ಐಪಿಎಲ್ ಫೈನಲ್ ಮ್ಯಾಚ್‌ನಲ್ಲಿ ಅನ್ಯಾಯ
ಬೆಂಗಳೂರು: ಗುಜರಾತ್‌ನವರು ರಾಜಕೀಯ ಪ್ರಭಾವ ಬೀರಿ ನಮ್ಮಿಂದ ಐಪಿಎಲ್ ಫೈನಲ್ ಮ್ಯಾಚ್ ಕಿತ್ತುಕೊಂಡಿದ್ದಾರೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಈ ರೀತಿ ಕಿತ್ತುಕೊಳ್ಳಬಾರದು ಎಂಬ ದೃಷ್ಟಿಯಿಂದ ಏನೇನು ಅಗತ್ಯತವಿದೆಯೋ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದರು. ಬೆಂಗಳೂರಿನ ಚಿನ್ನಾಸ್ವಾಮಿ ಸ್ಟೇಡಿಯಂಗೆ ಅನ್ಯಾಯವಾಗಿದೆ. ನಮ್ಮಲ್ಲಿರುವ ಯುವಕರಿಗೆ ಅನ್ಯಾಯವಾಗಿದೆ. ನಮ್ಮ ಆರ್‌ಸಿಬಿ ಕರ್ನಾಟಕದ ಹೆಸರಲ್ಲಿ, ನಮ್ಮ ರಾಜ್ಯದವರು ಐಪಿಎಲ್‌ನಲ್ಲಿ ಬಹಳ ಚೆನ್ನಾಗಿ ಆಡಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ ಎಂದರು.
Copy and paste this URL into your WordPress site to embed
Copy and paste this code into your site to embed