ಕಾಮನ್‌ವೆಲ್ತ್ ಗೇಮ್ಸ್‌: ಜ್ಞಾನೇಶ್ವರಿ ಯಾದವ್‌ಗೆ ಬೆಳ್ಳಿ, ಭಾರತಕ್ಕೆ 5ನೇ ಪದಕ

ಗ್ಲಾಸ್ಗೊ: ಕಾಮನ್‌ವೆಲ್ತ್ ಗೇಮ್ಸ್‌–2026ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಸೋಮವಾರ ನಡೆದ ಮಹಿಳೆಯರ 53 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಈ ಬಾರಿಯ ಕ್ರೀಡಾಕೂಟದಲ್ಲಿ ತನ್ನ 5ನೇ ಪದಕವನ್ನು ಖಾತೆಗೆ ಸೇರಿಸಿಕೊಂಡಿದೆ. ಫೈನಲ್‌ನಲ್ಲಿ ಆರಂಭದಿಂದಲೇ ಸ್ಥಿರ ಪ್ರದರ್ಶನ ನೀಡಿದ ಜ್ಞಾನೇಶ್ವರಿ, ಸ್ಟ್ರಾಚ್ ವಿಭಾಗದಲ್ಲಿ ಕ್ರಮವಾಗಿ 82 ಕೆಜಿ, 85 ಕೆಜಿ ಹಾಗೂ 88 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಮೂರು ಪ್ರಯತ್ನಗಳಲ್ಲೂ ಯಶಸ್ಸು ಕಂಡ ಅವರು … Continue reading ಕಾಮನ್‌ವೆಲ್ತ್ ಗೇಮ್ಸ್‌: ಜ್ಞಾನೇಶ್ವರಿ ಯಾದವ್‌ಗೆ ಬೆಳ್ಳಿ, ಭಾರತಕ್ಕೆ 5ನೇ ಪದಕ