ಸ್ಟಿಂಗ್ ಆಪರೇಶನ್ ಹಿಂದೆ ದೊಡ್ಡ ಜಾಲ; ಸಿಬಿಐ ತನಿಖೆಗೆ ಹೊರಟ್ಟಿ ಆಗ್ರಹ

ಹುಬ್ಬಳ್ಳಿ: ಸ್ಟಿಂಗ್ ಆಪರೇಶನ್ ಪ್ರಕರಣದ ಹಿಂದೆ ದೊಡ್ಡ ಜಾಲವಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ, ತಪ್ಪಿತಸ್ಥರು ಎಂತಹ ಪ್ರಭಾವಿಗಳಿದ್ದರೂ ಶಿಕ್ಷಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ಮತ್ತು ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಶನ್ ನಡೆಸುವ ಇಂತಹ ಬೆಳವಣಿಗೆಗಳು ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತವೆ. ಇಂದಿನ ರಾಜಕಾರಣದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಬೇಕು. ಸತ್ಯ ಹೊರಬರಬೇಕಾದರೆ ಸಿಬಿಐ ತನಿಖೆ … Continue reading ಸ್ಟಿಂಗ್ ಆಪರೇಶನ್ ಹಿಂದೆ ದೊಡ್ಡ ಜಾಲ; ಸಿಬಿಐ ತನಿಖೆಗೆ ಹೊರಟ್ಟಿ ಆಗ್ರಹ