ಡೀಸೆಲ್ ಉಳಿಸಲು ಸೈಕಲ್‌ನಲ್ಲಿಯೇ ಕೋರ್ಟ್‌ಗೆ ಬಂದ ನ್ಯಾಯಾಧೀಶ
ನವದೆಹಲಿ: ಪೆಟ್ರೋಲ್, ಡೀಸೆಲ್ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದು, ಪ್ರಧಾನಿ ಮನವಿಗೆ ಮಧ್ಯಪ್ರದೇಶದಲ್ಲಿ ಹೈಕೋರ್ಟ್ ನ್ಯಾಯಾಧೀಶ ಡಿ.ಡಿ. ಬನ್ಸಾಲ್ ಸ್ಪಂದಿಸಿ, ಕಾರಿನ ಬದಲು ಸೈಕಲ್‌ನಲ್ಲಿಯೇ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶ ಡಿ.ಡಿ.ಬನ್ಸಾಲ್ ಜಬಲ್‌ಪುರದಲ್ಲಿರುವ ಸಿವಿಲ್‌ಲೇನ್‌ನ ಅಧಿಕೃತ ನಿವಾಸದಿಂದ ಮೂರು ಕಿ.ಮೀ ದೂರ ಸೈಕಲ್‌ನಲ್ಲೇ ಕ್ರಮಿಸಿ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡರು. ಈ ಜನನಿಬಿಡ ರಸ್ತೆಯಲ್ಲಿ ಬನ್ಸಾಲ್ ಜೊತೆ ನ್ಯಾಯಾಲಯದ ನೌಕರರೂ ತಮ್ಮ ಬ್ಯಾಗ್ ಹಾಗೂ ಊಟದ ಬುತ್ತಿಯೊಂದಿಗೆ ಸೈಕಲ್‌ನಲ್ಲಿ ಪ್ರಯಾಣಿಸಿದರು.
Copy and paste this URL into your WordPress site to embed
Copy and paste this code into your site to embed