5 ದಿನಗಳಲ್ಲಿ 4 ಮಕ್ಕಳಿಗೆ ಜನ್ಮ: ಯಶಸ್ವಿ ಹೆರಿಗೆ ನಡೆಸಿದ ವೈದ್ಯರು

ಲಖನೌ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ 31 ವರ್ಷದ ಮಹಿಳೆಯೊಬ್ಬರು ಐದು ದಿನಗಳ ಅವಧಿಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ವೈದ್ಯಕೀಯ ವಲಯದಲ್ಲಿ ಗಮನ ಸೆಳೆದಿದೆ. ಇನ್ನೂ ವಿಶೇಷವೆಂದರೆ, ನಾಲ್ಕು ಮಕ್ಕಳೂ ಸಾಮಾನ್ಯ ಹೆರಿಗೆಯ ಮೂಲಕ ಜನಿಸಿರುವುದು ವೈದ್ಯರನ್ನೇ ಅಚ್ಚರಿಗೆ ಗುರಿಮಾಡಿದೆ. ಅಮಿನಾ ಎಂಬ ಮಹಿಳೆ ಮೊರಾದಾಬಾದ್‌ನ ತೀರ್ಥಂಕರ್ ಮಹಾವೀರ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ನಾಲ್ಕು ನವಜಾತ ಶಿಶುಗಳೂ ವೈದ್ಯಕೀಯ … Continue reading 5 ದಿನಗಳಲ್ಲಿ 4 ಮಕ್ಕಳಿಗೆ ಜನ್ಮ: ಯಶಸ್ವಿ ಹೆರಿಗೆ ನಡೆಸಿದ ವೈದ್ಯರು