ಶ್ರೀ ಸತ್ಯಾತ್ಮತೀರ್ಥರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಶ್ರೀಗಳು, ಚಾಲಕ ಸೇರಿ ಮೂವರಿಗೆ ಗಾಯ, ಮೂವರೂ ಅಪಾಯದಿಂದ ಪಾರು

ಹುಬ್ಬಳ್ಳಿ : ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಪ್ರಯಾಣಿಸುತ್ತಿದ್ದ ಕಾರು ತಡಸ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ವಾಮೀಜಿಗಳ ಭುಜಕ್ಕೆ ಗಾಯವಾಗಿದ್ದು, ಚಾಲಕ ಸೇರಿ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ.ಶ್ರೀನಿವಾಸ ಜೋಶಿ, ಉತ್ತರಾದಿಮಠದ ಆಡಳಿತಾಧಿಕಾರಿಗಳು ಶ್ರೀಗಳ ಚಿಕಿತ್ಸಾ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಶ್ರೀಗಳ ಕಾರು ಅಪಘಾತವಾಗಿ ಶ್ರೀಗಳು ಗಾಯಗೊಂಡ ವಿಷಯ ತಿಳಿದು ನೂರಾರು ಭಕ್ತರು ಆಸ್ಪತ್ರೆ ಬಳಿ ಬಂದಿದ್ದು, ಶ್ರೀಮಠದ ಆಡಳಿತಾಧಿಕಾರಿಗಳು, ಶ್ರೀಗಳು ಆರಾಮಾಗಿದ್ದಾರೆ. … Continue reading ಶ್ರೀ ಸತ್ಯಾತ್ಮತೀರ್ಥರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಶ್ರೀಗಳು, ಚಾಲಕ ಸೇರಿ ಮೂವರಿಗೆ ಗಾಯ, ಮೂವರೂ ಅಪಾಯದಿಂದ ಪಾರು