ವಿವಾದದ ನಡುವೆಯೇ ಬೆಟ್ಟದ ದೀಪಸ್ತಂಭದಲ್ಲಿ ಬೆಳಗಿದ ಜ್ಯೋತಿ

ಮಧುರೈ: ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ತಮಿಳುನಾಡಿನ ಮಧುರೈ ಸಮೀಪದ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮದಿಂದ ನೆರವೇರಿತು. ಬೆಟ್ಟದ ಮೇಲಿರುವ ಐತಿಹಾಸಿಕ ದೀಪತ್ತೂನ್ ಸ್ತಂಭದಲ್ಲಿ ಸಂಜೆ 5 ಗಂಟೆಗೆ ಪವಿತ್ರ ಜ್ಯೋತಿಯನ್ನು ಬೆಳಗಿಸಲಾಯಿತು. ಈ ಮೂಲಕ ದೀಪ ಬೆಳಗಿಸುವ ವಿಚಾರವಾಗಿ ಕೆಲ ದಿನಗಳಿಂದ ಸೃಷ್ಟಿಯಾಗಿದ್ದ ವಿವಾದದ ನಡುವೆಯೇ ಧಾರ್ಮಿಕ ವಿಧಿವಿಧಾನಗಳು ನಡೆದವು. ಸುಪ್ರೀಂ ಕೋರ್ಟ್ ಆದೇಶದಂತೆ ನಡೆದ ದೀಪಾರಾಧನೆ ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನ್ಯಾಯಾಂಗ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. … Continue reading ವಿವಾದದ ನಡುವೆಯೇ ಬೆಟ್ಟದ ದೀಪಸ್ತಂಭದಲ್ಲಿ ಬೆಳಗಿದ ಜ್ಯೋತಿ