ಕಬ್ಬಿನ ದರಕ್ಕೆ ಪಟ್ಟು: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ರೈತರು

ಬೆಳಗಾವಿ: ‘ಹೊರಗೆ ಐದೂವರೆ ಸಾವಿರ ಎನ್ನುತ್ತೀರಿ; ಒಳಗೆ ನಾಲ್ಕೂವರೆ ಸಾವಿರ ಎನ್ನುತ್ತೀರಾ?’ ಎಂಬ ಪ್ರಶ್ನೆ ಕಬ್ಬು ಬೆಳೆಗಾರರ ಸಭಾಂಗಣದಲ್ಲಿ ರೈತ ಬಣಗಳ ನಡುವಿನ ಹೊಡೆದಾಟಕ್ಕೆ ತಿರುಗಿತು. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಬೇಕಿದ್ದ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಹಾಗೂ ಚೂನಪ್ಪ ಪೂಜಾರಿ ಬಣಗಳ ರೈತರು ಕೈಕೈ ಮಿಲಾಯಿಸಿದರು. ಕಬ್ಬಿಗೆ ದರ ಕೇಳಲು ಬಂದವರೇ ಪರಸ್ಪರ ಮುಗಿಬಿದ್ದಾಗ ಸಭಾಂಗಣದಲ್ಲಿ ಗೊಂದಲ ಉಂಟಾಯಿತು. ಮೇಜಿನ ಮೇಲೆ ಕುಡಿಯುವ ನೀರಿಗಾಗಿ ಇಟ್ಟಿದ್ದ ಗಾಜಿನ ಲೋಟವನ್ನೂ ಎಸೆಯಲಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರು … Continue reading ಕಬ್ಬಿನ ದರಕ್ಕೆ ಪಟ್ಟು: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ರೈತರು