲ್ಲ, ಬೇರೆ ಪಕ್ಷಕ್ಕೆ ಹೋಗೋ ಅವಶ್ಯಕತೆ ಇಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಸತ್ತರೂ ನಾನು ಕಾಂಗ್ರೆಸ್, ಜೆಡಿಎಸ್ ಸೇರಲ್ಲ, ನಾವು ಮುಂದೆ ಏನು ಮಾಡಬೇಕೆಂದು ನಾನು ಈಶ್ವರಪ್ಪ ನಿರ್ಣಯ ಮಾಡಿದ್ದೇವೆ ಎಂದರು.

ನಮ್ಮ ಗಣಪತಿ ಮೇಲೆ ಕಲ್ಲು ಎಸೆಯುತ್ತಾರೆ. ಮಕ್ಕಳು ಉಗೀತಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮ ಮಸೀದಿಗಳ ಎದುರು ಕುಣಿಬೇಡಿ ಅಂತಾರೆ. ಇವರು ಕಟ್ಟಿದ ಶೇಕಡ 99ರಷ್ಟು ಮಸೀದಿಗಳು ಕಾನೂನು ಬಾಹಿರ ಇವೆ. ಉತ್ತರ ಪ್ರದೇಶದಲ್ಲಿ ಜೆಸಿಬಿ ಬಂದಂವತೆ ನಮ್ಮ ಸರ್ಕಾರ ಬಂದರೂ ಜೆಸಿಬಿ ಬರುತ್ತೆ. ಎಲ್ಲಾ ಕಡೆ ಜೆಸಿಬಿನೇ ಎಂದು ಗುಡುಗಿದರು.

The post ದಾವಣಗೆರೆ: ಯತ್ನಾಳ್ ಅಧಿಕಾರಕ್ಕೆ ಬಂದರೆ ಕೊಡುವ ಭಾಗ್ಯ ಬಹಿರಂಗ! appeared first on Samyukta Karnataka.

ಸಾವಕಾಶವಾಗಿ ಹೊರಟ ಇಳಕಲ್ ಕಾ ಮಹಾರಾಜ ಗಣೇಶ
ಇಳಕಲ್ ‌: ಇಲ್ಲಿನ ಹೊಸಪೇಟೆ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಇಳಕಲ್ ಕಾ ಮಹಾರಾಜ ಗಣೇಶನ ವಿಸರ್ಜನೆ ಮಂಗಳವಾರದಂದು ಸಾವಕಾಶವಾಗಿ ಆರಂಭವಾಯಿತು.

ಸಂಯೋಜಕರು ಮಧ್ಯಾಹ್ನ 12 ಗಂಟೆಗೆ ವಿಸರ್ಜನಾ ಮೆರವಣಿಗೆ ಪ್ರಾರಂಭಿಸಿದರು ಆದರೆ ಅದರ ಆಮೆ ನಡಿಗೆಯ ಮುಂದೆ ಮಹಾರಾಷ್ಟ್ರ ರಾಜ್ಯದ ಡೊಳ್ಳು ಗೊಂಬೆ ರೂಪಕಗಳು ಪಟಾಕಿಯ ಸಿಡಿತ ಯುವಕರ ಉನ್ಮಾದದ ನೃತ್ಯ ಗಣೇಶನು ನಿಂತಿದ್ದ ಟ್ರ್ಯಾಕ್ಟರ್ ಮುಂದೆ ಚಲಿಸದಂತೆ ಮಾಡಿದ್ದವು

‌‌‌‌ಗಣೇಶ ಪ್ರತಿಷ್ಠಾಪನೆಯ ಸ್ಥಳದ ಅನತಿ ದೂರದಲ್ಲಿ ಮಸೀದೆಯೊಂದು ಇದ್ದು ಅಲ್ಲಿ ಯಾವುದೇ ರೀತಿಯ ಗಲಾಟೆ ಆಗಬಾರದು ಎಂಬ ಉದ್ದೇಶದಿಂದ ಪೋಲಿಸರು ಅಲ್ಲಿ ಸಾಕಷ್ಟು ಪೋಲಿಸರನ್ನು ನಿಯೋಜನೆ ಮಾಡುವ ಜೊತೆಗೆ ಎರಡು ಡಿಐಆರ್ ವಾಹನಗಳನ್ನು ನಿಲ್ಲಿಸಿದ್ದರು.

ಯುವಕರ ಹಾರಾಟ ಚೀರಾಟ ಖುಷಿಯ ಚೆಲ್ಲಾಟದ ನಡುವೆ  ಗಣೇಶನ ಮೆರವಣಿಗೆ ಡಿಜೆಗಳಿಗೆ ನಿರ್ಬಂಧ ಇದ್ದರೂ ಅದರ ಹೃದಯ ಬಡಿಯುವ ಸೌಂಡಿನೊಂದಿಗೆ ಮುಂದೆ ಸಾಗಿತ್ತು .ಡಿಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ನೇತೃತ್ವದಲ್ಲಿ ಸಿಪಿಐ ಸುನೀಲ ಸವದಿ, ಶಹರ್ ಪೋಲಿಸ್ ಪಿಎಸ್ ಐ ಮಂಜುನಾಥ ಪಾಟೀಲ ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.

ಎಸ್ ಪಿ ಭೇಟಿ: ಇಳಕಲ್ ಕಾ ಮಹಾರಾಜ ಗಣೇಶ ವಿಸರ್ಜನೆ ಸ್ಥಳಕ್ಕೆ ಬಾಗಲಕೋಟ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಭೇಟಿ ನೀಡಿದರು ಯಾವುದೇ ರೀತಿಯ ಗದ್ದಲ ಗೊಂದಲ ಆಗದಂತೆ ಸಿಬ್ಬಂದಿಗೆ ಸೂಚನೆ ನೀಡಿದರು.

ಯತ್ನಾಳ ಆಗಮನ: ಗಣೇಶ ವಿಸರ್ಜನೆಯ ಮಂಗಳವಾರದಂದು ಮಧ್ಯಾಹ್ನ ಒಂದು ಗಂಟೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಳಕಲ್‌ಗೆ ಭೇಟಿ ನೀಡಿದರು ಅವರ ಆಗಮನದ ಸುದ್ದಿ ಹಲವೆಡೆ ಹರಡಿದರೂ ಅವರು ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರ ಅವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿಯೇ ಊಟ ಮಾಡಿಕೊಂಡು ಅವರ ಜೊತೆಗೆ ಗಂಗಾವತಿಯತ್ತ ಪಯಣ ಬೆಳೆಸಿದ್ದರು.

The post ಸಾವಕಾಶವಾಗಿ ಹೊರಟ ಇಳಕಲ್ ಕಾ ಮಹಾರಾಜ ಗಣೇಶ appeared first on Samyukta Karnataka.