ಮೊಟ್ಟೆಯಿಂದ ಹೊರಬಂದ ಬರೋಬ್ಬರಿ 16 ಎತ್ತುಗಳು!

ಮಂಗಳೂರು: ಮೊಟ್ಟೆ ಸಾಗಾಟದ ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ 16 ಎತ್ತುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೇರಳದ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಎತ್ತುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ಕೇರಳದ ಕಾಸರಗೋಡಿಗೆ ಎತ್ತುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಂಕನಾಡಿ ನಗರ ಠಾಣೆಯ ಪೊಲೀಸರು ಪಂಪ್‌ವೆಲ್ ಸಮೀಪದ ಉಜ್ಜೋಡಿಯಲ್ಲಿ ಕಂಟೈನರ್ ಲಾರಿಯನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಲಾರಿಯ ಹಿಂಭಾಗದಲ್ಲಿ ಮೊಟ್ಟೆಯ ಟ್ರೇಗಳನ್ನು ಜೋಡಿಸಿ, ಅದರ ಹಿಂದೆ 16 ಎತ್ತುಗಳನ್ನು … Continue reading ಮೊಟ್ಟೆಯಿಂದ ಹೊರಬಂದ ಬರೋಬ್ಬರಿ 16 ಎತ್ತುಗಳು!