Home ನಮ್ಮ ಜಿಲ್ಲೆ ಶಿಕಾರಿಪುರ: ಯುವಕನಿಗೆ ಚಾಕು ಇರಿತ

ಶಿಕಾರಿಪುರ: ಯುವಕನಿಗೆ ಚಾಕು ಇರಿತ

0

ಶಿವಮೊಗ್ಗ: ಶಿಕಾರಿಪುರದ ದೊಡ್ಡಪೇಟೆ ಭಾಗದಲ್ಲಿ ಅನ್ಯ ಕೋಮಿನ ಯುವಕನಿಗೆ ಬುದ್ದಿ ಮಾತು ಹೇಳಿದ ಹಿಂದೂ ಯುವಕನ ನಡೆಯನ್ನು ವಿರೋಧಿಸಿ ನಾಲ್ಕು ಜನರ ತಂಡವು ನಿನ್ನೆ ತಡರಾತ್ರಿ ಚಾಕುವಿನಿಂದ ಇರಿದು ಪ್ರಾಣಕ್ಕೆ ಕುತ್ತು ತಂದು ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿರುವ ಹಾಗೂ ರಾಜ್ಯ ಸರ್ಕಾರದ ತುಷ್ಟಿಕರಣ ರಾಜಕಾರಣ ಖಂಡಿಸಿ ಮತ್ತು ನಿರಂತರ ಹಿಂದೂ ವಿರೋಧಿ ನೀತಿಯನ್ನು ತೀವ್ರವಾಗಿ ವಿರೋಧಿಸಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ಮುಂಭಾಗ ಸಂಸದ ಬಿ.ವೈ. ರಾಘವೇಂದ್ರ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಗುರುಮೂರ್ತಿ,ಮುಖಂಡ ವಸಂತ ಗೌಡ, ಡಿ.ಎಲ್. ಬಸವರಾಜ, ಅಂಬಾರಗೋಪ್ಪ ಶೇಖರ್, ಎಸ್.ಎಸ್. ರಾಘವೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಟ್ಟಣದ ದೊಡ್ಡಪೇಟೆಯಲ್ಲಿ ಮಂಗಳವಾರ ರಾತ್ರಿ ವೇಗವಾಗಿ ಬೈಕ್ ಚಲಾಯಿಸಿದ್ದನ್ನು ಆಕ್ಷೇಪಿಸಿದ ವಿಚಾರ ವಾಗ್ವಾದಕ್ಕೆ ಕಾರಣವಾಗಿ ಯುವಕನಿಗೆ ಚಾಕು ಇರಿಯಲಾಗಿದೆ. ಇಲ್ಲಿನ ದೊಡ್ಡಪೇಟೆ ನಿವಾಸಿ, ಕುಮದ್ವತಿ ಕಾಲೇಜಿನಲ್ಲಿ ಕಂಪ್ಯೂಟರ್ ಆಪರೇಟರ್ ಸುಶೀಲ್ (23) ಚಾಕು ಇರಿತಕ್ಕೊಳಗಾದವರು.

Exit mobile version