Home ತಾಜಾ ಸುದ್ದಿ ‘ಬೃಂಗಾ’ ಎಂಬ ಹೆಣ್ಣು ಸಿಂಹ ದತ್ತು ಪಡೆದ ಜಾರಕಿಹೊಳಿ

‘ಬೃಂಗಾ’ ಎಂಬ ಹೆಣ್ಣು ಸಿಂಹ ದತ್ತು ಪಡೆದ ಜಾರಕಿಹೊಳಿ

0

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ 63ನೇ ಜನ್ಮದಿನ ಪ್ರಯುಕ್ತ, ಅವರ ಪುತ್ರ ರಾಹುಲ್ ಜಾರಕಿಹೊಳಿ ಬೆಳಗಾವಿ ಮೃಗಾಲಯದ ‘ಬೃಂಗಾ’ ಎಂಬ ಹೆಣ್ಣು ಸಿಂಹವನ್ನು ದತ್ತು ಪಡೆದಿದ್ದಾರೆ.
ಈ ಕುರಿತಂತೆ ಕಿತ್ತೂರ ರಾಣಿ ಚೆನ್ನಮ್ಮ ಮೃಗಾಲಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಇರುವ ‘ಬೃಂಗಾ’ ಎಂಬ ಸಿಂಹವನ್ನು ಒಂದು ವರ್ಷದ ಅವಧಿ ಅಂದರೆ 2025ರ ಜೂನ್ 1ರಿಂದ 2026ರ ಮೇ 31ರವರೆಗಿನ ಅವಧಿಗೆ ಸಿಂಹ ದತ್ತು ಪಡೆದಿದ್ದಾರೆ’ ಎಂದು ತಿಳಿಸಿದೆ.

Exit mobile version