ಬೆಳೆಗಾರರ ಸಂಕಷ್ಟ: ಪಿಎಂಗೆ ಸಿಎಂ ಪತ್ರ

ಬೆಂಗಳೂರು: ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಹಲವು ವಿಷಯಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದ್ದಾರೆ. ಈ ಪ್ರಮುಖ 5 ಅಂಶಗಳ ಕುರಿತು ಕೇಂದ್ರ ಸರ್ಕಾರವು ತತಕ್ಷಣ ಕ್ರಮ ವಹಿಸಿದಲ್ಲಿ ರಾಜ್ಯದ ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಯುವ ರೈತರ ಬದುಕಿಗೆ ಬಹುದೊಡ್ಡ ನಿರಾಳತೆಯನ್ನು ನೀಡಿದಂತಾಗುತ್ತದೆ ಎಂದಿದ್ದಾರೆ.