RSS ಪಥಸಂಚಲನ ವಿವಾದ: ಪ್ರತಿವರ್ಷ ಗೊಂದಲ ಬೇಡ ಎಂದ ಮದ್ರಾಸ್ ಹೈಕೋರ್ಟ್

ಚೆನ್ನೈ: ತಮಿಳುನಾಡಿನ ವಿವಿಧೆಡೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮಾರ್ಗ ಮೆರವಣಿಗೆ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ಕಲ್ಪಿಸುವಂತೆ ಸೂಚಿಸಿದೆ. ಅಕ್ಟೋಬರ್ 25ರಂದು ಉತ್ತರ ಜಿಲ್ಲೆಗಳಲ್ಲಿ ಹಾಗೂ ನವೆಂಬರ್ 1ರಂದು ದಕ್ಷಿಣ ಜಿಲ್ಲೆಗಳಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡಲಾಗಿದ್ದು, ಕಾರ್ಯಕ್ರಮದ ಸಮಯ, ಮಾರ್ಗ ಮತ್ತು ಸ್ಥಳಗಳನ್ನು ಅಕ್ಟೋಬರ್ 19ರೊಳಗೆ ಅಂತಿಮಗೊಳಿಸುವಂತೆ ಪೊಲೀಸರಿಗೆ ನ್ಯಾಯಮೂರ್ತಿ ವಿ. ಲಕ್ಷ್ಮಿನಾರಾಯಣನ್ ನಿರ್ದೇಶನ ನೀಡಿದ್ದಾರೆ. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಮೆರವಣಿಗೆಗಳಿಗೆ ಅನುಮತಿ ನಿರಾಕರಿಸಲು ಪೊಲೀಸರು ಈ ಹಿಂದೆ ನ್ಯಾಯಾಲಯಗಳು ಪರಿಶೀಲಿಸಿ ತಿರಸ್ಕರಿಸಿದ್ದ … Continue reading RSS ಪಥಸಂಚಲನ ವಿವಾದ: ಪ್ರತಿವರ್ಷ ಗೊಂದಲ ಬೇಡ ಎಂದ ಮದ್ರಾಸ್ ಹೈಕೋರ್ಟ್