Home ಸುದ್ದಿ ದೇಶ ಸರ್ಕಾರದಿಂದ ವೆಬ್ ಸೀರೀಸ್‌ಗೆ ಪ್ರಶಸ್ತಿ

ಸರ್ಕಾರದಿಂದ ವೆಬ್ ಸೀರೀಸ್‌ಗೆ ಪ್ರಶಸ್ತಿ

0

ನವದೆಹಲಿ: ಭಾರತ ಸರ್ಕಾರವು ಅತ್ಯುತ್ತಮ ವೆಬ್ ಸೀರೀಸ್ ತಯಾರಕರಿಗೆ ಈ ವರ್ಷದಿಂದಲೇ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸಚಿವ ಅನುರಾಗ ಠಾಕೂರ್ ತಿಳಿಸಿದ್ದಾರೆ. ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ವೆಬ್ ಸರಣಿ’ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿದ್ದಾರೆ. ಇದರಿಂದ ವೆಬ್ ಸರಣಿ ನಿರ್ಮಾಣ ಮಾಡುವವರಿಗೆ ಪ್ರೋತ್ಸಾಹ ಸಿಕ್ಕಂತಾಗಲಿದೆ.

Exit mobile version