Home ತಾಜಾ ಸುದ್ದಿ ಸರ್ಕಾರ ಪತನದ ಪ್ರಶ್ನೆಯೇ ಇಲ್ಲ

ಸರ್ಕಾರ ಪತನದ ಪ್ರಶ್ನೆಯೇ ಇಲ್ಲ

0

ಬೆಂಗಳೂರು: ಏಕನಾಥ್ ಶಿಂಧೆ ಮಾತನಾಡಲು ಸ್ವತಂತ್ರರು, ಅವರು ಮಾತನಾಡುತ್ತಾರೆ, ಮಾತನಾಡಲಿ. ಆದರೆ ನಮ್ಮ ಸರ್ಕಾರ ಪತನದ ಪ್ರಶ್ನೆಯೇ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ ರಾಜಕೀಯ ಬೇರೆ, ಅದನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಲು ಬರುವುದಿಲ್ಲ ಎಂದು ತಿರುಗೇಟು ಕೊಟ್ಟ ಅವರು, ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಇರಲಿದೆ ಎಂದರು.
ಪಕ್ಷದೊಳಗೆ ಅಸಮಾಧಾನ ಇರೋದು ನಿಜ. ನಮ್ಮದೇನಿದ್ರೂ ಪಾರ್ಟಿ ಒಳಗಿನ ಅಸಮಾಧಾನ, ಪಾರ್ಟಿ ಹೊರಗೆ ನಮ್ಮ ಘರ್ಷಣೆಯಲ್ಲ. ಆದರೆ ಬಿಜೆಪಿಯವರು ಹೇಗೆ ಹೇಳುತ್ತಿದ್ದಾರೆ ಗೊತ್ತಿಲ್ಲ ಎಂದರು.

Exit mobile version