Home ತಾಜಾ ಸುದ್ದಿ ಸಾಲಬಾದೆ: ರೈತ ಆತ್ಮಹತ್ಯೆ

ಸಾಲಬಾದೆ: ರೈತ ಆತ್ಮಹತ್ಯೆ

0

ಕುಷ್ಟಗಿ: ಸಾಲಬಾಧೆ ತಾಳಲಾರದೆ ಮಾನಸಿಕವಾಗಿ ಮನನೊಂದು ರೈತನೊಬ್ಬ ಗಿಡಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ ಘಟನೆ ಸಂಭವಿಸಿದೆ. ತಾಲೂಕಿನ ಬೋದೂರು ತಾಂಡಾದ ವಿಠಪ್ಪ ಗೋವಿಂದಪ್ಪ ಚೌವ್ಹಾಣ (62) ಎಂಬ ಮೃತ ದುರ್ದೈವಿ ಆಗಿದ್ದಾನೆ. ರೈತ ವಿಠಪ್ಪ 3 ಎಕರೆ 20 ಗುಂಟೆ ಜಮೀನು ಹೊಂದಿದ್ದಾನೆ. ಆದರೆ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಬೇಕೆಂಬ ಉದ್ದೇಶದಿಂದಾಗಿ ಕೈಗಡ ಸೇರಿದಂತೆ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಟ್ರಾಕ್ಟರ್ ಖರೀದಿಸಿದ್ದಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ಕೈಕೊಟ್ಟಿರುವುದರಿಂದ ದಿಕ್ಕು ತೋಚದೆ ಸಾಲ ಮಾಡಿದ್ದು ಸಾಲವನ್ನು ಮರುಪಾವತಿ ಮಾಡಲು ಆಗದ ಕಾರಣ ಜೀವನದಲ್ಲಿ ಜಿಗುಪ್ಪೆಗೊಂಡು ಗಿಡಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Exit mobile version