#ArtificialIntelligence Archives - Samyukta Karnataka

ಯಾವಾಗ ಬೇಕಾದರೂ ಹೋಗಬಹುದು ಕೆಲಸ; ಐಟಿ ಉದ್ಯಮದಲ್ಲಿ ನಡುಕ! ಡೆಲ್‌ನಿಂದ ಸಾವಿರಾರು ಉದ್ಯೋಗಿಗಳ ವಜಾ?
ಕೋವಿಡ್‌ನಂತಹ ಜಾಗತಿಕ ಸಂಕಷ್ಟದಿಂದ ಚೇತರಿಸಿಕೊಂಡು ಹೊಸ ಭರವಸೆಯೊಂದಿಗೆ ಮುನ್ನಡೆಯುತ್ತಿದ್ದ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಈಗ ಕೃತಕ ಬುದ್ಧಿಮತ್ತೆ ಅಂದರೆ AI ಎಂಬ ಹೊಸ ಸವಾಲು ಎದುರಾಗಿದೆ. ಇಂದು ತಂತ್ರಜ್ಞಾನದ ವೇಗ ಎಷ್ಟು ಹೆಚ್ಚಿದೆಯೆಂದರೆ, ಕೆಲಸದ ಭದ್ರತೆಯ ಬಗ್ಗೆ ಯಾರಿಗೂ ಖಾತರಿ ಇಲ್ಲದಂತಾಗಿದೆ. Layoffs.fyi ಸಂಗ್ರಹಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, 2026ರ ಆರಂಭದಿಂದ ಈವರೆಗೆ ಸುಮಾರು 66 ಟೆಕ್ ಕಂಪನಿಗಳು 39 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿವೆ. ಈ ಸಾಲಿನಲ್ಲಿ ಈಗ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಜಾಗತಿಕ ಟೆಕ್ ದೈತ್ಯ ‘ಡೆಲ್’.

ಡೆಲ್ ಕಂಪನಿಯು ಈ ವರ್ಷದ ಆರಂಭದಿಂದ ಈವರೆಗೆ ಅಂದಾಜು 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ತನ್ನ ಒಟ್ಟು ಕಾರ್ಯಪಡೆಯ ಸುಮಾರು 10 ಪ್ರತಿಶತದಷ್ಟು ಭಾಗವನ್ನು ಕಡಿತಗೊಳಿಸಿರುವ ಕಂಪನಿಯು, ಇದನ್ನು ‘ಶಿಸ್ತುಬದ್ಧ ವೆಚ್ಚ ನಿರ್ವಹಣೆ’ ಎಂದು ಕರೆದಿದೆ. ಜನವರಿ 2025 ರಲ್ಲಿ 1 ಲಕ್ಷದ 8 ಸಾವಿರದಷ್ಟಿದ್ದ ಉದ್ಯೋಗಿಗಳ ಸಂಖ್ಯೆ, ಇಂದು ಕೇವಲ 97 ಸಾವಿರಕ್ಕೆ ಇಳಿದಿರುವುದು ಐಟಿ ವಲಯದ ಆತಂಕವನ್ನು ಇಮ್ಮಡಿಗೊಳಿಸಿದೆ. ಗಮನಾರ್ಹ ವಿಷಯವೆಂದರೆ, ಕಂಪನಿಯು ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಯಾವುದೇ ದೊಡ್ಡ ಸಾರ್ವಜನಿಕ ಘೋಷಣೆ ಮಾಡದಿದ್ದರೂ, ಕೆಲಸ ಕಳೆದುಕೊಂಡವರ ಪರಿಹಾರಕ್ಕಾಗಿ ಅಥವಾ ‘ಸೆವೆರೆನ್ಸ್ ಪೇ’ಗಾಗಿ ಬರೋಬ್ಬರಿ 569 ಮಿಲಿಯನ್ ಡಾಲರ್ ಹಣವನ್ನು ವ್ಯಯಿಸಿದೆ ಎಂದು ಅದರ ಆರ್ಥಿಕ ಫೈಲಿಂಗ್‌ಗಳು ಬಹಿರಂಗಪಡಿಸಿವೆ.

ಈ ಉದ್ಯೋಗ ಕಡಿತದ ಹಿಂದೆ ಕೇವಲ ಲಾಭದ ಉದ್ದೇಶವಿಲ್ಲ, ಬದಲಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಅನಿವಾರ್ಯತೆ ಇದೆ. ಕಂಪನಿಯು ಹೊಸ ನೇಮಕಾತಿಗಳನ್ನು ಮಿತಿಗೊಳಿಸಿದ್ದು, ಮನುಷ್ಯರ ಬದಲಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಎಂಟರ್‌ಪ್ರೈಸ್ ಮೂಲಸೌಕರ್ಯಗಳ ಮೇಲೆ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಮಾರುಕಟ್ಟೆಯ ಪೈಪೋಟಿಯಲ್ಲಿ ಉಳಿಯಬೇಕಾದರೆ ಹೂಡಿಕೆಗಳನ್ನು ಕಾರ್ಯತಂತ್ರವಾಗಿ ಮರುಹಂಚಿಕೆ ಮಾಡುವುದು ಅಗತ್ಯ ಎಂದು ಕಂಪನಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಡೆಲ್ ಕಂಪನಿಯಲ್ಲಿ ಈ ಉದ್ಯೋಗಿಗಳ ಕುಸಿತವು ಕೇವಲ ಇಂದಿನದ್ದಲ್ಲ, ಇದು 2023 ರಿಂದಲೂ ನಡೆಯುತ್ತಿರುವ ಒಂದು ಸುದೀರ್ಘ ಪ್ರವೃತ್ತಿಯಾಗಿದೆ. 2023 ರಲ್ಲಿ 1 ಲಕ್ಷದ 33 ಸಾವಿರದಷ್ಟಿದ್ದ ಉದ್ಯೋಗಿಗಳು ಇಂದು 97 ಸಾವಿರಕ್ಕೆ ತಲುಪಿದ್ದಾರೆ. ಅಂದರೆ ಕಳೆದ ಮೂರು ವರ್ಷಗಳಲ್ಲಿ ಕಂಪನಿಯು ತನ್ನ ಒಟ್ಟು ಉದ್ಯೋಗಿಗಳಲ್ಲಿ ಸುಮಾರು 27 ಪ್ರತಿಶತದಷ್ಟು ಮಂದಿಯನ್ನು ಕೈಬಿಟ್ಟಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಡೆಲ್ ಕಚೇರಿಗಳ ಮೇಲೆಯೂ ಇದರ ಪ್ರಭಾವ ಬೀರಿದೆ. ಒಟ್ಟಾರೆಯಾಗಿ, ಸಾಫ್ಟ್‌ವೇರ್ ಕ್ಷೇತ್ರದಲ್ಲಿ AI ಕ್ರಾಂತಿಯು ಹಳೆಯ ಕೆಲಸದ ವಿಧಾನಗಳನ್ನು ಬದಲಿಸುತ್ತಿರುವ ಬೆನ್ನಲ್ಲೇ, ನುರಿತ ಉದ್ಯೋಗಿಗಳು ಕೂಡ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಯಲ್ಲಿ ಕಾಲ ಕಳೆಯುವಂತಾಗಿದೆ.

The post ಯಾವಾಗ ಬೇಕಾದರೂ ಹೋಗಬಹುದು ಕೆಲಸ; ಐಟಿ ಉದ್ಯಮದಲ್ಲಿ ನಡುಕ! ಡೆಲ್‌ನಿಂದ ಸಾವಿರಾರು ಉದ್ಯೋಗಿಗಳ ವಜಾ? appeared first on Samyukta Karnataka.